ನಿಮಗೆಲ್ಲಾ ರೋಲ್​ ಇಲ್ಲ ಅಂತ ಕೆಜಿಎಫ್​​ ನಿರ್ದೇಶಕ ಮಾಳವಿಕಾಗೆ ವಾಪಸ್​ ಕಳಿಸೇ ಬಿಡೋದಾ? ಗರಂ ಆಗಿದ್ದ ನಟಿ

Published : Feb 12, 2025, 03:35 PM ISTUpdated : Feb 12, 2025, 04:45 PM IST
ನಿಮಗೆಲ್ಲಾ ರೋಲ್​ ಇಲ್ಲ ಅಂತ ಕೆಜಿಎಫ್​​ ನಿರ್ದೇಶಕ ಮಾಳವಿಕಾಗೆ ವಾಪಸ್​ ಕಳಿಸೇ ಬಿಡೋದಾ? ಗರಂ ಆಗಿದ್ದ ನಟಿ

ಸಾರಾಂಶ

ಕೆಜಿಎಫ್ ಚಿತ್ರದಲ್ಲಿ ಮೊದಲು ಪಾತ್ರ ನಿರಾಕರಿಸಿದ್ದ ಪ್ರಶಾಂತ್ ನೀಲ್, ನಂತರ ಮಾಳವಿಕಾ ಅವರನ್ನು ಆಹ್ವಾನಿಸಿದ್ದರು. ಕೆಜಿಎಫ್ 1 ಮತ್ತು 2 ರ ಯಶಸ್ಸಿನ ನಂತರ, ೩ನೇ ಭಾಗದ ನಿರೀಕ್ಷೆಯಿದೆ. ಮಾಳವಿಕಾ 3ನೇ ಭಾಗದಲ್ಲೂ ನಟಿಸಿದ್ದು, ಚಿತ್ರೀಕರಣ ಮುಗಿದಿದೆ ಎಂದು ಸುಳಿವು ನೀಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಬಹುದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ ಚಿತ್ರವೆಂದರೆ ಅದು ಕೆಜಿಎಫ್​ ಮತ್ತು ಕೆಜಿಎಫ್​-2. ಇದೀಗ ಯಶ್​ ಅಭಿಮಾನಿಗಳು ಕೆಜಿಎಫ್​-3 ನಿರೀಕ್ಷೆಯಲ್ಲಿದ್ದಾರೆ. 2018 ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್​ ಚಾಪ್ಟರ್​ 1 ವಿಶ್ವಾದ್ಯಂತ 250 ಕೋಟಿ ರೂಪಾಯಿಗಳನ್ನು ಗಳಿಸಿದ್ದರೆ, 2022ರಲ್ಲಿ ಬಿಡುಗಡೆಯಾದ ಚಾಪ್ಟರ್​-2 1500 ಕೋಟಿ ರೂಪಾಯಿ ಗಳಿಸಿದೆ.  ಎರಡು ವರ್ಷಗಳ ಅಂತರದಲ್ಲಿ ಚಾಪ್ಟರ್​-2 ಬಂದಿದೆ. ಆದ್ದರಿಂದ ಇದಾಗಲೇ ಮತ್ತೆರಡು ವರ್ಷ ಆಗಿರುವ ಹಿನ್ನೆಲೆಯಲ್ಲಿ ಚಾಪ್ಟರ್​-3 ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಇದರ ಶೂಟಿಂಗ್​ ನಡೆಯುತ್ತಿರುವುದಾಗಿ ಇದಾಗಲೇ ರಿವೀಲ್​  ಕೂಡ ಆಗಿದ್ದು, ಇದರಲ್ಲಿ ಕೂಡ ನಟಿ ಮಾಳವಿಕಾ ಅವಿನಾಶ್​ ನಟಿಸಲಿದ್ದಾರೆ.

ಇದೀಗ ನಟಿ, ಕೆಜಿಎಫ್​-1ರ ಶೂಟಿಂಗ್​ ಮೆಲುಕು ಹಾಕಿದ್ದಾರೆ. ಸಿನಿಮಾ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ತಮ್ಮನ್ನು ಆ ಚಿತ್ರದಲ್ಲಿ ಹೇಗೆ ರಿಜೆಕ್ಟ್​ ಮಾಡಿದ್ದರು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಆರೋಹಣ ಎನ್ನುವ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಮಾಳವಿಕಾ ಅವರು ಈ ವಿಷಯದ ಬಗ್ಗೆ ಹೇಳಿದ್ದಾರೆ. ಅದು 2015-16 ಸಮಯ. ಕೆಜಿಎಫ್-01​ ಚಿತ್ರೀಕರಣ ನಡೆಯುತ್ತಿತ್ತು. ಆಗಿನ್ನೂ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ನನಗೆ ಪರಿಚಯ ಇರಲಿಲ್ಲ. ಅವರ ಉಗ್ರಂ ಚಿತ್ರದಲ್ಲಿ ಅವಿನಾಶ್​ ಪಾರ್ಟ್​ ಮಾಡಿದ್ದರು ಅಷ್ಟೇ. ನನಗೆ ಅವರ ಪರಿಚಯವಿರಲಿಲ್ಲ. ಒಂದು ದಿನ  ರಕ್ಷಾ ಬಂಧನದ ಸಮಯದಲ್ಲಿ, ಯಶ್​ ಅವರನ್ನು ಹುಡುಕಿ ಹೋಗಿದ್ದೆ. ಶೂಟಿಂಗ್​ ಸೆಟ್​ನಲ್ಲಿ ಇದ್ದರು. ಆಗ ನಮ್ಮ  ಸೆಟ್​ ನೋಡಿ ಎಂದು ಕರೆದುಕೊಂಡು ಹೋದರು. ಗುಹೆ ರೀತಿ ಇತ್ತು. ಅದು  ಗಣಿಯ ಕಥೆ  ಎನ್ನುವುದು ಆಗ ಗೊತ್ತಾಯ್ತು. 

