ಕನ್ನಡತಿ ರಶ್ಮಿಕಾ ಮಂದಣ್ಣಗೆ ಮರಾಠಿ ಪ್ರೀತಿ; ಮತ್ತೆ ವಿವಾದಕ್ಕೆ ಗುರಿಯಾಗ್ತಾರಾ ನ್ಯಾಷನಲ್ ಕ್ರಶ್..?!

By Shriram Bhat  |  First Published Aug 8, 2024, 1:48 PM IST

ಭಾರತೀಯ ಚಿತ್ರರಂಗದ ಸೆನ್ಸೇಷನಲ್ ಅಂದ್ರೆ ರಶ್ಮಿಕಾ ಮಂದಣ್ಣ. ಸ್ಯಾಂಡಲ್​ವುಡ್​​ ಟು ಬಾಲಿವುಡ್​ ವರೆಗೂ ಹಲ್​ ಚೆಲ್ ಎಬ್ಬಿಸುತ್ತಿರೋ ಬ್ಯೂಟಿ. ಸೌತ್ ಆಗ್ಲಿ ನಾರ್ತ್​ ಆಗ್ಲಿ ಯಾರದ್ದಾದ್ರು ಸೂಪರ್ ಸ್ಟಾರ್ ಸಿನಿಮಾಗಳು ಸೆಟ್ಟೇರುತ್ತಿವೆ ಅಂದ್ರೆ ಅಲ್ಲಿ..


ಕಿರಿಕ್ ಪಾರ್ಟಿಯ ಸಾನ್ವಿ ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡ ಚಿತ್ರರಂಗಕ್ಕೆ ಗುಡ್​ಬೈ ಹೇಳಿ ವರ್ಷಗಳೇ ಉರುಳಿವೆ. ಮತ್ತೆ ಕನ್ನಡ ಸಿನಿಮಾ ಮಾಡೋ ಬಗ್ಗೆ ರಶ್ಮಿಕಾಗೆ ಯೋಚನೆಯೇ ಬಂದಿಲ್ಲ. ರಶ್ಮಿಕಾಗೆ ಕನ್ನಡ ವಿರೋಧಿ ಆರೋಪ, ತೇಜೋವಧೆ ಆಗಾಗ ಆಗ್ತಾನೆ ಇರುತ್ತೆ. ರಶ್ಮಿಕಾ ಕೂಡ ಕನ್ನಡದ ಬಗ್ಗೆ ಅಸಡ್ಡೆ ಮಾತುಗಳನ್ನಾಡಿ ವಿವಾದ ಮಾಡಿಕೊಂಡಿದ್ರು. ಕನ್ನಡತನದಿಂದ ದೂರ ಇರೋ ರಶ್ಮಿಕಾ ಮಂದಣ್ಣ ಈಗ ಮರಾಠಿ ಭಾಷೆ ಕಲಿಯುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಸೆನ್ಸೇಷನಲ್ ಅಂದ್ರೆ ರಶ್ಮಿಕಾ ಮಂದಣ್ಣ. ಸ್ಯಾಂಡಲ್​ವುಡ್​​ ಟು ಬಾಲಿವುಡ್​ ವರೆಗೂ ಹಲ್​ ಚೆಲ್ ಎಬ್ಬಿಸುತ್ತಿರೋ ಬ್ಯೂಟಿ. ಸೌತ್ ಆಗ್ಲಿ ನಾರ್ತ್​ ಆಗ್ಲಿ ಯಾರದ್ದಾದ್ರು ಸೂಪರ್ ಸ್ಟಾರ್ ಸಿನಿಮಾಗಳು ಸೆಟ್ಟೇರುತ್ತಿವೆ ಅಂದ್ರೆ ಅಲ್ಲಿ ಮೊದಲು ಕೇಳೋದೇ ಶ್ರೀವಲ್ಲಿ ರಶ್ಮಿಕಾ ಹೆಸರು. ಸಿನಿಮಾ ಮಾತ್ರ ಅಲ್ಲ ಜಾಹಿರಾತಲ್ಲಾಗಲಿ. ಫ್ಯಾಷನ್​​ ಲೋಕದಲ್ಲಾಗಲಿ ರಶ್ಮಿಕಾದ್ದೇ ಹವಾ.. 

