'ಕಟ್ಟಿಂಗ್‌ ಶಾಪ್‌'; 'ಆಪರೇಷನ್‌ ಅಲಮೇಲಮ್ಮ' ಬರಹಗಾರ ಪವನ್‌ ಭಟ್‌ ಮೊದಲ ಸಿನಿಮಾ

Kannadaprabha News   | Asianet News
Published : Apr 08, 2021, 09:14 AM IST
'ಕಟ್ಟಿಂಗ್‌ ಶಾಪ್‌'; 'ಆಪರೇಷನ್‌ ಅಲಮೇಲಮ್ಮ' ಬರಹಗಾರ ಪವನ್‌ ಭಟ್‌ ಮೊದಲ ಸಿನಿಮಾ

ಸಾರಾಂಶ

‘ಆಪರೇಶನ್‌ ಅಲುಮೇಲಮ್ಮ’, ‘ಅಳಿದು ಉಳಿದವರು’ ಚಿತ್ರಗಳ ಸ್ಕಿ್ರಪ್ಟ್‌ ರೈಟರ್‌ ಆಗಿ ಗುರುತಿಸಿಕೊಂಡಿರುವ ಪವನ್‌ ಭಟ್‌ ಇದೀಗ ನಿರ್ದೇಶನಕ್ಕಿಳಿದಿದ್ದಾರೆ. ಹೊಸಬರ ಟೀಮ್‌ ಜೊತೆಗೆ ‘ಕಟ್ಟಿಂಗ್‌ ಶಾಪ್‌’ ಎಂಬ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. 

ಒಬ್ಬ ಫಿಲ್ಮ್‌ ಎಡಿಟರ್‌ನ ಲೈಫ್‌ಅನ್ನು ಕಾಮಿಡಿಯಾಗಿ ಕಟ್ಟಿಕೊಡುವ ಸಿನಿಮಾವಿದು. ಒಂದು ವಾರದ ಕೆಳಗೆ ರಿಲೀಸ್‌ ಆಗಿರುವ ಚಿತ್ರದ ಟೀಸರ್‌ ಅನ್ನು ಲಕ್ಷಾಂತರ ಜನ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಪಿಆರ್‌ಕೆ ಯೂಟ್ಯೂಬ್‌ ಚಾನೆಲ್‌ನಲ್ಲಿ ‘ಕಟ್ಟಿಂಗ್‌ ಶಾಪ್‌’ನ ಟೈಟಲ್‌ ಸಾಂಗ್‌ ರಿಲೀಸ್‌ ಆಗಿದೆ. ಈ ಹಾಡಿಗೆ ಮೇಕಿಂಗ್‌ ವೀಡಿಯೋ ಬಳಸಲಾಗಿದೆ.

ಫೈಟಿಂಗ್‌ ಸೀನಲ್ಲಿ ನಟ ಶ್ರೀಮುರಳಿ ಕಾಲಿಗೆ ಏಟು; ಮುಂದಕ್ಕೆ ಹೋಯಿತು ಮದಗಜ ಚಿತ್ರೀಕರಣ 

ತಮ್ಮ ಹೊಸ ಪ್ರಯತ್ನದ ಬಗ್ಗೆ ಉತ್ಸಾಹದಿಂದ ಮಾತಾಡುವ ನಿರ್ದೇಶಕ ಪವನ್‌ ಭಟ್‌, ‘ಇದೊಂದು ಡ್ರಾಮಿಡಿ ಸಿನಿಮಾ’ ಎನ್ನುತ್ತಾರೆ. ಡ್ರಾಮಾ ಮತ್ತು ಕಾಮಿಡಿಯನ್ನು ಮಿಕ್ಸ್‌ ಮಾಡಿರುವ ವಿಶಿಷ್ಟಜಾನರ್‌ ಇದು. ‘ಎಡಿಟಿಂಗ್‌ ಟೇಬಲ್‌ ಅನುಭವ, ಸತ್ಯ ಘಟನೆ ಹಾಗೂ ಕಲ್ಪನೆ ಬೆರೆಸಿ ಮಾಡಿರುವ ಸಿನಿಮಾ. ಇದರ ಹೀರೋ ಒಬ್ಬ ಫಿಲಂ ಎಡಿಟರ್‌. ಅವನ ಲೈಫ್‌ ಜರ್ನಿ ಈ ಸಿನಿಮಾದಲ್ಲಿದೆ. ಆತನ ಎಡಿಟಿಂಗ್‌ ಆಸಕ್ತಿ, ಚಿತ್ರರಂಗಕ್ಕೆ ಎಂಟ್ರಿ ಕೊಡೋದು, ನಂತರದ ಗುದ್ದಾಟಗಳು, ಸಣ್ಣ ಮಟ್ಟದಿಂದ ಬಹು ಎತ್ತರಕ್ಕೆ ಬೆಳೆಯುವ ಕಥೆ. ಇಲ್ಲಿ ಕಾಮಿಡಿ ಜೊತೆಗೆ ಭಾವನೆಗಳನ್ನೂ ಬೆರೆಸಲಾಗಿದೆ. ಬಹುಶಃ ಸಿನಿಮಾ ಸಂಕಲನಕಾರನ ಬಗ್ಗೆ ಬರುತ್ತಿರುವ ದೇಶದ ಮೊದಲ ಸಿನಿಮಾ ಇದೇ ಇರಬೇಕು’ ಅಂತಾರೆ ಪವನ್‌.

ರ‍್ಯಾಂಕ್‌ ಸ್ಟೂಡೆಂಟ್‌ ಆದ್ರೂ ಆರ್ಟಿಸ್ಟ್‌ ಅನಿಸಿಕೊಳ್ಳೋದೇ ಇಷ್ಟ: ಶರಣ್ಯ ಶೆಟ್ಟಿ 

ಕೆಬಿ ಪ್ರವೀಣ್‌, ಅರ್ಚನಾ ಕೊಟ್ಟಿಗೆ ನಾಯಕ ನಾಯಕಿಯರು. ದೀಪಕ್‌ ಭಟ್‌, ನವೀನ್‌ ಕೃಷ್ಣ, ಕಾರ್ತಿಕ್‌ ರಾವ್‌ ಕೊರ್ಡೇಲ್‌ ಮುಖ್ಯಪಾತ್ರಗಳಲ್ಲಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್