
ಕೊರೋನಾ ಸಂಕಷ್ಟಉಂಟು ಮಾಡಿದ್ದ ಲಾಕ್‌ಡೌನ್ ಕಾರಣಕ್ಕೆ ಬಿಡುಗಡೆಯಾಗಿದ್ದ ಒಂದಿಷ್ಟುಚಿತ್ರಗಳನ್ನು ಚಿತ್ರಮಂದಿರದಿಂದ ವಾಪಸ್ಸು ತೆಗೆಸಲಾಗಿತ್ತು. ಹೀಗೆ ಲಾಕ್‌ಡೌನ್‌ಗೂ ಮೊದಲು ತೆರೆಕಂಡು, ಮೆಚ್ಚುಗೆ ಮಾತುಗಳನ್ನು ಗಳಿಸಿಕೊಂಡಿದ್ದ ಸಿನಿಮಾಗಳು ಲಾಕ್‌ಡೌನ್ ನಂತರ ಮರು ಬಿಡುಗಡೆಗೆ ಸಜ್ಜಾಗುತ್ತಿವೆ. ಆ ಪೈಕಿ ನಟ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್‌ಮನ್’ ಚಿತ್ರವೂ ಒಂದು. ಜಡೇಶ್‌ಕುಮಾರ್ ಹಂಪಿ ನಿರ್ದೇಶನದ, ಗುರು ದೇಶಪಾಂಡೆ ನಿರ್ಮಾಣದ ಈ ಚಿತ್ರವನ್ನು ಲಾಕ್‌ಡೌನ್ ಮುಗಿದ ಕೂಡಲೇ ಮತ್ತೊಮ್ಮೆ ತೆರೆಗೆ ತರಲು ಹೊರಟಿದ್ದಾರೆ ನಿರ್ಮಾಪಕರು.
ಇನ್ಸ್‌ಪೆಕ್ಟರ್ ವಿಕ್ರಂನ 'ಹೇ ಗಾಯ್ಸ್' ಹಾಡಿಗೆ ಮೆಚ್ಚುಗೆ!
‘ಸಿನಿಮಾ ನೋಡಿದವರು ಒಳ್ಳೆಯ ಅಭಿಪ್ರಾಯಗಳನ್ನು ಹೇಳುತ್ತಿದ್ದರು. ಮಾಧ್ಯಮಗಳಲ್ಲೂ ಕೂಡ ಚಿತ್ರದ ಬಗ್ಗೆ ಒಳ್ಳೆಯ ವಿಮರ್ಶೆಗಳು ಬಂದವು. ಆದರೆ, ಜನ ಥಿಯೇಟರ್‌ಗಳ ಕಡೆ ಬರುವ ಹೊತ್ತಿಗೆ ಲಾಕ್‌ಡೌನ್ ಆಗಿ ಚಿತ್ರಮಂದಿರಗಳು ಕೂಡ ಬಾಗಿಲು ಮುಚ್ಚಿದವು. ಥಿಯೇಟರ್‌ಗಳಿಂದ ಸಿನಿಮಾ ತೆಗೆದರೂ ಸೋಷಿಯಲ್ ಮೀಡಿಯಾಗಳಲ್ಲಿ ಹಾಡುಗಳನ್ನು ತುಂಬಾ ಜನ ನೋಡಿದ್ದಾರೆ.
ಡೈನಾಮಿಕ್ ಸ್ಟಾರ್ ಕೈಲಿ ಭೇಷ್ ಅನ್ನಿಸಿಕೊಂಡೆ ಪತ್ನಿ ರಾಗಿಣಿ ಚಂದ್ರನ್!
ಯೂಟ್ಯೂಬ್‌ನಲ್ಲೇ 9 ಮಿಲಿಯನ್ ಹಿಟ್ಸ್ ಸಿಕ್ಕಿದೆ. ಹೀಗಾಗಿ ಮತ್ತೆ ಸಿನಿಮಾ ತೆರೆಕಂಡರೆ ಜನ ನೋಡುತ್ತಾರೆಂಬ ನಂಬಿಕೆ ಇದೆ. ಈ ಕಾರಣಕ್ಕೆ ಲಾಕ್‌ಡೌನ್ ಮುಕ್ತಾಯವಾಗಿ, ಚಿತ್ರಮಂದಿರಗಳು ಬಾಗಿಲು ತೆಗೆದಾಗ ಜಂಟಲ್‌ಮನ್ ಚಿತ್ರವನ್ನು ಮರು ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಗುರು ದೇಶಪಾಂಡೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.