ದರ್ಶನ್‌ಗೆ ಅಪ್ಪ ಅನ್ನಲ್ಲ ನನ್ಮಗಳು ಖುಷಿ; ಸಂಜಯ್ ಸಿಂಗ್ ಹೇಳಿಕೆ ವೈರಲ್!

Published : Dec 18, 2024, 12:53 PM IST
ದರ್ಶನ್‌ಗೆ ಅಪ್ಪ ಅನ್ನಲ್ಲ ನನ್ಮಗಳು ಖುಷಿ; ಸಂಜಯ್ ಸಿಂಗ್ ಹೇಳಿಕೆ ವೈರಲ್!

ಸಾರಾಂಶ

ದರ್ಶನ್ ಮತ್ತು ಪವಿತ್ರಾ ಗೌಡ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪವಿತ್ರಾ ಅವರ ಮಾಜಿ ಪತಿ ಸಂಜಯ್ ಸಿಂಗ್, ತಮ್ಮ ಮಗಳು ದರ್ಶನ್‌ರನ್ನು "ಅಪ್ಪ" ಎಂದು ಕರೆಯುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಪವಿತ್ರಾ ಅವರ ಸಿನಿಮಾ ರಂಗ ಪ್ರವೇಶಕ್ಕೆ ನಟಿ ಕೋಳಿ ರಮ್ಯಾ ಕಾರಣ ಎಂದು ಆರೋಪಿಸಿದ್ದಾರೆ. ಸಂಜಯ್, ಪವಿತ್ರಾ ಒಪ್ಪಿದರೆ ಮತ್ತೆ ಸಂಸಾರ ಮಾಡಲು ಸಿದ್ಧ ಎಂದಿದ್ದಾರೆ.

ನಟ ದರ್ಶನ್ (Darshan Thoogudeepa) ಹಾಗೂ ಪವಿತ್ರಾ ಗೌಡ (Pavithra Gowda) ಅವರಿಬ್ಬರೂ ಜೈಲಿನಿಂದ ಬೇಲ್ ಮೂಲಕ ಬಿಡುಗಡೆಯಾಗಿ ಹೊರಬಂದಿರುವ ಸಂಗತಿ ಗೊತ್ತೇ ಇದೆ. ಕಳೆದ  ಐದು ತಿಂಗಳುಗಳಿಗಿಂತ ಹೆಚ್ಚು ದಿನಗಳಿಂದ , ಅಶ್ಲೀಲ ಮೆಸೇಜ್ ಕಳುಹಿಸಿ ಕೊಲೆಯಾಗಿರುವ ರೇಣುಕಾಸ್ವಾಮಿ ಕೇಸ್‌ನಲ್ಲಿ ಆರೋಪಿಗಳಾಗಿ ದರ್ಶನ್, ನಟಿ ಹಾಗೂ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಜೈಲಿನಲ್ಲಿದ್ದು ಈಗ ಹೊರಗೆ ಬಂದಿದ್ದಾರೆ. ಈ ವೇಳೆ, ನಟಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (Sanjay Singh) ಅವರು ಯೂಟ್ಯೂಬ್ ಸಂದರ್ಶನದಲ್ಲಿ ಒಂದು ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ. ಅದೇನು ಗೊತ್ತಾ?

ಸಂಜಯ್ ಸಿಂಗ್ ಅವರು ಯೂಟ್ಯೂಬ್ ಸಂದರ್ಶನದಲ್ಲಿ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಅವರ ಮಗಳು ಖುಷಿಯ ವಿಚಾರವೂ ಒಂದು. 'ನನ್ನ ಮಗಳು ನನಗೆ ಡ್ಯಾಡಿ, ನಾನಾ ಹಾಗೂ ದಾದಾ ಅಂತೆಲ್ಲ ಕರೆಯುತ್ತಾಳೆ. ಆಗಾಗ ನಾನು ಫೋನಿನಲ್ಲಿ ಮಗಳು ಖುಷಿಯ ಜೊತೆ ಮಾತನ್ನಾಡುತ್ತೇನೆ. ಒಮ್ಮೆ ಅವಳು ನಟ ದರ್ಶನ್‌ ಬಗ್ಗೆ ಹೇಳುತ್ತ 'ನಾನು ದರ್ಶನ್‌ಗೆ ಅಪ್ಪ ಅಂತ ಕರೆಯಲ್ಲ' ಎಂದಿದ್ದಾಳೆ ಎಂದಿದ್ದಾರೆ ಪವಿತ್ರಾ ಗೌಡ ಮಾಜಿ ಪತಿ ಹಾಗೂ ಖುಷಿಯ ತಂದೆ ಸಂಜಯ್ ಸಿಂಗ್. 

