'ಅವನೇ ಶ್ರೀಮನ್ನಾರಾಯಣ'ನ ಕೈ ಸೇರಿತು 30 ಕೋಟಿ!

By Suvarna News  |  First Published Dec 31, 2019, 2:40 PM IST

ಪುಷ್ಕರ್ ಮಲ್ಲಿಕಾರ್ಜುನಯ್ಯ ಗೆದ್ದಿದ್ದಾರೆ. ಶ್ರೀಮನ್ನಾರಾಯಣ ಆಶೀರ್ವದಿಸಿದ್ದಾನೆ. ಉದ್ದ ಜಾಸ್ತಿಯಾಯ್ತು, ಕಾಮಿಡಿ ಕಮ್ಮಿಯಾಯ್ತು ಮುಂತಾದ ಟೀಕೆಗಳನ್ನು ಎದುರಿಸಿ ನಿಂತಿರುವ ಚಿತ್ರ ಮೂರು ದಿನಗಳಲ್ಲಿ ಮಾಡಿರುವ ಗಳಿಕೆ ಬರೋಬ್ಬರಿ ಮೂವತ್ತು ಕೋಟಿ.
 


ಪುಷ್ಕರ್ ಮಲ್ಲಿಕಾರ್ಜುನ್ ಈ ಮೊತ್ತವನ್ನು ಖಚಿತಪಡಿಸಿಲ್ಲದೇ ಇದ್ದರೂ ಗಾಂಧೀನಗರದ ಮೂಲಗಳ ಪ್ರಕಾರ 450 ಸ್ಕ್ರೀನ್‌ಗಳಲ್ಲಿ, ಮೂರು ದಿನಗಳಲ್ಲಿ ಐದು ಸಾವಿರ ಷೋ ಕಂಡಿರುವ ಚಿತ್ರದ ಗಳಿಕೆ ಅದಕ್ಕಿಂತ ಕಡಿಮೆ ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಷೋಗಳ ಸಂಖ್ಯೆಯನ್ನು ಪುಷ್ಕರ್ ಕೂಡ ಹೌದೆನ್ನುತ್ತಾರೆ.

Latest Videos

ಒಂದು ವಾರದ ಗಳಿಕೆ 50-60 ಕೋಟಿ ಬರಬಹುದು. ನಿರ್ಮಾಪಕರ ಪಾಲು 30 ಕೋಟಿ ಬಂದೇ ಬರುವುದು ಖಾತ್ರಿ. ರಾಜ್ಯದ ಐವತ್ತು ಕೇಂದ್ರಗಳಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಷೋಗಳಿಗೂ ಟಿಕೆಟ್ ಇಟ್ಟಿದ್ದರು. ಅದರಿಂದಲೇ 3-4 ಕೋಟಿಗಳಿಕೆಯಾಗಿದೆ. ಎರಡನೇ ವಾರದಲ್ಲಿ ೮೦ ಹೆಚ್ಚುವರಿ ಕೇಂದ್ರಗಳಲ್ಲಿ ಚಿತ್ರ ತೆರೆಕಾಣಲಿದೆ.

ಎರಡು ವಾರದ ಗಳಿಕೆ 100 ಕೋಟಿ ಮುಟ್ಟಲಿದೆ. ಓವರ್ ಸೀಸ್ ಕೇಂದ್ರಗಳಲ್ಲಿ ಎರಡನೇ ವಾರಕ್ಕೆ ಕಾಲಿಟ್ಟಿದೆ. 15 ಕೇಂದ್ರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ತೆಲುಗಿನಲ್ಲಿ 36 ಸಾವಿರ ಟಿಕೆಟ್ ಮುಂಗಡ ಬುಕಿಂಗ್ ಆಗಿದೆ- ಹೀಗೆ ಶ್ರೀಮನ್ನಾರಾಯಣನ ಮಹಿಮೆ ಹಬ್ಬುತ್ತದೆ.

