ಪರಭಾಷಾ ತಾರೆಯರ ನಡುವೆ ಸೋತು ಸುಣ್ಣಾಗಿರುವ ನಮ್ಮದೇ ಪ್ರತಿಭಾನ್ವಿತ ನಟ-ನಟಿಯರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ ನಟಿ ಪೂಜಾ ಗಾಂಧಿ. ಅವರು ಹೇಳಿದ್ದೇನು?
ಪರಭಾಷಾ ತಾರೆಯರಿಗೆ ಚಿತ್ರರಂಗದಲ್ಲಿ ಮಣೆ ಹಾಕುವುದು ಹೊಸ ವಿಷಯವೇನಲ್ಲ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗೆ ಹೊರಗಡೆಯಿಂದ ಬರುವ ನಟ-ನಟಿಯರಿಗೆ ಹಾಗೂ ಬಹುಕಾಲ ಅದೇ ಇಂಡಸ್ಟ್ರಿಯಲ್ಲಿ ಇರುವವರಿಗೆ ಸಿಗುವ ಸಂಭಾವನೆಯಲ್ಲಿಯೂ ಸಾಕಷ್ಟು ವ್ಯತ್ಯಾಸಗಳು ಇರುತ್ತವೆ. ಇದು ಸಿನಿಮಾ ಇಂಡಸ್ಟ್ರಿಗೆ ಮಾತ್ರ ಸೀಮಿತವಾದ ವಿಷಯವಲ್ಲ ಬಿಡಿ. ಬಹುತೇಕ ಎಲ್ಲಾ ಸಂಸ್ಥೆ, ಕಂಪೆನಿಗಳಲ್ಲಿಯೂ ಮಾಮೂಲು. ಅಲ್ಲಿಯೇ ಇರುವವರಿಗೆ ಕಡಿಮೆ ಸಂಬಳ, ಹೊರಗಡೆಯಿಂದ ಕರೆದುಕೊಂಡು ಬಂದವರಿಗೆ ಹೆಚ್ಚಿಗೆ ಸಂಬಳ ಇದದ್ದೇ. ಆದರೆ ಸಿನಿಮಾ ವಿಷಯಕ್ಕೆ ಬರುವುದಾದರೆ, ಪರಭಾಷಾ ತಾರೆಯರು ಮತ್ತು ನಮ್ಮಲ್ಲೇ ಇರುವವರ ಸಂಭಾವನೆಗೆ ಅಜಗಜಾಂತರ ವ್ಯತ್ಯಾಸವಿದೆ ಎನ್ನುವ ಕೂಗಿನ ನಡುವೆಯೇ, ಮಳೆ ಹುಡುಗಿ ಪೂಜಾ ಗಾಂಧಿ ಈ ಬಗ್ಗೆ ಮಾತನಾಡಿದ್ದಾರೆ.
ರ್ಯಾಪಿಡ್ ರಶ್ಮಿ ಷೋನಲ್ಲಿ ಪೂಜಾ ಗಾಂಧಿ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಈ ಅಸಮಾನತೆಯ ಕುರಿತು ಮಾತನಾಡಿದ್ದಾರೆ. ನಾನು ಕನ್ನಡದವಳು. ಕನ್ನಡದಲ್ಲಿ ಸುಮಾರು ಮಂದಿ ಟ್ಯಾಲೆಂಟ್ಗಳು ಇದ್ದಾರೆ, ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಅವರಿಗೆ ಅವಕಾಶ ಸಿಗ್ತಿಲ್ಲ. ಅದನ್ನು ಬಿಟ್ಟು ಹೊರಗಡೆಯಿಂದ ನಟರನ್ನು ಕರ್ಕೊಂಡು ಬರ್ತಾರೆ. ಅವರಿಗೆ ಸಿಕ್ಕಾಪಟ್ಟೆ ಸಂಭಾವನೆ ಇರುತ್ತದೆ. ಕೋಟಿ ಕೋಟಿ ಕೊಡ್ತಾರೆ. ಅದೇ ಸಂಭಾವನೆಯನ್ನು ಕನ್ನಡದವರಿಗೂ ಕೊಡ್ಬೋದಲ್ವಾ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಗಾರು ಮಳೆ ಶೂಟಿಂಗ್ನಲ್ಲೇ ಸತ್ತೋಗಿಬಿಟ್ರೆ ಅಂತ ಭಯ ಆಗೋಗಿತ್ತು.. ಜಿಗಣೆ ಕಾಟ ಬೇರೆ.. ಆ ದಿನ ನೆನೆದ ಪೂಜಾ ಗಾಂಧಿ
