ವಿವಾದಕ್ಕೆ ಸಿಲುಕಿದ 'ಪ್ರೇಮದ ಊರಲಿ' ನಟ ಶ್ರೀರಾಮ್; 'ಆಡಿರೋ ಮಾತಿಗೆ ತಪ್ಪು ಅರ್ಥ ಕಲ್ಪಿಸಬೇಡಿ' ಎಂದ 'ಸಂತು'

Published : Nov 10, 2026, 08:51 PM IST
Shreeraam

ಸಾರಾಂಶ

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶ್ರೀರಾಮ್, ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಪ್ರೇಕ್ಷಕರಿಗೆ ಸಲ್ಲಬೇಕು ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಒಂದು ಸಿನಿಮಾ ಗೆದ್ದ ಮಾತ್ರಕ್ಕೆ ಚಿತ್ರರಂಗವನ್ನು ಉದ್ಧಾರ ಮಾಡಿದ್ದೇವೆ ಎಂದು ಭಾವಿಸುವುದು ಸರಿಯಲ್ಲ ಎಂಬರ್ಥದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Premada Oorali actor Shreeraam clarification about his Statament: ‘ಪ್ರೇಮದ ಊರಲಿ’ ಗೆಲುವಿನ ಬೆನ್ನಲ್ಲೇ ವಿವಾದದಲ್ಲಿ ಸಿಲುಕಿದ ನಟ ಶ್ರೀರಾಮ್! ಹೇಳಿಕೆಗೆ ತಪ್ಪು ಅರ್ಥ ಕಲ್ಪಿಸಿದವರಿಗೆ ಖಡಕ್ ಉತ್ತರ

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಸಂಭ್ರಮ ಮನೆಮಾಡಿದೆ. ಈ ಚಿತ್ರದ ಮೂಲಕ ನಾಯಕ ನಟ ಶ್ರೀರಾಮ್ ಅವರಿಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ. ಪ್ರೇಕ್ಷಕರ ಮೆಚ್ಚುಗೆ ಹಾಗೂ ಉತ್ತಮ ಪ್ರತಿಕ್ರಿಯೆಯಿಂದ ಖುಷಿಯಾಗಿರುವ ಚಿತ್ರತಂಡಕ್ಕೆ ಇದೀಗ ಅನಿರೀಕ್ಷಿತ ವಿವಾದವೊಂದು ಎದುರಾಗಿದೆ. ಕಾರ್ಯಕ್ರಮವೊಂದರಲ್ಲಿ ಶ್ರೀರಾಮ್ ಆಡಿದ ಮಾತುಗಳೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿವೆ. ಆದರೆ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ನಟ ಇದೀಗ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶ್ರೀರಾಮ್, ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಪ್ರೇಕ್ಷಕರಿಗೆ ಸಲ್ಲಬೇಕು ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಒಂದು ಸಿನಿಮಾ ಗೆದ್ದ ಮಾತ್ರಕ್ಕೆ ಚಿತ್ರರಂಗವನ್ನು ಉದ್ಧಾರ ಮಾಡಿದ್ದೇವೆ ಎಂದು ಭಾವಿಸುವುದು ಸರಿಯಲ್ಲ ಎಂಬರ್ಥದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಣ್ಣಾವ್ರ ಕೊಡುಗೆಯನ್ನು ಸ್ಮರಿಸಿದ ಶ್ರೀರಾಮ್!

"ಒಂದು ಸಿನಿಮಾ ಗೆದ್ದರೆ ಸಾಲದು, ಹಲವು ಸಿನಿಮಾಗಳು ಗೆಲ್ಲಬೇಕು. ನಾವು ಬಂದು ಚಿತ್ರರಂಗವನ್ನು ಎತ್ತಿ ನಿಲ್ಲಿಸಿದ್ದೇವೆ ಎನ್ನುವುದು ತಪ್ಪು. ಅಣ್ಣಾವ್ರ ಕಾಲದಿಂದಲೇ ಕನ್ನಡ ಚಿತ್ರರಂಗ ದೊಡ್ಡ ಹೆಸರು ಮಾಡಿದೆ. ನಾವು ಈಗ ನಮ್ಮ ಕೈಲಾದ ಚಿಕ್ಕ ಅಳಿಲು ಸೇವೆಯನ್ನು ಮಾಡುತ್ತಿದ್ದೇವೆ" ಎಂದು ಶ್ರೀರಾಮ್ ಹೇಳಿದ್ದರು.