ಲಾಭವನ್ನೇ ಮಾಡಬೇಕು ಎಂದು ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾ ಅಲ್ಲ ಇದು. ಹೊಸತನದ ಮೇಕಿಂಗ್ ಬೇಕು, ಸಿನಿಮಾ ನೋಡುವ ಕ್ರಮ ಬದಲಾಗಬೇಕು, ಕನ್ನಡಕ್ಕೆ ಫ್ಯಾಂಟಸಿ ಕತೆಗಳನ್ನು ಹೇಳಬೇಕು, ಒಂದು ಸಿನಿಮಾ ಹೀಗೇ ಇರಬೇಕೆಂಬ ಸಿದ್ದಸೂತ್ರಗಳನ್ನು ಮುರಿದು ಬೇರೊಂದು ಸಿನಿಮಾ ಕಟ್ಟಬೇಕು ಎನ್ನುವ ಉದ್ದೇಶದೊಂದಿಗೆ ‘ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಮಾಡಿದ್ದು. ನಮ್ಮ ಉದ್ದೇಶದ ಗುರಿಯನ್ನು ಸಿನಿಮಾ ಬಿಡುಗಡೆಯಾದ ಮರು ದಿನವೇ ಮುಟ್ಟಿದ್ದೇವೆ. ಒಂದು ಚಿತ್ರದ ಬಗ್ಗೆ ಎಲ್ಲ ರೀತಿಯಲ್ಲೂ, ಎಲ್ಲ ಕೋನಗಳಲ್ಲೂ ಮಾತನಾಡುತ್ತಿದ್ದಾರೆ ಅಂದರೆ ಅದು ಸಿನಿಮಾದ ನಿಜವಾದ ಗೆಲುವು. ಅಂಥ ಗೆಲುವಿನ ಚಿತ್ರ ಕೊಟ್ಟಿದ್ದಕ್ಕೆ ಒಬ್ಬ ನಿರ್ಮಾಪಕನಾಗಿ ನನಗೆ ಹೆಮ್ಮೆ ಇದೆ.’ ಅಂತಾರೆ ಪುಷ್ಕರ್.

ಮಾಮೂಲು ಕಮರ್ಷಿಯಲ್ ಸಿನಿಮಾ ಮಾಡಿ ಕಾಸು ಮಾಡಿಕೊಳ್ಳುವ ಅವಕಾಶ ಇತ್ತು. ಆದರೆ, ನನಗೆ ಹಣ ಮಾಡುವುದಕ್ಕಿಂತ ಮುಖ್ಯವಾಗಿ ಒಂದಷ್ಟು ವರ್ಷಗಳ ನಂತರವೂ ನನ್ನ ನಿರ್ಮಾಣದ ಸಿನಿಮಾ ಬಗ್ಗೆ ಜನ ಮಾತನಾಡಿಕೊಳ್ಳಬೇಕು. ಅಂಥ ಸಾಹಸ ಈ ಚಿತ್ರದ ಮೂಲಕ ಮಾಡಿದ್ದೇವೆ. ಒಬ್ಬ ಸಾಮಾನ್ಯ ನಿರ್ಮಾಪಕನಾಗಿ ಬಂದ ನಾನು, ಕೋಟಿ ಕೋಟಿ ಹಾಕಿ ಬಹು ಭಾಷೆಯ ಚಿತ್ರವನ್ನು ನಿರ್ಮಿಸಬಲ್ಲೆ ಎಂದು ಸಾಬೀತು ಮಾಡುವುದಕ್ಕೆ ಸಾಧ್ಯವಾಗಿದೆ. ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲೂ ನಿರೀಕ್ಷೆ ಶುರುವಾಗಿದೆ ಅನ್ನುವ ಕಾರಣಕ್ಕೆ ಅವರು ಥ್ರಿಲ್ಲಾಗಿದ್ದಾರೆ.

click me!