ತಾಯಿ ತೀರಿಕೊಂಡ 3 ತಿಂಗಳಿಗೆ ಮದ್ವೆ ಸೆಟ್ ಆಯ್ತು ಆದ್ರೆ ಮದುವೆ ಹಿಂದಿನ ದಿನವೇ ಗಂಡನ ತಂದೆ ಅಗಲಿದರು: ಕಾವ್ಯಾ ಶಾ

By Vaishnavi Chandrashekar  |  First Published Dec 18, 2024, 12:51 PM IST

ನಟಿ ಕಾವ್ಯಾ ಶಾ ಮತ್ತು ನಿರ್ಮಾಪಕ ವರುಣ್ ಕುಮಾರ್ 12 ವರ್ಷಗಳ ಪ್ರೀತಿಯ ನಂತರ ಮದುವೆಯಾದರು. ಮದುವೆಯ ಹಿಂದಿನ ದಿನ ವರುಣ್ ಅವರ ತಂದೆ ತೀರಿಕೊಂಡ ಕಾರಣ ಮದುವೆ ಮುಂದೂಡಲ್ಪಟ್ಟಿತ್ತು. ಕಾವ್ಯಾ, ಯಶಸ್ವಿ ಸಂಬಂಧಕ್ಕೆ ಮೂರು ಸಲಹೆಗಳನ್ನು ನೀಡಿದ್ದಾರೆ.


ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ, ಮೂಕಜ್ಜಿಯ ಕನಸು, ಮುಗಿಲ್ ಪೇಟೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಾಗೂ ಬಂಗಾರ, ಚಿ ಸೌ ಸಾವಿತ್ರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಕಾವ್ಯಾ ಶಾ ಮತ್ತು ನಿರ್ಮಾಪಕ ಹಾಗೂ ಈವೆಂಟ್ ಆಯೋಜಕ ವರುಣ್ ಕುಮಾರ್ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು. ಚಿತ್ರರಂಗದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಅಲ್ಲಿ ವರುಣ್ ಇದ್ದೇ ಇರುತ್ತಾರೆ. ಇವರಿಬ್ಬರ ಲೈಫ್‌ ಸ್ಟೋರಿ ಯಾವ ಸಿನಿಮಾಗಿಂತ ಕಡಿಮೆ ಇಲ್ಲ ಎಂದು ಕಾವ್ಯಾ ಹಂಚಿಕೊಂಡಿದ್ದಾರೆ.

'ತಾಯಿ ತೀರಿಕೊಂಡ ಮೂರು ತಿಂಗಳಿಗೆ ಮದುವೆ ಫಿಕ್ಸ್‌ ಅಯ್ತು. ಮದುವೆ ಹಿಂದಿನ ದಿನ ವರುಣ್ ತಂದೆ ತೀರಿಕೊಂಡರು ಹೀಗಾಗಿ ಮದುವೆ ಕ್ಯಾನ್ಸಲ್ ಆಯ್ತು. ಮತ್ತೆ ಎರಡು ತಿಂಗಳ ನಂತರ ಮದುವೆ ಆಗಿದ್ದು. ನಮ್ಮ ಜೀವನ ಸೇಮ್ ಸಿನಿಮಾ ರೀತಿ ಇದೆ. 12 ವರ್ಷಗಳ ಕಾಲ ಪ್ರೀತಿಸಿದ ನಾವು ಮದುವೆ ಆಗಬೇಕು ಅಂದುಕೊಂಡಾಗ ನಮ್ಮ ಜೀವನದಲ್ಲಿ ಈ ರೀತಿ ಘಟನೆ ನಡೆದರೆ ಬೇಸರ ಆಗುತ್ತದೆ. ನಾವಿಬ್ಬರೂ ಒಟ್ಟಿಗೆ ಮೇಲೆ ಕೆಳಗೆ ನೋಡಿದ್ದೀವಿ. ಕೆಲಸ ವಿಷಯದಲ್ಲಿ ಒಬ್ಬರನೊಬ್ಬರು ತುಂಬಾ ಸಪೋರ್ಟ್ ಮಾಡುತ್ತೀವಿ ನನಗೆ ದೊಡ್ಡ ಶಕ್ತಿನೇ ಅವರು ಏಕೆಂದರೆ ಯಾವತ್ತೂ ಅಲ್ಲಿ ಹೋಗಬೇಡ ಇಲ್ಲಿ ಹೋಗಬೇಡ ಅಂತ ಹೇಳಿಲ್ಲ ಆದರೆ ರೀಲ್ಸ್‌ನಲ್ಲಿ ನಾನು ಫುಲ್ ಉಲ್ಟಾನೇ ಮಾಡೋದು. ನನ್ನ ತಂದೆ ತಾಯಿ ನನ್ನನ್ನು ಹೇಗೆ ನೋಡಿಕೊಂಡಿದ್ದರು ಹಾಗೆ ನನ್ನ ಅತ್ತೆ ಮಾವ ನೋಡಿಕೊಂಡಿದ್ದಾರೆ' ಎಂದು ಖಾಸಗಿ ಟಿವಿ ಯೂಟ್ಯೂಬ್ ಸಂದರ್ಶನದಲ್ಲಿ ಕಾವ್ಯಾ ಮಾತನಾಡಿದ್ದಾರೆ.

