ಕೆಲಸದಿಂದ ಬ್ರೇಕ್ ತೆಗೆದುಕೊಂಡು ಪತ್ನಿ ಜೊತೆ ಹೆಚ್ಚಿನ ಸಮಯ ಕಳೆಯಲು ಮುಂದಾದ ವಸಿಷ್ಠ ಸಿಂಹ. ಪ್ರತಿಯೊಬ್ಬರು ಪೆಟರ್ನಿಟಿ ಲೀವ್ ತೆಗೆದುಕೊಳ್ಳಬೇಕು......
ಕನ್ನಡ ಚಿತ್ರರಂಗದ ಅದ್ಭುತ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಬಹಳ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೆ ಇಡೀ ಚಂದನವನದ ತಾರೆಯರನ್ನು ಕರೆದು ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹಸಿರು ಬಣ್ಣದ ಮೈಸೂರ್ ಸಿಲ್ಕ್ ಸೀರೆಯಲ್ಲಿ ಹರಿಪ್ರಿಯಾ ಕಂಗೊಳಿಸಿದ್ದಾರೆ. ಹೆಣ್ಣು ಮಗುನಾ ಗಂಡು ಮಗುನಾ ಎಂದು ನೆಟ್ಟಿಗರು ಗೆಸ್ ಮಾಡಲು ಶುರು ಮಾಡಿದ್ದಾರೆ. ಈ ಸಮಯದಲ್ಲಿ ವಸಿಷ್ಠ ಸಿಂಹ ಪೆಟರ್ನಿಟಿ ಲೀವ್ ತೆಗೆದುಕೊಳ್ಳಲು ಮುಂದಾಗಿದ್ದಾರೆ.
'ನಾನು ಎರಡು ತಿಂಗಳುಗಳ ಕಾಲ ಪೆಟರ್ನಿಟಿ ಬ್ರೇಕ್ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿರುವೆ' ಎಂದು ಹೆಮ್ಮೆಯಿಂದ ಖುಷಿಯಿಂದ ವಸಿಷ್ಠ ಸಿಂಹ ಹೇಳಿದ್ದಾರೆ. ಮಾಲ್ಡೀವ್ಸ್ ಟ್ರಿಪ್‌ನಲ್ಲಿ ಸೆರೆ ಹಿಡಿದಿರುವ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ತಾಯಿ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದರು.
ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯಶ್; ಟಾಕ್ಸಿಕ್ ತಂಡದ ಜೊತೆ ರಾಧಿಕಾ ಪಂಡಿತ್
'ಸಮಯ ಬಲು ಬೇಗ ಸಾಗುತ್ತಿದೆ. ಅದೆಷ್ಟೋ ಅಮೂಲ್ಯವಾದ ಕ್ಷಣಗಳನ್ನು ನಾನು ಮಿಸ್ ಮಾಡಿಕೊಂಡಿರುವೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಹರಿಪ್ರಿಯಾ ಸಾಕಷ್ಟು ಬದಲಾವಣೆಗಳನ್ನು ಎದುರಿಸುತ್ತಿದ್ದಳು. ಈ ಸಮಯದಲ್ಲಿ ಆಕೆ ಪರ ನಿಂತುಕೊಂಡು ನಾನು ಸಪೋರ್ಟ್ ಮಾಡಲು ಆಗಲಿಲ್ಲ ಏಕೆಂದರೆ ನನ್ನ ಕೆಲಸ ಕಮಿಟ್ಮೆಂಟ್ ಹೆಚ್ಚಿತ್ತು. ಎರಡನೇ ಟ್ರೈಮಿಸ್ಟರ್ ಸಮಯದಿಂದ ನಾನು ಹರಿಪ್ರಿಯಾ ಜೊತೆ ಹೆಚ್ಚಿಗೆ ಸಮಯ ಕಳೆದಿರುವೆ. ನನಗೆ ಖುಷಿ ಇದೆ ಸಮಯ ಕೊಟ್ಟಿರುವೆ ಎಂದು. ಮೊದಲ ಸ್ಕ್ಯಾನ್‌ನಿಂದ ಹಿಡಿದು ಮೊದಲ ಬೇಬಿ ಕಿಕ್‌ವರೆಗೂ ನಾನು ಪ್ರತಿಯೊಂದನ್ನು ತುಂಬಾ ಖುಷಿಯಿಂದ ಎಂಜಾಯ್ ಮಾಡಿದ್ದೀನಿ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ವಸಿಷ್ಠ ಸಿಂಹ ಮಾತನಾಡಿದ್ದಾರೆ.
1 ಗಂಟೆ ಫೋನ್‌ನಲ್ಲಿ ಮಾತನಾಡಿದ್ದೀನಿ, ಈಗ ನೆಮ್ಮದಿಯಾಗಿ ಮಲಗಿರುತ್ತೀರಿ; ಬಾಲಿ ಸರ್ ನೆನೆದು ಭಾವುಕರಾದ ವಾಣಿ
'ಪಾರ್ಟನರ್ ಅಗಿ ಹರಿಪ್ರಿಯಾ ಪ್ರೆಗ್ನೆಂಟ್ ಆಗಿ ಎದುರಿಸುವ ಮೂಡ್ ಸ್ವಿಂಗ್, ನೋವು ಮತ್ತು ರಾತ್ರಿ ನಿದ್ರೆ ಇಲ್ಲದ ಸಮಯದಲ್ಲಿ ನಾನು ಆಕೆ ಪರವಾಗಿ ನಿಂತಿದ್ದೆ. ಗರ್ಭಿಣಿ ಆದಾಗ ಹೆಣ್ಣು ಮಕ್ಕಳು ಎದುರಿಸುವ ಬದಲಾವಣೆಗಳ ಬಗ್ಗೆ ಈಗ ಬಹಳ ಹತ್ತಿರದಿಂದ ನೋಡಿದ್ದೀನಿ. ಪ್ರತಿಯೊಬ್ಬ ಹೆಣ್ಣಿಗೂ ಹ್ಯಾಟ್ಸ್ ಆಫ್ ಹೇಳಬೇಕು. ಹೀಗಾಗಿ ನಾನು ಬ್ರೇಕ್ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೀನಿ. ಪ್ರತಿಯೊಬ್ಬ ಗಂಡಸು ಬ್ರೇಕ್ ತೆಗೆದುಕೊಂಡು ತಾಯಿ ಮತ್ತು ಮಗುವಿನ ಜೊತೆ ಸಮಯ ಕಳೆಯಬೇಕು. ನನ್ನ ತಾಯಿ ಅನಾರೋಗ್ಯದ ಸಮಯದಲ್ಲಿ ನನ್ನ ತಂದೆ ಎಷ್ಟು ಕಾಳಜಿ ವಹಿಸಿ ನೋಡಿಕೊಂಡರು ಎಂದು ನಾನು ಕಣ್ಣಾರೆ ನೋಡಿದ್ದೀನಿ. ಫ್ಯಾಮಿಲಿಯನ್ನು ನೋಡಿಕೊಳ್ಳುವುದು ಸುಂದರ ಸಮಯ' ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.
ಗೋವಾ ಕಸಿನೋದಲ್ಲಿ ಒಂದುವರೆ ಲಕ್ಷ ಕಳೆದುಕೊಂಡ ಸೋನು ಶ್ರೀನಿವಾಸ್ ಗೌಡ; ಈ ಟ್ರಿಕ್ ಮಾಡಿದ್ರೆ ನಿಮ್ದು ಕೂಡ ಬೀದಿ ಪಾಡು