ಪ್ರಜ್ವಲ್ ದೇವರಾಜ್-ಅದಿತಿ ಪ್ರಭುದೇವ 'ಮಾಫಿಯಾ' ಬಿಡುಗಡೆ ಕನ್ಫರ್ಮ್!

By Shriram Bhat  |  First Published Oct 1, 2023, 6:36 PM IST

ಮಾಫಿಯಾ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಎಸ್ ಪಾಂಡಿಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿದ್ದು, ಅದ್ದೂರಿ ವೆಚ್ಚದಲ್ಲಿ ಹಾಡುಗಳ ಶೂಟಿಂಗ್ ನಡಸಲಾಗಿದೆಯಂತೆ.


ಡೈನಾಮಿಕ್ ಪ್ರಿನ್ಸ್ ಖ್ಯಾತಿಯ ನಟ ಪ್ರಜ್ವಲ್ ದೇವರಾಜ್ ಹಾಗೂ ನಟಿ ಅದಿತಿ ಪ್ರಭುದೇವ ಜೋಡಿಯ 'ಮಾಫಿಯಾ' ಚಿತ್ರವು ನವೆಂಬರ್‌ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಲೋಹಿತ್ ಹೆಚ್ ನಿರ್ದೇಶಿಸಿರುವ ಮಾಫಿಯಾ ಚಿತ್ರವನ್ನು ಕುಮಾರ್ ಫಿಲಂಸ್‌ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸಿದ್ದಾರೆ. ಈ ಚಿತ್ರದ 'ಟೀಸರ್‌' ಅನ್ನು ಇದೇ ತಿಂಗಳು (ಅಕ್ಟೋಬರ್) ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆಯಂತೆ. 

ಇದೇ ಮೊದಲ ಬಾರಿಗೆ ನಟ ಪ್ರಜ್ವಲ್ ದೇವರಾಜ್ ಹಾಗೂ ನಟಿ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಮಾಫಿಯಾ ಚಿತ್ರವು ಬಿಗ್ ಬಜೆಟ್ ಚಿತ್ರ ಎನ್ನಲಾಗಿದೆ. ಮೈಸೂರು, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಈ ಚಿತ್ರದ ಶೂಟಿಂಗ್ ನಡೆದಿದ್ದು, ಚಿತ್ರವು 'ಮಾಸ್' ಆಧಾರಿತ ಚಿತ್ರ ಎನ್ನಲಾಗಿದೆ. 

Tap to resize

Latest Videos

ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ 'ನೆನಪಿರಲಿ' ಖ್ಯಾತಿಯ ನಟ ಪ್ರೇಮ್!

ಮಾಫಿಯಾ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಎಸ್ ಪಾಂಡಿಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿದ್ದು, ಅದ್ದೂರಿ ವೆಚ್ಚದಲ್ಲಿ ಹಾಡುಗಳ ಶೂಟಿಂಗ್ ನಡಸಲಾಗಿದೆಯಂತೆ. ಅಂದಹಾಗೆ, ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ತಂದೆ ನಟ ದೇವರಾಜ್ ಕೂಡ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿಗ್ ಬಾಸ್ ಖ್ಯಾತಿಯ ನಟರಾದ ಶೈನ್ ಶೆಟ್ಟಿ ಹಾಗೂ ವಾಸುಕಿ ವೈಭವ್ ನಟಿಸಿದ್ದಾರೆ ಎನ್ನಲಾಗಿದೆ. ವಿಜಯ್ ಚೆಂಡೂರ್ ಸಹ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ರಾಮ್ ಚರಣ್ ಜತೆ 'ರಮಿಸಲು' ರೆಡಿಯಾದ ರವೀನಾ ಟಂಡನ್ ಮಗಳು ರಾಶಾ ತಡಾನಿ 

click me!