ತಮ್ಮ ಸಿನಿಮಾದ ಯಶಸ್ಸಿನ ನಡುವೆಯೂ ಯಾವುದೇ ಅಹಂ ತೋರದೆ, ಕನ್ನಡ ಚಿತ್ರರಂಗಕ್ಕೆ ಡಾ. ರಾಜ್‌ಕುಮಾರ್ ಅವರಂತಹ ದಿಗ್ಗಜರು ನೀಡಿದ ಕೊಡುಗೆಯನ್ನು ನೆನಪಿಸಿಕೊಂಡಿದ್ದರು. ಆದರೆ, ಅವರ ಈ ಮಾತುಗಳಿಗೆ ಕೆಲವರು ಬೇರೆಯದೇ ಅರ್ಥ ಕಲ್ಪಿಸಿದ್ದಾರೆ. ಶ್ರೀರಾಮ್ ಯಾರಿಗೋ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂಬ ರೀತಿಯಲ್ಲಿ ವಿಡಿಯೋ ತುಣುಕನ್ನು ಹಂಚಿಕೊಂಡು ಚರ್ಚೆ ಹುಟ್ಟುಹಾಕಿದ್ದಾರೆ.

ವಿಡಿಯೋ ಹಂಚಿಕೊಂಡು ಸ್ಪಷ್ಟನೆ ನೀಡಿದ ನಟ

ತಮ್ಮ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿರುವುದನ್ನು ಗಮನಿಸಿದ ಶ್ರೀರಾಮ್, ಇನ್‌ಸ್ಟಾಗ್ರಾಮ್‌ನಲ್ಲಿ ಸಂಪೂರ್ಣ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿದ್ದಾರೆ. ಅಲ್ಲದೆ, ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಪೂರ್ತಿ ವಿಡಿಯೋ ನೋಡುವಂತೆ ಅಭಿಮಾನಿಗಳು ಹಾಗೂ ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ.

ತಪ್ಪು ಹೆಡ್‌ಲೈನ್‌ನೊಂದಿಗೆ ಹರಿದಾಡುತ್ತಿದ್ದ ವಿಡಿಯೋಗೆ ಪ್ರತಿಕ್ರಿಯಿಸಿರುವ ಅವರು, "ನಾನು ಯಾರಿಗೂ ಟಾಂಗ್ ಕೊಟ್ಟಿಲ್ಲ, ಕೊಡಲೂಬಾರದು. ಅದು ಕೇವಲ ನನ್ನ ಬಗ್ಗೆ ಮತ್ತು ನನ್ನ ಸಿನಿಮಾದ ಬಗ್ಗೆ ಮಾತನಾಡಿದ ವಿಚಾರ ಅಷ್ಟೇ. ಇದು ಸಂಪೂರ್ಣ ವಿಡಿಯೋ ಅಲ್ಲ. ಅಣ್ಣಾವ್ರ ಬಗ್ಗೆ ನನಗಿರುವ ಪುಟ್ಟ ಅಭಿಮಾನದ ಮಾತು ಬಿಟ್ಟರೆ ಅದರಲ್ಲಿ ಬೇರೆ ಯಾವುದೇ ಅರ್ಥ ಇಲ್ಲ. ಆದರೂ ಈ ವಿಡಿಯೋ ತುಣುಕು ತಪ್ಪಾಗಿ ಕಂಡಿದ್ದರೆ ಕ್ಷಮೆ ಇರಲಿ" ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ, ‘ಪ್ರೇಮದ ಊರಲಿ’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದ ಶ್ರೀರಾಮ್ ಇದೀಗ ತಮ್ಮ ಹೇಳಿಕೆಯಿಂದ ಸೃಷ್ಟಿಯಾದ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಯಾರನ್ನೂ ಗುರಿಯಾಗಿಸಿಕೊಂಡು ಮಾತನಾಡಿಲ್ಲ, ಕನ್ನಡ ಚಿತ್ರರಂಗದ ಹಿರಿಯರ ಮೇಲಿನ ಗೌರವದಿಂದ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದೇನೆ ಎನ್ನುವುದು ಅವರ ಸ್ಪಷ್ಟನೆಯ ಸಾರವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತದಲ್ಲಿ ಎಲ್ಲೇ ಹುಡುಕಿದರೂ ಸಾಯಿ ಪಲ್ಲವಿಯಂಥ ಸೀತೆ ಸಿಗಲ್ಲ: ನಟ ಧನುಷ್​ ಮೆಚ್ಚುಗೆಯ ಮಾತು
ಹುಟ್ಟೂರಿನಲ್ಲಿಯೇ 'ಚಂದ್ರಹಾಸ'ನ ಸಂಭ್ರಮ ನುಂಗಿ ಹಾಕಿದ 'ಪ್ರೇಮದ ಊರಲಿ'; ನಟ ಹರೀಶ್ ಕಣ್ಣೀರು!