ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿರುವ ‘ಗೋವಿಂದ ಗೋವಿಂದ’ ಚಿತ್ರದ ಟೀಸರ್ ಮೂರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.
ಜಾಕಿ ಭಾವನಾ ವಿಶೇಷವಾದ ಪಾತ್ರದಲ್ಲಿ ನಟಿಸಿದ್ದು, ಕಿರುತೆರೆ ನಟಿ ಕವಿತಾ ಗೌಡ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ಮತ್ತು ಥ್ರಿಲ್ಲರ್ ಇವೆರಡನ್ನೂ ಆಧರಿಸಿ ರೂಪಿಸಿರುವ ಈ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಮಾ.1ರಂದು ಪುಷ್ಕರ್ ಫಿಲಮ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಚಿತ್ರದ ಟೀಸರ್ ಬಿಡುಗಡೆ ಆಗುತ್ತಿದೆ.
ಈಗಾಗಲೇ ಹಿರಿತೆರೆಯಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿರುವ ಶೈಲೇಂದ್ರ ಬಾಬು ಹಾಗೂ ಕಿರುತೆರೆಯಲ್ಲಿ ದೊಡ್ಡ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರವಿ ಆರ್ ಗರಣಿ ಇಬ್ಬರು ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದಾರೆ.
ಬುಸಿನೆಸ್, ಕುಟುಂಬ ಕಾರಣಕ್ಕೆ ಸ್ವಲ್ಪ ದೂರ ಇದ್ದೆ: ಸುಮಂತ್
ತಿಲಕ್ ನಿರ್ದೇಶನವಿದೆ. ಇಲ್ಲಿವರೆಗೂ ಆ್ಯಕ್ಷನ್, ರೋಮ್ಯಾಂಟಿಕ್ ಚಿತ್ರಗಳನ್ನೇ ಹೆಚ್ಚು ಮಾಡಿದ ತಿಲಕ್ ಈಗ ಪಕ್ಕಾ ಮನರಂಜನೆ ಹಾಗೂ ಥ್ರಿಲ್ಲರ್ ಬೇಸ್ ಕತೆಗೆ ಹೀರೋ ಆಗಿದ್ದಾರೆ. ನಗು ಮತ್ತು ಕುತೂಹಲ ಈ ಚಿತ್ರದ ಹೈಲೈಟ್ಸ್. ಆದರೆ, ‘ಗೋವಿಂದ ಗೋವಿಂದ’ ಎನ್ನುವ ಹೆಸರಿಟ್ಟುಕೊಂಡಿರುವ ಈ ಚಿತ್ರ, ಯಾರಿಗೆ ನಾಮ ಹಾಕಲಿದೆ, ಹೆಸರಿನ ಕಾರಣಕ್ಕೆ ಕೆಂಗಣ್ಣಿಗೆ ಗುರಿಯಾಗಲಿದೆಯೇ ಎಂಬುದು ಸದ್ಯದ ಕುತೂಹಲ. ಯಾಕೆಂದರೆ ‘ಹುಂಡಿ ನಮ್ದು, ಕಾಸ್ ನಿಮ್ದು’ ಎನ್ನುವುದು ಚಿತ್ರದ ಟ್ಯಾಗ್‌ಲೈನ್. ಉಳಿದಿದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು!