
ನಂದಕಿಶೋರ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾ ಏ.13 ಯುಗಾದಿಯಂದು ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಬಿ.ಕೆ ಗಂಗಾಧರ್ ನಿರ್ಮಾಣದ ಸಿನಿಮಾ ಇದು.
ಉದಯ ಟಿವಿಯಲ್ಲಿ ಏ.12ರಿಂದ ಏ.17ರವರೆಗೆ ಯುಗಾದಿ ಸಂಭ್ರಮ ನಡೆಯಲಿದ್ದು, ಸಂಜೆ 6ರಿಂದ ರಾತ್ರಿ 10.30ರವರೆಗೆ ವಿವಿಧ ಧಾರಾವಾಹಿಗಳ ಜೊತೆಗೆ ಹೊಸ ರೀತಿಯ ಕಾರ್ಯಕ್ರಮಗಳು ಪ್ರಸಾರವಾಗಲಿವೆ.
ರಿಲೀಸ್ ಆದ ಒಂದೇ ತಿಂಗಳಿಗೆ ಟಿವಿಯಲ್ಲಿ 'ಪೊಗರು' ಸಿನಿಮಾ?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಿರುವ ಪೊಗರು ಚಿತ್ರ 6 ದಿನದಲ್ಲಿ 45 ಕೋಟಿ ಗಳಿಸಿದೆ ಎಂದು ಚಿತ್ರತಂಡ ಮಾಹಿತಿ ನೀಡಿತ್ತು. ಈಗಾಗಲೇ ಮೂರು ಹಿಟ್ ಸಿನಿಮಾ ನೀಡಿರುವ ಧ್ರುವ ನಿರ್ಮಾಪಕರ ನಟ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಚಿತ್ರದಲ್ಲಿ ಬಳಸಲಾಗಿರುವ ಕೆಲವೊಂದು ದೃಶ್ಯಗಳ ಬಗ್ಗೆ ಮಾತನಾಡಿದ ಅವರು ವೇದಿಕೆಯ ಮೇಲೆ ಕ್ಷಮೆ ಕೇಳಿದ್ದರು. ಪೊಗರು ರಾಜ್ಯಾದ್ಯಂತ ವಿವಾದಕ್ಕೂ ಗುರಿಯಾಗಿತ್ತು .ನಂತರದಲ್ಲಿ ಎಂಟು ನಿಮಿಷದ ದೃಶ್ಯಾವಳಿಗಳು ಕಟ್ ಆಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.