ಶ್ರೀಮುರಳಿ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್‌ ಕೊಟ್ರು ಸಿನಿಮಾ ಗಿಫ್ಟ್!

By Web Desk  |  First Published Dec 17, 2019, 3:26 PM IST

ನಟ ಶ್ರೀಮುರಳಿ ಇಂದು(ಡಿ. 17) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಲು ರೆಡಿ ಆಗಿದ್ದರು. ಆದರೆ ಅವರು ಈ ಬಾರಿ ತಮ್ಮ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ಬದಲಿಗೆ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಸಿಟಿಯಿಂದ ಹೊರಹೋಗುತ್ತಿದ್ದಾರೆ ಎನ್ನಲಾಗಿದೆ. 


ಈ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಎರಡು ಸಿಹಿ ಸುದ್ದಿ ಸಿಕ್ಕಿವೆ.

1. ಬಹುದಿನಗಳಿಂದ ಸುದ್ದಿಯಾಗುತ್ತಲೇ ಬಂದಿದ್ದ ‘ಮದಗಜ’ ಚಿತ್ರವು ಅಂತಿಮವಾಗಿ ಅದೇ ಹೆಸರಲ್ಲಿ ಸೆಟ್ಟೇರಲು ರೆಡಿ ಆಗಿದೆ.

Tap to resize

Latest Videos

2. ‘ಕೆಜಿಎಫ್’ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ಮಾಣದ ಹೊಸ ಚಿತ್ರಕ್ಕೂ ಶ್ರೀಮುರಳಿ ಹೀರೋ ಆಗಿದ್ದಾರೆ. ಪ್ರಶಾಂತ್ ನಿರ್ದೇಶನದ ‘ಉಗ್ರಂ ವೀರಂ’ ಸ್ವಲ್ಪ ಸಮಯದ ನಂತರ ಆರಂಭವಾಗುವ ಸಾಧ್ಯತೆ ಇದೆ.

'ಮದಗಜ’ ಶೀಘ್ರವೇ ಶುರು: ಶ್ರೀಮುರಳಿ ಈಗ ನಾಯಕರಾಗಿ ಅಭಿನಯಿಸುತ್ತಿರುವ ಚಿತ್ರ‘ಮದಗಜ’. ಉಮಾಪತಿ ಶ್ರೀನಿವಾಸ ಗೌಡ ಇದರ ನಿರ್ಮಾಪಕರು.‘ಅಯೋಗ್ಯ’ಚಿತ್ರದ ಖ್ಯಾತಿಯ ಮಹೇಶ್ ಕುಮಾರ್ ಇದರ ನಿರ್ದೇಶಕರು. ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಚಿತ್ರ ಇಷ್ಟರಲ್ಲೇ ಸೆಟ್ಟೇರಬೇಕಿತ್ತು. ಆದರೆ ಅದಕ್ಕೆ ಹಲವು ಅಡೆಚಣೆಗಳು ಎದುರಾಗಿ ಇಲ್ಲಿಯತನಕ ತಡವಾಯಿತು. ಎಲ್ಲವೂ ಈಗ ಇತ್ಯರ್ಥವಾಗಿವೆ. ‘ಮದಗಜ’ ಹೆಸರಲ್ಲೇ ಆ ಚಿತ್ರ ಸೆಟ್ಟೇರುತ್ತಿದೆ. ಈಗ ಶ್ರೀಮುರಳಿ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಪೊಸ್ಟರ್ ಕೂಡ ಲಾಂಚ್ ಆಗಿದೆ. ಇಷ್ಟರಲ್ಲೇ ಮುಹೂರ್ತವೂ ಫಿಕ್ಸ್ ಎನ್ನುತ್ತಿವೆ ಮೂಲಗಳು.

ಗಗನ ಮುಟ್ಟಿತು ಭರಾಟೆ ಹುಡುಗನ ಸಂಭಾವನೆ; 21 ಕೋಟಿ ನಿಜಾನಾ?

ಕುತೂಹಲ ಹೆಚ್ಚಿಸಿರುವ ಪ್ರಶಾಂತ್ ನೀಲ್ ಸಿನಿಮಾ: ‘ಮದಗಜ’ ಚಿತ್ರದ ಜತೆಗೆ ಶ್ರೀಮುರಳಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು ಪ್ರಶಾಂತ್ ನೀಲ್ ನಿರ್ಮಾಣದ ಸಿನಿಮಾ. ‘ಉಗ್ರಂ’ ನಂತರ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಶ್ರೀಮರಳಿ ಒಂದಾಗುತ್ತಿದ್ದಾರೆನ್ನುವ ಸುದ್ದಿ ಕೊನೆಗೂ ನಿಜವಾಗಿದೆ. ಶ್ರೀಮುರಳಿ ಅವರಿಗಾಗಿ ಪ್ರಶಾಂತ್ ನೀಲ್ ಒಂದು ಸಿನಿಮಾ ನಿರ್ದೇಶನ ಮಾಡುತ್ತಾರೆ ಅನ್ನುವುದು ಹಳೆಯ ಸುದ್ದಿ.

ಅದರ ಜತೆಗೆ ಹೊಸ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಅನ್ನುವುದು ಹೊಸ ಸುದ್ದಿ. ನಿರ್ಮಾಪಕ ಕೃಷ್ಣ ಚೈತನ್ಯ ಅವರ ಸ್ವರ್ಣಲತಾ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಲಕ್ಕಿ ಸಿನಿಮಾ ಖ್ಯಾತಿಯ ಡಾ.ಸೂರಿ ಆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ‘ಮದಗಜ’ ಮುಗಿದ ನಂತರ ಇದು ಶುರುವಾಗಲಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ಇವಿಷ್ಟು ತಾಜಾ ಸುದ್ದಿಗಳು ರಿವೀಲ್ ಆಗಿದ್ದು, ಅಭಿಮಾನಿಗಳ ಕಾತರ ಹೆಚ್ಚಿಸಿದೆ.

ಭರಾಟೆಯಲ್ಲಿ ಭರ್ಜರಿ ಸೌಂಡ್ ಮಾಡಲು ಬರ್ತಿದ್ದಾನೆ ಅಗಸ್ತ್ಯಾ!

click me!