ಪ್ರೇಮಿಗಳ ದಿನದಂದು ಹವಾ ಎಬ್ಬಿಸಲು ಬರ್ತಿದೆ ಪ್ರಮೋದ್-ಪೃಥ್ವಿ ಅಂಬಾರ್ 'ಭುವನಂ ಗಗನಂ'..!

Published : Feb 12, 2025, 09:28 PM ISTUpdated : Feb 12, 2025, 09:48 PM IST
ಪ್ರೇಮಿಗಳ ದಿನದಂದು ಹವಾ ಎಬ್ಬಿಸಲು ಬರ್ತಿದೆ ಪ್ರಮೋದ್-ಪೃಥ್ವಿ ಅಂಬಾರ್ 'ಭುವನಂ ಗಗನಂ'..!

ಸಾರಾಂಶ

ಪೃಥ್ವಿ ಅಂಬಾರ್ ನಟನೆಯ 'ಭುವನಂ ಗಗನಂ' ಚಿತ್ರದ ಟ್ರೇಲರ್ ೨ ಮಿಲಿಯನ್ ವೀಕ್ಷಣೆ ದಾಟಿ ಸದ್ದು ಮಾಡುತ್ತಿದೆ. ಫೆಬ್ರವರಿ ೧೪ ರಂದು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಮಂಗಳೂರಿನಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಿರೀಶ್ ಮೂಲಿಮನಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಮೋದ್ ಕೂಡ ನಾಯಕರಾಗಿದ್ದಾರೆ. ನಗರ-ಗ್ರಾಮೀಣ ಹಿನ್ನೆಲೆಯ ಕಥಾಹಂದರ ಹೊಂದಿದೆ.

ತುಳುನಾಡಿನ ಪ್ರತಿಭೆ ಪೃಥ್ವಿ ಅಂಬಾರ್ (Pruthvi Ambar) ಒಂದಾದ ಮೇಲೆ ಮತ್ತೊಂದು ಎಂಬಂತೆ ಸಾಲುಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ದು ಅವರದೊಂದು ಸಿನಿಮಾ ಟ್ರೇಲರ್ ಲಾಂಚ್ ಆಗಿದ್ದು ಸಾಕಷ್ಟು ಸೌಂಡ್ ಮಾಡತೊಡಗಿದೆ. ಸದ್ಯ ಅದು ಬರೋಬ್ಬರಿ ಎರಡು ಮಿಲಿಯನ್ ವೀಕ್ಷಣೆ ಪಡೆದು ಹೊಸ ನಿರೀಕ್ಷೆ ಮೂಡಿಸಿದೆ. ಇಷ್ಟು ಹೇಳಿದರೆ ಗೊತ್ತಾಗಿರಬಹುದು, ಅದು 'ಭುವನಂ ಗಗನಂ' ಸಿನಿಮಾದ ಟ್ರೇಲರ್..

ಪ್ರಮೋದ್ (Pramod) ಮತ್ತು ಪೃಥ್ವಿ ಅಂಬಾರ್ ನಾಯಕರಾಗಿ ನಟಿಸಿರುವ 'ಭುವನಂ ಗಗನಂ' ಚಿತ್ರದ (Bhuvanam Gaganam) ಟ್ರೇಲರ್ ಬಿಡುಗಡೆ ಆಗಿದ್ದು, ಸಾಕಷ್ಟು ಸೌಂಡ್ ಮಾಡುತ್ತಿದೆ. ಬಹುತೇಕ ಎರಡು ಮಿಲಿಯನ್ ವೀಕ್ಷಣೆ ಕಂಡು ವೀಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ನಿನ್ನೆ ಮಂಗಳೂರಿನಲ್ಲಿ ನಡೆದ ಸೆಲೆಬ್ರಿಟಿ ಪ್ರೀಮಿಯರ್‌ ಪ್ರದರ್ಶನಕ್ಕೂ ಅದ್ಭುತ ರೆಸ್ಪಾನ್ಸ್‌ ಸಿಕ್ಕಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಡಾರ್ಲಿಂಗ್ ಕೃಷ್ಣ, ನೀನಾಸಂ ಸತೀಶ್, ತ್ರಿವಿಕ್ರಮ್, ಅನುಷಾ ರೈ, ಸಾನ್ಯಾ ಅಯ್ಯರ್ ಆಗಮಿಸಿ ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಭ ಕೋರಿದರು.

ವಿಷ್ಣುವರ್ಧನ್ 'ಮುತ್ತಿನಹಾರ' ಬಿಡುಗಡೆ ವೇಳೆ ಪತ್ರಿಕೆಗೆ ಪತ್ರ ಬರೆದಿದ್ದ ಡಾ ರಾಜ್‌ಕುಮಾರ್!

ಕಾರ್ಯಕ್ರಮದಲ್ಲಿ ನಾಯಕ ನಟರಿಂದ ಹಿಡಿದು ನಿರ್ಮಾಪಕರವರೆಗೆ ಎಲ್ಲರೂ ಈ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲವನ್ನು ಕೇಳಿಕೊಂಡರು. ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು, ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಹರಸಿ ಎಂದು ಹೇಳಿದರು. ಫೆ.14ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಗಿರೀಶ್ ಮೂಲಿಮನಿ ಈ ಸಿನಿಮಾ ನಿರ್ದೇಶನ ಮಾಡಿದ್ದು ಎಂ. ಮುನೇಗೌಡ ನಿರ್ಮಾಣ ಮಾಡಿದ್ದಾರೆ. 

ನಗರ ಮತ್ತು ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ರೆಚೆಲ್ ಡೇವಿಡ್ ಮತ್ತು ಅಶ್ವಥಿ ನಾಯಕಿಯರಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಪಾತ್ರವರ್ಗ ಹಾಗೂ ಕಲಾವಿದರಿಗೆ ಈ ಸಿನಿಮಾ ಕಥೆ ಇಷ್ಟವಾಗಿದ್ದು, ಎಲ್ಲರೂ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. 

ನಾನು ಸತ್ತಾಗ ಬೇರೆ ಯಾರು ಬರ್ತಾರೋ ಇಲ್ವೋ, ಆದ್ರೆ ಆತ ಮಾತ್ರ ಬಂದೇ ಬರ್ತಾನೆ: ವಿಷ್ಣುವರ್ಧನ್ 

ಫೆಬ್ರವರಿ 14ರ ಪ್ರೇಮಿಗಳ ದಿನದಂದು ಈ ಚಿತ್ರವು ಬಿಡುಗಡೆ ಕಾಣುತ್ತಿರುವುದು ಹಲವರಿಗೆ ಸಂತಸ ತಂದಿದೆ. ಕಾರಣ, ಹೊಸ ಹುಡುಗ ಅಥವಾ ಹೊಸ ಹುಡುಗಿಯೊಂದಿಗೆ ಥಿಯೇಟರ್‌ಗೆ ಹೋಗಬಯಸುವ ಜೋಡಿಗೆ ಈ ಚಿತ್ರವೂ ಒಂದು ಆಯ್ಕೆ ಆಗಲಿದೆ. ಸಾಕಷ್ಟು ಸಿನಿಪ್ರೇಮಿಗಳು ಈ ಚಿತ್ರವನ್ನು ಕುತೂಹಲದಿಂದ ಕಾಯುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?