ಪವಿತ್ರಾ ಗೌಡಗೆ ಸಿನಿಮಾ ನಟಿಯಾಗುವ ಹುಚ್ಚು ಹಿಡಿಸಿದ್ದು ಯಾರು? ಸೀಕ್ರೆಟ್ ಹೊರಬಿತ್ತು!

ಮಗಳು ಖುಷಿಯ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿರುವ ಸಂಜಯ್ ಸಿಂಗ್, ಪವಿತ್ರಾ ಗೌಡ ಬಗ್ಗೆಯೂ ಹೇಳಿಕೊಂಡಿದ್ದಾರೆ. 'ಲವ್ ಮ್ಯಾರೇಜ್ ಮಾಡಿಕೊಂಡು ಪವಿತ್ರಾ ಗೌಡ ನ್ನೊಂದಿಗೆ ದಾಂಪತ್ಯ ಜೀವನ ಸಾಗಿಸುತ್ತಿದ್ದರು. ಆದರೆ, ಅವರ ಸ್ನೇಹಿತೆಯಾಗಿ ಮನೆಗೆ ಬರುತ್ತಿದ್ದ ಕನ್ನಡದ ಸೀರಿಯಲ್ ನಟಿಯೊಬ್ಬರು ಪವಿತ್ರಾ ಗೌಡ ಅವರಿಗೆ ಈ ಬಣ್ಣದ ಲೋಕದ ಹುಟ್ಟು ಹಿಡಿಸಿದ್ದಾರೆ. ಅವರಿಂದಲೇ ಪವಿತ್ರಾ ಗೌಡ ಅವರು ಸಿನಿಮಾ, ಶೂಟಿಂಗ್, ಕೆರಿಯರ್ ಅಂತ ಸಂಸಾರ ತ್ಯಜಿಸಿ ಮೇಕಪ್ ಹಾಕಿಕೊಳ್ಳಲು ಶುರು ಮಾಡಿದ್ದು' ಎಂದಿದ್ದಾರೆ ಮಾಜಿ ಪತಿ ಸಂಜಯ್. 

'ನಾವಿಬ್ಬರು ಲವ್ ಮ್ಯಾರೇಜ್ ಮಾಡಿಕೊಂಡು, ಮಗಳೊಬ್ಬಳಿಗೆ ಪೋಷಕರಾಗಿ ಸಂಸಾರ ನಡೆಸುತ್ತಿದ್ದೆವು. ಆಗ ನಮ್ಮ ಮನೆಗೆ ಪವಿತ್ರಾ ಜೊತೆ ನಟಿ 'ಕೋಳಿ ರಮ್ಯಾ' ಬರುತ್ತಿದ್ದರು. ಅವರು ನಮ್ಮ ಮನೆಯಲ್ಲಿ ಕೂಡ ಬಹಳಷ್ಟು ಸಮಯ ಇರುತ್ತಿದ್ದರು. ಆ ಸಮಯದಲ್ಲಿ ನನ್ನ ಹೆಂಡತಿಯಾಗಿದ್ದ ಪವಿತ್ರಾ ಗೌಡ ಅವರಿಗೆ ಸಿನಿಮಾ ನಟಿಯಾಗಲೇಬೇಕು ಎಂಬ ಆಸೆ ಹುಟ್ಟಿದ್ದು, ಅದಕ್ಕಾಗಿ ಪವತ್ರಾ ಹಠ ಹಿಡಿದಿದ್ದು. ಆ ಬಳಿಕ ಪವಿತ್ರಾಗೆ ಬಣ್ಣದ ಲೋಕದ ಸೆಳೆತ ಜಾಸ್ತಿಯಾಗಿ, ಬಳಿಕ ನಮ್ಮ ಸಂಸಾರ ವಿಚ್ಛೇದನದತ್ತ ಸರಿಯಿತು' ಎಂದಿದ್ದಾರೆ ಸಂಜಯ್ ಸಿಂಗ್. 