Tap to resize

Latest Videos

undefined

ಅಣ್ಣಾವ್ರ ಮನೆಗೆ ಫ್ರೀ ಆಗಿ ನಾಯಿ ಕೊಟ್ಟಿದ್ದೀನಿ, ಸಲ್ಮಾನ್‌ ಖಾನ್‌ಗೆ 6 ತಿಂಗಳು ಕೂಡ

12 ವರ್ಷ ರಿಲೇಷನ್‌ಶಿಪ್‌ನಲ್ಲಿ ನಾವು ಎರಡು ವರ್ಷ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಕಿತ್ತಾಡಿ ಸಾಯುತ್ತಾರೆ ಹೀಗಿರುವಾಗ ಬೇರೆ ಎಲ್ಲೋ ಹುಟ್ಟಿ ಬೆಳೆದವರು ಒಟ್ಟಿಗೆ ಜೀವನ ಮಾಡಬೇಕು ಅಂದಾಗ ಮೂರು ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು.  ಮೊದಲು ಆ ವ್ಯಕ್ತಿ ಹೇಗಿದ್ದಾರೋ ಅದನ್ನು ಒಪ್ಪಿಕೊಳ್ಳಬೇಕು..ನನ್ನಂತೆ ಯೋಚನೆ ಮಾಡು ನನ್ನ ರೀತಿಯಲ್ಲಿ ಬದುಕಬೇಕು ಎನ್ನಬಾರದು ಏಕೆಂದರೆ ಪ್ರತಿಯೊಬ್ಬರೂ ಅವರದ್ದೇ ಆಲೋಚನೆ ಜೀವನ ಶೈಲಿ ಇರುತ್ತದೆ. ಬದಲಾಯಿಸುವ ಪ್ರಯತ್ನ ಮಾಡಿದ್ದರೆ ಅದು ಸುಳ್ಳು. ಎರಡನೇ ವಿಚಾರ ಗೌರವ ಕೊಡುವುದು. ಜಗಳ ಮಾಡಿದಾಗ ಅಗೌರವದಿಂದ ಮಾತನಾಡಿಸಬಾರದು. ಮೂರನೇ ವಿಚಾರ ಯಾವುದೇ ನಿರೀಕ್ಷೆ ಇಟ್ಟಿಕೊಳ್ಳಬಾರದು. ಸುಮಾರು ಜನರು ಜೀವನ ಹಾಳು ಮಾಡಿಕೊಳ್ಳುವುದೇ ನಿರೀಕ್ಷೆ ಇಟ್ಟುಕೊಳ್ಳುವುದು ಎಂದು ಕಾವ್ಯಾ ಶಾ ಹೇಳಿದ್ದಾರೆ. 

ಅವಕಾಶ ಕಮ್ಮಿ ಆದ್ರೆ ಬಟ್ಟೆ ಕಮ್ಮಿ ಆಗುತ್ತೆ: 'ಕಾಮಿಡಿ ಕಿಲಾಡಿಗಳು' ಮಂಥನ ಟ್ರೋಲ್

click me!