ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ ಕಿಚ್ಚ ಸುದೀಪ್ | 7 ವರ್ಷಗಳ ನಂತರ ಹೊಸ ಕೆಲಸ ಶುರು ಮಾಡಲಿದ್ದಾರೆ ಅಭಿನಯ ಚಕ್ರವರ್ತಿ | ಸದ್ಯದಲ್ಲೇ ಗುಡ್‌ನ್ಯೂಸ್ ಕೊಡಲಿದ್ದಾರೆ 'ಪೈಲ್ವಾನ್'!
ಕಿಚ್ಚ ಸುದೀಪ್‌ಗೆ 2019 ಒಂದು ರೀತಿಯಲ್ಲಿ ಲಕ್ಕಿ ಇಯರ್ ಅಂತಾನೇ ಹೇಳಬಹುದು. ಸ್ಯಾಂಡಲ್‌ವುಡ್‌ನಲ್ಲಿ 'ಪೈಲ್ವಾನ್' ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ಬಾಲಿವುಡ್‌ನಲ್ಲಿ 'ದಬಾಂಗ್ -3' ಸದ್ದು ಮಾಡಿತು. ತೆಲುಗಿನಲ್ಲಿ 'ಸೈರಾ ನರಸಿಂಹ ರೆಡ್ಡಿ' ಬಾಕ್ಸಾಫೀಸ್ ಕಲೆಕ್ಷನ್ ಜೋರಾಗಿಯೇ ಮಾಡಿತು. ಬಿಗ್‌ಬಾಸ್ ಸೀಸನ್ 7 ಹೋಸ್ಟ್ ಮಾಡುತ್ತಿದ್ದಾರೆ. ಇದುವರೆಗೂ ಬರೀ ಸಿನಿಮಾಗಳಲ್ಲಿಮಾತ್ರ ಬ್ಯುಸಿಯಿದ್ದ ಕಿಚ್ಚ ಸುದೀಪ್ ಈಗ ಇಯರ್ ಎಂಡ್‌ನಲ್ಲಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ.
'ಅಗ್ನಿಸಾಕ್ಷಿ'ಯಲ್ಲಿ ಸೈಲೆಂಟ್ ತನು ರಿಯಲ್ ಲೈಫಲ್ಲಿ ಇಷ್ಟೊಂದು ವೈಲೆಂಟಾ!?
ಮಾಣಿಕ್ಯ ನಂತರ ನಿರ್ದೇಶನದಿಂದ ಸುದೀಪ್ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ನಿರ್ದೇಶನಕ್ಕಿಳಿಯುವುದಾಗಿ ಹೇಳಿಕೊಂಡಿದ್ದಾರೆ.
Wil be announcing th details of my direction n th Tec team soon.
Happy to be doin what I always have luved to do ,,after 7 years gap.
I'm sure all u frnzz r wth me on this... wil not disappoint u.
🤗🤗🥂
'ಸದ್ಯದಲ್ಲೇ ಮುಂದಿನ ಸಿನಿಮಾ ಬಗ್ಗೆ ನಿಮ್ಮ ಜೊತೆ ಮಾಹಿತಿ ಹಂಚಿಕೊಳ್ಳಲಿದ್ದೇನೆ. 7 ಗಳ ಗ್ಯಾಪ್ ನಂತರ ನಾನು ಬಹಳ ಇಷ್ಟಪಡುವ ಕೆಲಸ ಮಾಡುತ್ತಿದ್ದೇನೆ. ನನ್ನ ಜೊತೆ ನೀವೆಲ್ಲಾ ಇರುತ್ತೀರಿ ಎಂಬ ಭರವಸೆ ನನಗಿದೆ. ನಿಮ್ಮನ್ನು ಭ್ರಮನಿರಸನಗೊಳಿಸುವುದಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಡಿಸೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