
ನಟ ಶಿವರಾಜ್‌ಕುಮಾರ್ ಅವರು ಒಪ್ಪಿಕೊಂಡಿದ್ದ ಎಲ್ಲಾ ಕಮಿಟ್ಮೆಂಟ್ಗಳನ್ನು ಮುಗಿಸಿ ಅಮೆರಿಕಕ್ಕೆ ತೆರಳಲು ಸಜ್ಜಾಗಿದ್ದಾರೆ.
ಇಂದು, ಅಂದರೆ 18 ಡಿಸೆಂಬರ್ 2024ರಂದು, ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ನಟ ಶಿವಣ್ಣ ಅಮೆರಿಕಕ್ಕೆ ತೆರಳಲು ಸಜ್ಜಾಗಿದ್ದಾರೆ. ಕನ್ನಡದ ನಟ, ಕರುನಾಡು ಚಕ್ರವರ್ತಿ ಖ್ಯಾತಿಯ ಡಾ. ಶಿವರಾಜ್ ಕುಮಾರ್ ಅವರು ಅಲ್ಲೇ ಶಸ್ತ್ರ ಚಿಕಿತ್ಸೆಗೆ ಕೂಡ ಒಳಗಾಗಲಿದ್ದಾರೆ. ಅಮೆರಿಕಾದಲ್ಲಿ ಈಗಾಗಲೇ ಚಿಕಿತ್ಸೆಯ ಕೆಲವು ಹಂತಗಳನ್ನು ಪೂರೈಸಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆ ಹಾಗೂ ಸರ್ಜರಿ ಅಗತ್ಯವಿದೆ ಎನ್ನಲಾಗಿದೆ.
ಹೌದು, ತಾವು ಒಪ್ಪಿಕೊಂಡಿದ್ದ ಎಲ್ಲಾ ಕಮಿಟ್ಮೆಂಟ್ಗಳನ್ನು ಮುಗಿಸಿ ಅಮೇರಿಕಾಕ್ಕೆ ತೆರಳಲು ಸಜ್ಜಾಗಿದ್ದಾರೆ ಕರುನಾಡ ಚಕ್ರರ್ತಿ ನಟ ಶಿವಣ್ಣ. ಅನಾರೋಗ್ಯಕ್ಕಾಗಿ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ಶಿವರಾಜ್ ಕುಮಾರ್ ಅವರನ್ನು ನಟ ಸುದೀಪ್ ಅವರು ಭೇಟಿಯಾಗಿ ಶುಭ ಹಾರೈಸಿದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಡಿಸೆಂಬರ್ 24ರಂದು ಸರ್ಜರಿಗೆ ಒಳಗಾಗಲಿದ್ದಾರೆ ನಟ ಶಿವರಜ್ ಕುಮಾರ್. ಶಸ್ತ್ರಚಿಕಿತ್ಸೆ ಬಳಿಕ ಕೆಲ ತಿಂಗಳು ವಿಶ್ರಾಂತಿ ಪಡೆದು ಬಳಿಕ ತಾಯ್ನಾಡು ಭಾರತಕ್ಕೆ ಬರಲಿದ್ದಾರೆ ಶಿವಣ್ಣ.
ಶಿವಣ್ಣರಿಗೆ ಕ್ಯಾನ್ಸರ್ ಹೌದೋ, ಅಲ್ಲವೋ ಚರ್ಚೆ ಅನಗತ್ಯ; ಆದಷ್ಟು ಬೇಗ ಗುಣಮುಖರಾಗಲಿ
'ಗುಣಮುಖರಾಗಿ ಬನ್ನಿ ಶಿವಣ್ಣ' ಎಂದು ಲಕ್ಷಾಂತರ ಅಭಿಮಾನಿಗಳು ಇದೀಗ ಹಾರೈಸುತ್ತಿದ್ದಾರೆ. ಯಾವುದೋ ಆಟೋ ಇಮ್ಯೂನ್ ಖಾಯಿಲೆಗೆ ತುತ್ತಾಗಿ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ನಟ ಶಿವಣ್ಣ, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕಾದಲ್ಲಿ ಈಗಾಗಲೇ ಚಿಕಿತ್ಸೆಯ ಕೆಲವು ಹಂತಗಳನ್ನು ಪೂರೈಸಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆ ಹಾಗೂ ಸರ್ಜರಿ ಅಗತ್ಯ ಇರುವ ಕಾರಣಕ್ಕೆ ಇದೀಗ, ಅಮೆರಿಕಾಕ್ಕೆ ಹೊರಟು ನಿಂತಿದ್ದಾರೆ. ಬಳಿಕ ಕೆಲವು ಸಮಯಗಳ ವಿಶ್ರಾಂತಿ ಅಗತ್ಯವಿದ್ದು, ಆ ಕಾರಣಕ್ಕೇ ಅವರು ಎಲ್ಲಾ ಕಮಿಟ್‌ಮೆಂಟ್ ಮುಗಿಸಿಯೇ ಹೊರಟಿದ್ದಾರೆ.
ಇತ್ತೀಚೆಗೆ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ತೆರಳಿ ಶಿವಣ್ಣ ಹಾಗೂ ಗೀತಕ್ಕ ದಂಪತಿಗಳು ದೇವರಿಗೆ ಮುಡಿ ಅರ್ಪಿಸಿ ಹರಕೆ ತೀರಿಸಿದ್ದಾರೆ. ಮೊನ್ನೆ ಕುಟುಂಬ ಹಾಗೂ ಆಪ್ತರ ಜೊತೆ ಹೊಟೆಲ್ ಒಂದರಲ್ಲಿ ಔತಟಕೂಟ ಏರ್ಪಡಿಸಿ ವಿಶೇಷ ಊಟ ಸವಿದಿದ್ದಾರೆ. ಸಿನಿಮಾ ಪ್ರೊಡಕ್ಷನ್ ಕೆಲಸಗಳನ್ನು ನಿರ್ವಹಿಸುತ್ತಲೇ ಶಿವಣ್ಣ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ತಮ್ಮ ಪತಿಗೂ ಸಾಥ್ ನೀಡುತ್ತಿದ್ದಾರೆ. ಇಡೀ ಕುಟುಂಬ ಶಿವಣ್ಣರ ಬೆಂಬಲಕ್ಕೆ ನಿಂತಿದೆ.
ಜೈಲಿಂದ ಹೊರಬಂದ ಪವಿತ್ರಾ ಗೌಡ; ಹೊರಬಿತ್ತಾ 'ನಾ ನಿನ್ನ ಬಿಡಲಾರೆ' ಸಂದೇಶ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.