
ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಅವರು ತಮ್ಮ ಆಪ್ತ ವಲಯ ಮತ್ತು ಅಭಿಮಾನಿಗಳಿಗೆ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಕಳೆದ ವರ್ಷವಷ್ಟೇ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು, ಮತ್ತೊಮ್ಮೆ ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಮೂಲಕ ಮತ್ತೊಮ್ಮೆ ತಾವು ಪ್ರೆಗ್ನೆಂಟ್ ಎಂಬ ಸುದ್ದಿಯನ್ನು ಪ್ರಣಿತಾ ಸುಭಾಷ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೌಂಡ್ 2... ಪ್ಯಾಂಟ್‌ಗಳು ಇನ್ನು ಮುಂದೆ ಹೊಂದಿಕೆಯಾಗುವುದಿಲ್ಲ ಎಂದು ಪೋಸ್ಟ್ ಮಾಡುವ ಮೂಲಕ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ಸ್ನೇಹಿತರು ಪ್ರಣಿತಾ ಸುಭಾಷ್ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
ಕಳೆದ ವರ್ಷ ಜೂನ್ 10 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಣಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಪ್ರಣಿತಾ ಅವರ ತಾಯಿ ಡಾ. ಜಯಶ್ರೀ ಕೂಡಾ ಸ್ತ್ರೀರೋಗ ತಜ್ಞೆ ಆಗಿರುವುದರಿಂದ ಅವರ ಆಪ್ತ ವೈದ್ಯರ ಸಮ್ಮುಖದಲ್ಲಿಯೇ ಮಗಳ ಹೆರಿಗೆಯನ್ನು ಮಾಡಿಸಿದ್ದರು. ಪ್ರಣಿತಾ ತಮ್ಮ ಮಗಳಿಗೆ ಅರ್ನಾ ಎಂದು ಹೆಸರಿಟ್ಟಿದ್ದಾರೆ. ಅರ್ನಾ ಎಂದರೆ ಬೆಟ್ಟದಂತ ಶಕ್ತಿ ಎಂದರ್ಥ.
ಇನ್ನು 2021ರ ಮೇ ತಿಂಗಳಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ಪ್ರಣಿತಾ ಹಸೆಮಣೆ ಏರಿದರು. ಕೋವಿಡ್ ಮುಂಜಾಗ್ರತೆ ಕ್ರಮವಾಗಿ ಕೇವಲ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ಸಮಾರಂಭ ನಡೆದಿತ್ತು. 2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು, ಪೊರ್ಕಿ ಸಿನಿಮಾ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಅನಂತರ ಮತ್ತಷ್ಟು ಕನ್ನಡ ಸಿನಿಮಾದಲ್ಲಿ ನಟಿಸಿದರು. ಅನೇಕ ಸ್ಟಾರ್ ಹೀರೋಗಳ ಜೊತೆಗೆ ಅವರು ತೆರೆ ಹಂಚಿಕೊಂಡಿದ್ದಾರೆ.
ಅಮ್ಮನಾದರೂ ಬಳುಕುವ ಬಳ್ಳಿಯಾದ ಪ್ರಣಿತಾ ಸುಭಾಷ್: ಮಿಲ್ಕಿ ಬ್ಯೂಟಿ ಅಂದ ನೋಡಿ ಫ್ಯಾನ್ಸ್ ಹೀಗಾ ಅನ್ನೋದು!
ಮದುವೆಯಾದ ಮೇಲೆಯೂ ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಣಿತಾ, ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಕೊಂಡಿದ್ದರು. ಪ್ರಣಿತಾ ಫೌಂಡೇಶನ್ ಮೂಲಕ ಹಲವು ಸಾಮಾಜಿಕ ಕಾರ್ಯಗಳಲ್ಲಿ ಕಾಣಿಸಿಕೊಂಡಿದ್ದರು. ದರ್ಶನ್ ಜೊತೆಗೆ ಕನ್ನಡದ ಪೊರ್ಕಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಈ ಬೆಡಗಿ, ತದನಂತರ ಹಲವು ಸಿನಿಮಾಗಳಲ್ಲಿ ನಟಿಸಿದರು. ತೆಲುಗು, ತಮಿಳು ಸಿನಿಮಾಗಳಲ್ಲಿ ಮಾತ್ರ ನಟಿಸದೆ, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.