
ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್ ಭೌತಿಕವಾಗಿ ನಮ್ಮನ್ನಗಲಿದರೂ ಜನಮಾನಸದಲ್ಲಿ, ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಇಂದು ವಿಷ್ಣು ವರ್ಧನ್ 10 ನೇ ವರ್ಷದ ಪುಣ್ಯಸ್ಮರಣೆ.
ಭಾಷಾ ಕಿಚ್ಚು: 'ಶ್ರೀಮನ್ನಾರಾಯಣ' ಚಿತ್ರದ ಪೋಸ್ಟರ್ ಹರಿದ ಶಿವಸೇನೆ
ಅಭಿಮಾನಿಗಳು, ಕುಟುಂಬವರ್ಗದವರು ವಿಷ್ಣುವರ್ಧನ ಭಾವಚಿತ್ರಕ್ಕೆ ಪುಷ್ಮ ನಮನ ಸಲ್ಲಿಸಿದ್ದಾರೆ. ಕಿಚ್ಚ ಸುದೀಪ್ ಸಾಹಸ ಸಿಂಹನನ್ನು ನೆನೆಸಿಕೊಂಡಿದ್ದು ಹೀಗೆ.
ಅಪ್ಪಾಜಿ..
ಇಂದು ನಿಮ್ಮ 10ನೇ ಪುಣ್ಯಸ್ಮರಣೆ! ಆದ್ರೆ ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ' ಎಂದಿದ್ದಾರೆ.
7 ವರ್ಷಗಳ ನಂತರ ಬ್ರೇಕಿಂಗ್ ನ್ಯೂಸ್ ಕೊಟ್ರು ಕಿಚ್ಚ ಸುದೀಪ್!
ವಿಷ್ಣುವರ್ಧನ್- ಸುದೀಪ್ ಉತ್ತಮ ಬಾಂಧವ್ಯ ಹೊಂದಿದ್ದರು. 'ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸುದೀಪ್ ನಿರ್ದೇಶನದ 'ಶಾಂತಿ ನಿವಾಸ' ದಲ್ಲಿ ವಿಷ್ಣುವರ್ಧನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಷ್ಣುದಾದಾ 'ಜೇಷ್ಠ' ಚಿತ್ರಕ್ಕೆ ಸುದೀಪ್ ಹಿನ್ನಲೆ ಧ್ವನಿ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.