ಸೌತ್ ಆಫ್ರಿಕಾದಲ್ಲಿ ಆಶಿಕಾ ಮೇಲೆ ಕಣ್ಣು ಹಾಕಿದವನಿಗೆ ಬಿತ್ತು ಗೂಸಾ!

By Kannadaprabha News  |  First Published Dec 19, 2019, 1:48 PM IST

ಚಂದನವನದ ಸುಂದರ ಚೆಲುವೆ ಆಶಿಕಾ ರಂಗನಾಥ್ ಜೀವನದಲ್ಲಿ ಎಂದೂ ಊಹಿಸಿಕೊಳ್ಳದ ಘಟನೆಯೊಂದು ಸೌತ್ ಆಫ್ರಿಕಾದಲ್ಲಿ ನಡೆದಿದೆ ಇದಕ್ಕೆ ಕಂಗಾಲಾಗದೆ ನಟಿ ಏನ್ ಮಾಡಿದ್ರು ಗೊತ್ತಾ? 


ಆಶಿಕಾ ರಂಗನಾಥ್ ಎರಡು ದಿನಗಳ ಹಿಂದಷ್ಟೇ ದಕ್ಷಿಣ ಆಫ್ರಿಕಾದಲ್ಲಿದ್ದರು. ಅವರು ಅಲ್ಲಿದ್ದಾಗ ಒಂದು ಘಟನೆ ನಡೆಯಿತು. ಒಂದು ದಿನ ಸಂಜೆ ಜೊಹಾನ್ಸ್‌ಬರ್ಗ್ ಸ್ಟ್ರೀಟ್‌ನಲ್ಲಿ ಹೋಗುತ್ತಿದ್ದಾಗ ಒಬ್ಬ ರೌಡಿ ಅವರ ಮೇಲೆ ಕಣ್ಣು ಹಾಕಿ, ಕಿರಿಕ್ ಮಾಡಿದ. ಆತನ ಕಪಾಳಕ್ಕೆ ಬಾರಿಸಿದರು ಆಶಿಕಾ. ಆತ ಮತ್ತಷ್ಟು ಕಿರಿಕ್ ಶುರು ಮಾಡಿದ. ಆ ಹೊತ್ತಿಗೆ ಆಶಿಕಾ ನೆರವಿಗೆ ಬಂದವರು ‘ರೋಗ್’ ಖ್ಯಾತಿಯ ಕನ್ನಡದ ನಟ ಇಶಾನ್.

ನೋಟದಲ್ಲೇ ಮಳ್ಳ ಮಾಡ್ತಾಳೆ ಈ ಮಿಲ್ಕ್ ಬ್ಯೂಟಿ!

Tap to resize

Latest Videos

ಅದು ಸೌತ್ ಆಫ್ರಿಕನ್ ರೌಡಿ ಗ್ಯಾಂಗ್. ಆ ಗ್ಯಾಂಗ್ ಹಾಗೂ ಇಶಾನ್ ನಡುವೆ ಹೊಡೆದಾಟ. ಕೊನೆಗೂ ಇಶಾನ್ ರೌಡಿಗಳನ್ನು ಥಳಿಸಿ, ಬುದ್ಧಿ ಕಲಿಸಿ, ಆಶಿಕಾ ಮುಂದೆ ಹೀರೋ ಆದರು! ಇದು ನಡೆದಿದ್ದು ರಿಯಲ್ ಆಗಿ ಅಲ್ಲ. ಬದಲಿಗೆ ಪವನ್ ಒಡೆಯರ್ ನಿರ್ದೇಶನದಲ್ಲಿ ಇಶಾನ್ ಹಾಗೂ ಆಶಿಕಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ರೆಮೋ’ ಚಿತ್ರಕ್ಕಾಗಿ. ರೆಮೋ ಚಿತ್ರತಂಡ ಸೌತ್ ಆಫ್ರಿಕಾ ಹೋಗಿ ಬಂದಿದೆ. ಜೊಹಾನ್ಸ್‌ಬರ್ಗ್, ಕೇಪ್ ಟೌನ್ ಹಾಗೂ ಡರ್ಬನ್‌ನಲ್ಲಿ ಚಿತ್ರದ ಹಾಡು, ಫೈಟು ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಸಿದೆ. ಅದು ಚಿತ್ರದ ಪ್ರಮುಖ ಆ್ಯಕ್ಷನ್ ಸನ್ನಿವೇಶ. ಅದನ್ನು ಸ್ಟಂಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ನಿರ್ದೇಶಿಸಿದ್ದಾರೆ.

ಫ್ರಾನ್ಸ್‌, ಸ್ವಿಜರ್‌ಲ್ಯಾಂಡ್‌ ಬೀದಿಯಲ್ಲಿ ಕಾಣಿಸಿಕೊಂಡ ಚುಟುಚುಟು ಚೆಲುವೆ!

ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನದಲ್ಲಿ ಹಾಡಿನ ಭಾಗದ ಚಿತ್ರೀಕರಣ ಕೂಡ ಮುಗಿದಿದೆ. ಚಿತ್ರದ ಮೊದಲಭಾಗದ ಪೂರ್ಣ ಕತೆ ವಿದೇಶದಲ್ಲೇ ನಡೆಯಲಿದೆ. ಸೌತ್ ಆಫ್ರಿಕಾ, ಸಿಂಗಾಪುರ್, ಮಲೇಷಿಯಾ, ಬ್ಯಾಂಕಾಕ್‌ನಲ್ಲಿಯೇ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್ ಹಾಕಿಕೊಂಡಿದೆ. ಒಟ್ಟಾರೆ ಈ ಸಿನಿಮಾದಲ್ಲಿ ಅರ್ಧ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ ಪವನ್ ಒಡೆಯರ್.

ಆಶಿಕಾ ರಂಗನಾಥ್ ಫೋನ್‌ನಲ್ಲಿರುವುದೆಲ್ಲಾ ಲೀಕ್?

 

click me!