ಜೈಲಿಂದ ಹೊರಬಂದ ಪವಿತ್ರಾ ಗೌಡ; ಹೊರಬಿತ್ತಾ 'ನಾ ನಿನ್ನ ಬಿಡಲಾರೆ' ಸಂದೇಶ?

ಒಟ್ಟಿನಲ್ಲಿ, ಸಂಸಾರ ಮಾಡಬೇಕು ಎಂದು ಸಂಜಯ್ ಸಿಂಗ್ ಜೊತೆ ಸಪ್ತಪದಿ ತುಳಿದ ಪವಿತ್ರಾ ಗೌಡ ಬಳಿಕ ಕೋಳಿ ರಮ್ಯಾ ಸಹವಾಸದಿಂದಲೇ ನಟಿಯಾದರೇ? ನಿಖರವಾಗಿ ಬೇರೆಯವರು ಹೇಳಲಾಗದು. ಆದರೆ, ಸಂಜಯ್ ಸಿಂಗ್ ಹೇಳುವ ಪ್ರಕಾರ ಹೌದು, ಪವಿತ್ರಾ ಸಂಸಾರಕ್ಕಿಂತ ಹೆಚ್ಚಾಗಿ ನಟಿಯಾಗಲು ಹಾತೊರಿದಿದ್ದು ಆ ಕೋಳಿ ರಮ್ಯಾ ಸಹವಾಸದಿಂದಲೇ ಆಗಿದೆ.

ಬಳಿಕ ಪವಿತ್ರಾ ಗೌಡ ಅವರು 'ಸಾಗುವ ದಾರಿಯಲ್ಲಿ', 'ಪ್ರೀತಿ ಕಿತಾಬು' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಕಾರಣಕ್ಕೇ ಕನ್ನಡದ ಸ್ಟಾರ್ ನಟ ದರ್ಶನ್ ಸಂಪರ್ಕಕ್ಕೂ ಬಂದಿದ್ದಾರೆ. ನಟ ದರ್ಶನ್ ಸಿನಿಮಾದ ಆಡಿಶನ್‌ಗೆ ಬಂದಿದ್ದ ಪವಿತ್ರಾ ಗೌಡ ಅವರಿಗೆ ದರ್ಶನ್ ಪರಿಚಯವಾಗಿ, ಬಳಿಕ ಅದು ಸ್ನೇಹಕ್ಕೆ ತಿರುಗಿ, ಅವರಿಬ್ಬರೂ ತುಂಬಾ ಕ್ಲೋಸ್ ಆಗಿದ್ದು ಈಗ ಇತಿಹಾಸ.

ಎಲ್ಲಾ ಕಮಿಟ್‌ಮೆಂಟ್‌ ಮುಗಿಸಿಯೇ ಅಮೇರಿಕಕ್ಕೆ ಹೊರಟಿದ್ದೇಕೆ ಶಿವರಾಜ್‌ಕುಮಾರ್?

ಅಷ್ಟೇ ಅಲ್ಲ, ಪರಸ್ಪರ ಹತ್ತಿರವಾಗಿದ್ದ ದರ್ಶನ್ ಹಾಗೂ ಪವಿತ್ರಾ ಗೌಡ, ಕೊಲೆ ಕೇಸ್ ಆರೋಪಿಗಳಾಗಿ ಜೈಲು ಸೇರಿ ಈಗ ಜಾಮೀನು ಪಡೆದುಕೊಂಡು ಹೊರಗೆ ಬಂದಿದ್ದಾರೆ. ಈಗ ಪವಿತ್ರಾ ಮಾಜಿ ಪತಿ ಸಂಜಯ್ ಸಿಂಗ್ ಅವರು ಪವಿತ್ರಾ ಒಪ್ಪ ಬಂದರೆ ತಾವು ಮತ್ತೆ ಅವರೊಂದಿಗೆ ಸಂಸಾರ ಮಾಡಲು ಸಿದ್ದ' ಎಂದು ಹೇಳುತ್ತಿದ್ದಾರೆ. ಆದರೆ ಅದು ಸಾಧ್ಯವೇ? ಈ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?