ಕೆಜಿಎಫ್​-3 ಬಿಗ್​ ಅಪ್​ಡೇಟ್​! ಯಶ್​ ಫ್ಯಾನ್ಸ್​ ಕುಣಿದು ಕುಪ್ಪಳಿಸೋ ಸುದ್ದಿ ಕೊಟ್ಟ ಮಾಳವಿಕಾ ಅವಿನಾಶ್​

ಒಂದು ಮೂಲೆಯಲ್ಲಿ  ಪ್ರಶಾಂತ್​ ನೀಲ್​ ಕುಳಿದಿದ್ರು.  ಇವರೇ ಡೈರೆಕ್ಟರು ಎಂದು ಯಶ್​ ಪರಿಚಯ ಮಾಡಿಸಿದ್ರು. ನಮಗೇನಾದ್ರೂ ಈ ಚಿತ್ರದಲ್ಲಿ ಪಾರ್ಟ್​ ಕೊಡ್ತೀರಾ ಎಂದು ಕೇಳಿದೆ.  ನಮ್ಮಲ್ಲಿ ಹೆಣ್ಣುಮಕ್ಕಳ ಪಾತ್ರವೇ ಇಲ್ಲ, ನಿಮಗೆ ಹೇಗೆ ಕೊಡೋದು ಎಂದರು. ನನಗೆ ಸಿಟ್ಟುಬಂತು. ಹೆಣ್ಣುಮಕ್ಕಳಿಲ್ಲದೇ ಅದ್ಹೇಗೆ ಚಿತ್ರ ಮಾಡ್ತಿರಾ ಎಂದು ಬೈದುಕೊಂಡೆ ಮನಸ್ಸಿನಲ್ಲಿ. ಅದನ್ನು ಮರೆತು ಬಿಟ್ಟಿದ್ದೆ. 

 2018 ಚುನಾವಣೆ ನಡೀತಾ ಇದ್ದ ಸಂದರ್ಭದಲ್ಲಿ ನಾನು ತುಂಬಾ ಬಿಜಿ ಇದ್ದೆ. ಪ್ರಶಾಂತ್​ ಅವರೇ ಕಾಲ್​​ ಮಾಡಿ ಕೆಜಿಎಫ್​ಗೆ ಒಂದು ರೋಲ್​ಗೆ ಬರಲು ಹೇಳಿದ್ರು. ಹೆಣ್ಣುಮಕ್ಕಳೇ ಬೇಡ ಅಂದಿದ್ರಲ್ಲಾ ಅಂದೆ. ಅದಕ್ಕೆ ಅವರು, ಇಲ್ಲ. ಒಂದು ಟಿವಿ ಆ್ಯಂಕರ್​, ಜರ್ನಲಿಸ್ಟ್​ ಆರೋಗೆಂಟ್ ಪಾರ್ಟ್​ ಇದೆ. ನೀವೇ ಮಾಡಬೇಕು ಎಂದರು. ಚುನಾವಣೆ ತುಂಬಾ ಬಿಜಿ ಇದ್ದೇನೆ, ಕಷ್ಟ ಎಂದೆ. ಆದರೂ ಬಿಡಲಿಲ್ಲ. ಓಕೆ ಎಂದು ಆಮೇಲೆ ಚಿತ್ರ ಒಪ್ಪಿಕೊಂಡು ಮಾಡಿದೆ ಎಂದಿದ್ದಾರೆ ಮಾಳವಿಕಾ. ಇದೀಗ ಕೆಜಿಎಫ್​-3 ನಲ್ಲಿಯೂ ನಟಿಸಿರುವ ನಟಿ ಮಾಳವಿಕಾ ಅವಿನಾಶ್​ ಅವರು, ಕೆಜಿಎಫ್​-3 ಬಗ್ಗೆ ಬಿಗ್​ ಅಪ್​ಡೇಟ್​ ನೀಡಿದ್ದಾರೆ. ಅದೇನೆಂದರೆ, ಚಿತ್ರ ಶೀಘ್ರದಲ್ಲಿ ತೆರೆಯ ಮೇಲೆ ಕಾಣಲಿದೆ ಎನ್ನುವ ಹಿಂಟ್​ ಅದು. ನಾನೂ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದೆ ಎನ್ನುವ ಮೂಲಕ, ಶೂಟಿಂಗ್ ಮುಗಿದಿರುವ ಬಗ್ಗೆ ಅವರು ತಿಳಿಸಿದ್ದಾರೆ. 

ಕನ್ನಡದ ಸೂಪರ್ ಸ್ಟಾರ್ ಹೀಗೆಂದು ಅಂದುಕೊಂಡೇ ಇರಲಿಲ್ಲ: ನಟ ಯಶ್‌ ಕುರಿತು ಬಾಲಿವುಡ್‌ ನಟಿ ಹೇಳಿದ್ದೇನು?


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