Tap to resize

Latest Videos

ಆ್ಯಂಕರ್​ ಅನುಶ್ರೀ ಮದುವೆಗೆ ಹುಡುಗನ ಹುಡುಕ್ತಿದಾರಂತೆ ಶಿವಣ್ಣ; ಮುಂದಿನ ವರ್ಷ ಮದುವೆ ಕನ್ಫರ್ಮ್‌!

ಮರಾಠಿ ಭಾಷೆ ಕಲಿಯುತ್ತಿರೋ ರಶ್ಮಿಕಾ ಮಂದಣ್ಣ! ರಶ್ಮಿಕಾ ಮರಾಠಿ ಸ್ಟುಡೆಂಟ್ ಆಗಿದ್ದೇಕೆ ಗೊತ್ತಾ..?
ಮರಾಠರ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟನೆ!

ಕನ್ನಡದ ಕುವರಿ ರಶ್ಮಿಕಾಗೆ ಮಾರಾಠಿ ಪ್ರೀತಿ! ಮರಾಠಿ ಭಾಷೆ ಕಲಿಯುತ್ತಿದ್ದಾರೆ ಶ್ರೀವಲ್ಲಿ..!
ರಶ್ಮಿಕಾ ಮಂದಣ್ಣ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಇಂಡಿಯಾ ಕೌಚರ್ ವೀಕ್​​ 2024ರ ಕಾರ್ಯಕ್ರಮದಲ್ಲಿ ಬೆಕ್ಕಿನ ನಡುಗೆಯಲ್ಲಿ ಮಿಂಚಿ ಸೆನ್ಸೇಷನ್​ ಸೃಷ್ಟಿಸಿದ್ರು. ಈಗ ರಶ್ಮಿಕಾ ಮರಾಠಿ ಭಾಷಾಭ್ಯಸ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗರಿಯಾಗಿದ್ದಾರೆ. ಕರ್ನಾಟಕ ಗಡಿಯಲ್ಲಿ ಮರಾಠಿಗರು ಕನ್ನಡಿಗರ ಮಧ್ಯೆ ನಡೆಯುತ್ತಿರೋ ಕಾಳಗಗಳನ್ನ ನೊಡುತ್ತಿದ್ದೇವೆ. 

ಪುನೀತ್ ಜೊತೆ ನಟಿಸಲು ರಾಘಣ್ಣ ಕೇಳಿದಾಗ ನಟ ದರ್ಶನ್ ಹೇಳಿದ್ದ ಮಾತು ಈಗ ಸಿಕ್ಕಾಪಟ್ಟೆ ವೈರಲ್!

ಈಗ ರಶ್ಮಿಕಾ ಮರಾಠಿ ಪ್ರೀತಿ ಸರಿ ಅಲ್ಲ ಅಂತ ಕೆಲವರು ಕಮೆಂಟ್ ಮಾಡುಡತ್ತಿದ್ದಾರೆ. ರಶ್ಮಿಕಾ ಮರಾಠಿ ಭಾಷೆ ಕಲಿಯೋಕೆ ಕಾರಣ ನಟ ವಿಕ್ಕಿ ಕೌಶಲ್​ ಜೊತೆ 'ಚವ್ವ' ಸಿನಿಮಾದಲ್ಲಿ ನಟಿಸುತ್ತಿರೋದು. ಛತ್ರಪತಿ ಸಂಭಾಜಿ ಮಹಾರಾಜ್​ ಜೀವನ ಕಥೆ ಆಧರಿಸಿ 'ಚವ್ವ' ಸಿನಿಮಾ ಬರತ್ತಿದೆ. ಶಿವಾಜಿ ಪುತ್ರ ಸಂಭಾಜಿ ಓರ್ವ ಮರಾಠಿ ವೀರ. ಸಂಭಾಜಿ ಪತ್ನಿ ಎಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಹೀಗಾಗೆ ರಶ್ಮಿಕಾಗೆ ಮರಾಠಿ ಕಲಿಸುತ್ತಿದ್ದಾರೆ.

click me!