ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನಕ್ಕೆ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಕನ್ನಡದಲ್ಲೇ ಸಂತಾಪ ಸೂಚಿಸಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ (86) ಅಕ್ಟೋಬರ್ 20ರಂದು ವಿಧಿವಶರಾಗಿದ್ದು ಸಂಜೆ ಅವರ ಅಂತ್ಯಕ್ರಿಯೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ವಾಲ್ಮಿಕಿ ಸಂಪ್ರದಾಯದಂತೆ ನೆರವೇರಿದೆ.
ತಾಯಿ ಸಾವಿನಿಂದ ಸುದೀಪ್ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಕಿಚ್ಚ ಸುದೀಪ್ ಅವರ ತಾಯಿಯ ನಿಧನಕ್ಕೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರೋಜಾ ಸಂಜೀವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದು, ಕಿಚ್ಚ ಸುದೀಪ್ ಗೆ ಧೈರ್ಯ ತುಂಬಿದ್ದಾರೆ.
ಉದ್ಯಮಿ ಅಹುಜಾ ಜತೆ ಸಲ್ಮಾನ್ ಮಾಜಿ ಅತ್ತಿಗೆ ಡೇಟಿಂಗ್,ತಾಯಿ ಪ್ರೀತಿಗೆ ಮಗ ಒಪ್ಪಿಗೆ
ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಸಂತಾಪ ಸೂಚಿಸಿದ್ದಾರೆ. ಖ್ಯಾತ ನಟ ಕಿಚ್ಚ ಸುದೀಪ್ ಅವರ ತಾಯಿ ಮೂರ್ತಿ ಶ್ರೀಮತಿ ಸರೋಜಾ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ. ಸರೋಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ತಮ್ಮ ನಟನೆಯ ಮೇಲೆ ತಾಯಿಯ ಪ್ರಭಾವ ಮತ್ತು ಪ್ರೋತ್ಸಾಹವಿದೆ ಎಂದು ಸುದೀಪ್ ಹೇಳಿದ್ದರು. ತಾಯಿಯ ನಷ್ಟದಿಂದ ಬೇಗ ಚೇತರಿಸಿಕೊಳ್ಳಬೇಕು. ಸುದೀಪ್ ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು ಎಂದು ಪವನ್ ಕಲ್ಯಾಣ್ ಕನ್ನಡದಲ್ಲೇ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ.
ಕಿಚ್ಚನ ತಾಯಿಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತಾ? ಸುದೀಪನಿಗೆ ಒಂದೇ ದಿನ 2 ಬಾರಿ ಆಶೀರ್ವಾದ ಮಾಡಿದ್ದ ಅಮ್ಮ!
ಕಿಚ್ಚ ಸುದೀಪ್ ಅವರ ತಾಯಿ ವಯೋಸಹಜ ಸಮಸ್ಯೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಕಾರಣ ಭಾನುವಾರ ಬೆಳಗ್ಗೆ 7 ಗಂಟೆಗೆ ಕೊನೆಯುಸಿರೆಳೆದಿದ್ದಾಳೆ. ಸರೋಜ ಅವರು ಮೂಲತಃ ಉಡುಪಿ ಜಿಲ್ಲೆಯ ಉದ್ಯಾವರದವರು ಅವರ ಮಾತೃಭಾಷೆ ತುಳು . ಈ ಬಗ್ಗೆ ಸುದೀಪ್ ಬಿಗ್ ಬಾಸ್ ಶೋನಲ್ಲಿ ಕೂಡ ಹೇಳಿಕೊಂಡಿದ್ದರು.
ಶ್ರೀ ಅವರ ಕುಟುಂಬಕ್ಕೆ ತೀವ್ರ ಸಂತಾಪಗಳು pic.twitter.com/YQ0RQUoVwf
— Deputy CMO, Andhra Pradesh (@APDeputyCMO)