'ಆಯುಷ್' ವಿವಾದ: ನಿರ್ದೇಶಕರ ವಿರುದ್ಧ ಫಿಲಂ ಚೇಂಬರ್‌ಗೆ ಪತ್ರ ಬರೆದ ಪ್ರಿಯಾಂಕಾ ಉಪೇಂದ್ರ!

Published : Nov 10, 2026, 02:59 PM IST
Priyanka Upendra

ಸಾರಾಂಶ

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕಾ ಅವರು ತಮ್ಮ ಮಗ ಆಯುಷ್ ನಟನೆಯ ಮೊಟ್ಟಮೊದಲ ಸಿನಿಮಾದ ನಿರ್ದೇಶಕ ಪುರುಷೋತ್ತಮ್ ವಿರುದ್ಧ ಫಿಲಂ ಚೇಂಬರ್‌ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ನಿರ್ದೇಶಕರು, ಅವರ ಕೆಲಸ ಹಾಗೂ ವಿವಾದದ ಬಗ್ಗೆ ಅದೇನು ಬರೆದಿದ್ದಾರೆ ನೋಡಿ..

‘ಆಯುಷ್’ ಸಿನಿಮಾ ನಿರ್ದೇಶಕರ ವಿರುದ್ಧ ‘ಫಿಲಂ ಚೇಂಬರ್’ಗೆ ಪತ್ರ ಬರೆದ ಪ್ರಿಯಾಂಕಾ ಉಪೇಂದ್ರ

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕಾ ಅವರು ತಮ್ಮ ಮಗ ಆಯುಷ್ ನಟನೆಯ ಮೊಟ್ಟಮೊದಲ ಸಿನಿಮಾದ ನಿರ್ದೇಶಕ ಪುರುಷೋತ್ತಮ್ ವಿರುದ್ಧ ಫಿಲಂ ಚೇಂಬರ್‌ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ನಿರ್ದೇಶಕರು, ಅವರ ಕೆಲಸ ಹಾಗೂ ವಿವಾದದ ಬಗ್ಗೆ ಅದೇನು ಬರೆದಿದ್ದಾರೆ ನೋಡಿ...

ಅಧ್ಯಕ್ಷರು / ಕಾರ್ಯದರ್ಶಿಗಳು,

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ,

ಬೆಂಗಳೂರು, ಕರ್ನಾಟಕ.

ವಿಷಯ: ನಿರ್ದೇಶಕರ ವೃತ್ತಿಪರ ಬದ್ಧತೆಯ ಕೊರತೆ, ಚಿತ್ರೀಕರಣ ವಿಳಂಬ, ಆರ್ಥಿಕ ನಷ್ಟ ಹಾಗೂ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯುಳ್ಳ ಹೇಳಿಕೆಗಳನ್ನು ನೀಡಿರುವ ಕುರಿತು ಅಧಿಕೃತ ದೂರು.

ಮಾನ್ಯರೇ,

ನಾವು ಶ್ರೀ ಕಲ್ಪವೃಕ್ಷ ಮೂವಿ ಮೇಕರ್ಸ್ (Sri Kalpharuksha Movie Makers) ಸಂಸ್ಥೆಯ ನಿರ್ಮಾಪಕರಾಗಿದ್ದು, ನಮ್ಮ ಚಿತ್ರದ ನಿರ್ದೇಶಕರಾದ ಪುರುಷೋತ್ತಮ ಸಿ. (Purushotham Suri) ಅವರ ವೃತ್ತಿಪರ ನಡವಳಿಕೆ, ಜವಾಬ್ದಾರಿಗಳು ಹಾಗೂ ಚಿತ್ರದ ನಿರ್ವಹಣೆ ಮತ್ತು ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದಂತೆ ಉಂಟಾಗಿರುವ ಕೆಲವು ಗಂಭೀರ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ಅಧಿಕೃತವಾಗಿ ತರಲು ಈ ದೂರನ್ನು ಸಲ್ಲಿಸುತ್ತಿದ್ದೇವೆ.

