
ಮೊದಲ ಬಾರಿ ಪೂರ್ಣ ಪ್ರಮಾಣದ ಖಳನಟನಾಗಿ ನಟಿಸಿರೋದಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಮೋದ್ ಶೆಟ್ಟಿ ತಮ್ಮ ಪಾತ್ರದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಅವನೇ ಶ್ರೀಮನ್ನಾರಾಯಣ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ರೂ ಕೂಡ ಕಾಮಿಡಿ ವಿಲನ್ ಶೇಡ್ ಇರುತ್ತಿತ್ತು. ಆದ್ರೆ ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ನಟಿಸಿದ್ದೇನೆ. ‘ಹೀರೋ’ ಸಿನಿಮಾದಲ್ಲಿ ಕಣ್ಣುಗಳೇ ನನ್ನ ಪಾತ್ರದ ಹೈಲೈಟ್. ಚಿತ್ರಕ್ಕಾಗಿ ನಿರ್ದೇಶಕರ ಸಲಹೆಯಂತೆ ಲೆನ್ಸ್ ಬಳಸಿದ್ದೇನೆ. ಇದು ನನಗೆ ಹೊಸ ಅನುಭವ.'
'ನಿರ್ದೇಶಕರಾದ ಭರತ್ ರಾಜ್ ನನ್ನ ಪಾತ್ರವನ್ನು ತುಂಬಾ ಚೆನ್ನಾಗಿ ಡಿಸೈನ್ ಮಾಡೋದರ ಜೊತೆ ಹಾವ-ಭಾವದಲ್ಲೇ ಹೆಚ್ಚಿನ ಅಭಿನಯ ಮಾಡಿಸಿದ್ದಾರೆ. ನನ್ನ ವೇಷ ಭೂಷಣ ಕೂಡ ಹೀರೋ ಚಿತ್ರದಲ್ಲಿ ಹೊಸ ಬಗೆಯಲ್ಲಿದೆ. ಟ್ರೇಲರ್ನಲ್ಲಿ ಇದರ ಝಲಕ್ ಕಾಣಬಹುದು. ಬಹುತೇಕ ಸಿನಿಮಾ ಗೌನ್ ಧರಿಸಿ ನಟಿಸಿದ್ದೇನೆ. ಚಿಕ್ಕಮಗಳೂರಿನ ಆ ಚಳಿಯಲ್ಲಿ ಇಡೀ ದಿನ ಗೌನ್ ಧರಿಸಿ ಚಿತ್ರೀಕರಣ ಮಾಡಿದ್ದು ಎಂದೂ ಮರೆಯಲಾಗೋದಿಲ್ಲ ಎನ್ನುತ್ತಾರೆ ‘ಹೀರೋ’ ಚಿತ್ರದ ವಿಲನ್ ಪ್ರಮೋದ್ ಶೆಟ್ಟಿ.
ಯಪ್ಪಾ!! ರಿಷಬ್ ಶೆಟ್ಟಿ 'ಹೀರೋ' ಟ್ರೇಲರ್ ನೋಡಿದ್ರಾ?
ಇನ್ನು ಲಾಕ್ಡೌನ್ ಸಮಯದಲ್ಲಿನ ಚಿತ್ರೀಕರಣದ ಅನುಭವ ಹಂಚಿಕೊಂಡಿರುವ ಪ್ರಮೋದ್ ಶೆಟ್ಟಿ ಸುಮಾರು 50 ದಿನಗಳ ಕಾಲ 24 ಜನರ ತಂಡ ಒಂದು ಎಸ್ಟೇಟ್ ಒಳಗೆ ಇದ್ದು, ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತ ಚಿತ್ರೀಕರಣ ಮುಗಿಸಿದ್ದೇವೆ. ಈ ಸಿನಿಮಾದಲ್ಲಿ ಆದ ಅನುಭವ ಬಹುಶಃ ಮತ್ತೊಂದು ಹೀರೋ ಸಿನಿಮಾ ಮಾಡಿದ್ರೂ ಆಗೋದಿಲ್ಲ ಎಂದು ಸಂತಸ ಹಂಚಿಕೊಂಡಿದ್ದಾರೆ.
"
ರಂಗಭೂಮಿಗೆ ರಂಗಭೂಮಿಯೇ ಸಾಟಿ ಎಂದ ಪ್ರಮೋದ್ ಶೆಟ್ಟಿ
ಭರತ್ ರಾಜ್ ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ‘ಹೀರೋ’ ಸಿನಿಮಾದಲ್ಲಿ ಗಾನವಿ ಲಕ್ಷ್ಮಣ್ ನಾಯಕ ನಟಿಯಾಗಿ ರಿಷಬ್ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಇಡೀ ತಾಂತ್ರಿಕ ವರ್ಗ ಅಭಿನಯಿಸಿದ್ದು ‘ಹೀರೋ’ ಸಿನಿಮಾದ ಮತ್ತೊಂದು ಹೈಲೈಟ್. ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಸಿನಿಮಾ ಮಾರ್ಚ್ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.