ಅಂದಹಾಗೆ, ಪೂಜಾ ಗಾಂಧಿ ಬಾಲಿವುಡ್ಗೆ ಮೊದಲು ಅಡಿ ಇಟ್ಟಿದ್ದು, 2001ರಲ್ಲಿ ಬಿಡುಗಡೆಯಾದ ಮಿಥುನ್ ಚಕ್ರವರ್ತಿ ಅಭಿನಯದ 'ಖತ್ರೋನ್ ಕೆ ಖಿಲಾಡಿ' ಸಿನಿಮಾದ ಮೂಲಕ. ಬಳಿಕ ಕೆಲ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಅಲ್ಲಿಯವರೆಗೆ ಅವರು ಸಂಜನಾ ಗಾಂಧಿ ಆಗಿದ್ದರು. ನಂತರ ಅವರು ಪೂಜಾ ಗಾಂಧಿ ಆಗಿ ದೊಡ್ಡ ಹೆಸರು ತಂದುಕೊಂಡಿದ್ದು ಕನ್ನಡದ 'ಮುಂಗಾರು ಮಳೆ' ಸಿನಿಮಾ. ಈ ಚಿತ್ರ ಗಣೇಶ್ ಅವರಿಗೆ ಸ್ಟಾರ್ ಹೀರೋ ಪಟ್ಟ ತಂದುಕೊಟ್ಟರೆ, ಪೂಜಾ ಗಾಂಧಿಗೆ ಕನ್ನಡದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿತ್ತು. 'ಮುಂಗಾರು ಮಳೆ' ನಂತರ ಪೂಜಾ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದರು. 'ಮುಂಗಾರು ಮಳೆ' ರೀತಿಯ ಸೂಪರ್ ಡೂಪರ್ ಹಿಟ್ ಸಿನಿಮಾ ಬಳಿಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ, 'ನಿನಗಾಗಿ' ಧಾರಾವಾಹಿಯಲ್ಲಿ ಗೆಸ್ಟ್ ರೋಲ್ ಮಾಡಿದ್ದಾರೆ.
ಸಿನಿಮಾದ ಬಳಿಕ ರಾಜಕೀಯಕ್ಕೂ ಎಂಟ್ರಿ ಕೊಟ್ಟರು ಪೂಜಾ. ಇದರ ಬೆನ್ನಲ್ಲೇ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿದ್ದು ಹಾಗೂ ಜೀವನದಲ್ಲಿ ದೊಡ್ಡ ಬ್ರೇಕ್ ಸಿಕ್ಕಿದ್ದು 'ದಂಡುಪಾಳ್ಯ' ಸಿನಿಮಾದಿಂದ. ಕಳೆದ ವರ್ಷ ವಿಜಯ್ ಘೋರ್ಪಡೆ ಎಂಬುವವರೊಂದಿಗೆ ಮದುವೆ ಆಗಿರುವ ಪೂಜಾ ಗಾಂಧಿ ಸದ್ಯ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಇದರ ಜೊತೆಗೆ ಕನ್ನಡ ಭಾಷೆಯ ಕುರಿತ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.
ಹೂವು ಮಾರಿದ ಸಾನ್ಯಾ ಅಯ್ಯರ್! ಮಾರಾಟಗಾರರ ಹೊಟ್ಟೆಗೆ ಬರೆ ಹಾಕ್ಬೇಡಮ್ಮಾ ಅನ್ನೋದಾ ಫ್ಯಾನ್ಸ್?