ಚಿತ್ರದ ಆರಂಭದಿಂದಲೂ ನಿರ್ದೇಶಕರ ಮೇಲೆ ಪರಸ್ಪರ ನಂಬಿಕೆ ಮತ್ತು ವಿಶ್ವಾಸವನ್ನಿಟ್ಟು, ಅವರಿಗೆ ಅಗತ್ಯವಿರುವ ಸಂಪೂರ್ಣ ಸಹಕಾರ, ಬೆಂಬಲ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಿದ್ದೇವೆ. ಆದಾಗ್ಯೂ, ಚಿತ್ರದ ನಿರ್ಮಾಣದ ಸಂದರ್ಭದಲ್ಲಿ ಹಲವು ಸಮಸ್ಯೆಗಳು ಎದುರಾಗಿದ್ದು, ಇದರಿಂದ ನಿರ್ಮಾಣ ಕಾರ್ಯದಲ್ಲಿ ವಿಳಂಬ, ಆರ್ಥಿಕ ನಷ್ಟ, ಅನಗತ್ಯ ತೊಂದರೆಗಳು ಹಾಗೂ ನಿರ್ದೇಶಕರ ವೃತ್ತಿಪರ ಬದ್ಧತೆಯ ಬಗ್ಗೆ ಗಂಭೀರ ಅನುಮಾನಗಳು ಉಂಟಾಗಿವೆ.

ಈ ಹಿನ್ನೆಲೆಯಲ್ಲಿ, ಕೆಳಕಂಡ ವಿಷಯಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.

1. ಕಥೆಯ ಅಭಿವೃದ್ಧಿ ಮತ್ತು ಸೃಜನಾತ್ಮಕ ಕೊಡುಗೆ

ನಿರ್ದೇಶಕರು ಆರಂಭದಲ್ಲಿ ಕೇವಲ ಒಂದು ಸಾಲಿನ ಕಥೆಯ ಕಲ್ಪನೆಯೊಂದಿಗೆ ನಮ್ಮನ್ನು ಸಂಪರ್ಕಿಸಿದ್ದರು. ನಂತರ ನಿರ್ಮಾಪಕರ ತಂಡವು ಸಾಕಷ್ಟು ಸಮಯ, ಶ್ರಮ. ಸೃಜನಾತ್ಮಕ ಚಿಂತನೆ ಹಾಗೂ ಸಂಪನ್ಮೂಲಗಳನ್ನು ವಿನಿಯೋಗಿಸಿ, ಆ ಪ್ರಾಥಮಿಕ ಕಥೆಯ ಕಲ್ಪನೆಯನ್ನು ಪೂರ್ಣ ಕಥೆಯಾಗಿ ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದ್ದರಿಂದ ಚಿತ್ರದ ಕಥೆಯ ಅಭಿವೃದ್ಧಿಯಲ್ಲಿ ನಿರ್ಮಾಪಕರ ತಂಡದ ಕೊಡುಗೆಯನ್ನು ಸೂಕ್ತವಾಗಿ ಪರಿಗಣಿಸಬೇಕೆಂದು ವಿನಂತಿಸುತ್ತೇವೆ.

ಸಿನಿಮಾರಂಗದಲ್ಲಿ ಸಂಚಲನ

ಹೀಗೆಂದು ನಟಿ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ, ಸದ್ಯ ಈ ವಿವಾದ ಮಾಧ್ಯಮಗಳು ಹಾಗೂ ಸಿನಿಮಾರಂಗದಲ್ಲಿ ಸಂಚಲನ ಉಂಟುಮಾಡುತ್ತಿದ್ದು, ಈಗ ಇದು 'ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ'ಯ ಮೆಟ್ಟಿಲೇರಿದೆ. ಮುಂದಿನ ಬೆಳವಣಿಗೆ ಏನಿರಬಹುದು ಎಂಬ ಕುತೂಹಕ್ಕೆ ಕಾರಣವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

YASH: ಮಡದಿ-ಮಕ್ಕಳ ಜೊತೆ 'ರಾವಣನ ಲುಕ್‌' ಕೊಟ್ಟು ಫ್ಯಾನ್ಸ್‌ಗೆ ದೀಪಾವಳಿ ವಿಶ್ ಮಾಡಿದ ಯಶ್!
"ಅಪ್ಪಾಜಿಯ ಆ ಮುಗ್ಧ ಮಗುವಿನಂತ ಮನಸ್ಸು..." ಡಾ.ರಾಜ್ ದೀಪಾವಳಿ ಕ್ಷಣ ನೆನೆದು ಭಾವುಕರಾದ ಶಿವಣ್ಣ!