ಫೈಟಿಂಗ್‌ ಸೀನಲ್ಲಿ ನಟ ಶ್ರೀಮುರಳಿ ಕಾಲಿಗೆ ಏಟು; ಮುಂದಕ್ಕೆ ಹೋಯಿತು ಮದಗಜ ಚಿತ್ರೀಕರಣ

Kannadaprabha News   | Asianet News
Published : Apr 08, 2021, 09:04 AM IST
ಫೈಟಿಂಗ್‌ ಸೀನಲ್ಲಿ ನಟ ಶ್ರೀಮುರಳಿ ಕಾಲಿಗೆ ಏಟು; ಮುಂದಕ್ಕೆ ಹೋಯಿತು ಮದಗಜ ಚಿತ್ರೀಕರಣ

ಸಾರಾಂಶ

ಮಹೇಶ್‌ ಕುಮಾರ್‌ ನಿರ್ದೇಶನದ ‘ಮದಗಜ’ ಚಿತ್ರದ ಚಿತ್ರೀಕರಣದಲ್ಲಿ ಶ್ರೀಮುರಳಿ ಕಾಲಿಗೆ ಪೆಟ್ಟು ಬಿದ್ದಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಫೈಟಿಂಗ್‌ ದೃಶ್ಯದಲ್ಲಿ ಆಕಸ್ಮಿಕವಾಗಿ ಕಾಲು ಟ್ವಿಸ್ಟ್‌ ಆಗಿ ಲಿಗಮೆಂಟ್‌ ಟಿಯರ್‌ ಆಗಿದೆ. 

ಫೈಟಿಂಗ್‌ ದೃಶ್ಯದಲ್ಲಿ ಆಕಸ್ಮಿಕವಾಗಿ ಕಾಲು ಟ್ವಿಸ್ಟ್‌ ಆಗಿ ಲಿಗಮೆಂಟ್‌ ಟಿಯರ್‌ ಆಗಿದೆ. ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ವೈದ್ಯರು ಕನಿಷ್ಠ 15 ದಿನಗಳ ಬೆಡ್‌ ರೆಸ್ಟ್‌ ಸೂಚಿಸಿದ್ದಾರೆ. ಶ್ರೀಮುರಳಿ ಹುಷಾರಾಗುವವರೆಗೆ ಚಿತ್ರೀಕರಣ ಮುಂದಕ್ಕೆ ಹೋಗಿದೆ.

ಆಗ ಮುಗ್ಧ, ಈಗ ಪ್ರಬುದ್ಧ; ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಹುಟ್ಟುಹಬ್ಬದ ವಿಶೇಷ!

ಮದಗಜ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಫೈಟಿಂಗ್‌ ಮತ್ತು ಹಾಡುಗಳ ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದಿದೆ. ಆ್ಯಕ್ಷನ್‌ ಸೀಕ್ವೆನ್ಸ್‌ ಚಿತ್ರೀಕರಣ ನಡೆಯಬೇಕಿದ್ದ ಕಾರಣ ಚಿತ್ರತಂಡ ಅದ್ದೂರಿ ಸೆಟ್‌ಗಳನ್ನು ಹಾಕಿತ್ತು. 40 ಸೆಕೆಂಡ್‌ ಸ್ಟೆ್ರಚ್‌ನ ಆ್ಯಕ್ಷನ್‌ ಸೀಕ್ವೆನ್ಸ್‌ ಅನ್ನು ಫೈಟ್‌ ಮಾಸ್ಟರ್‌ ಅರ್ಜುನ್‌ ರೂಪಿಸಿದ್ದರು. ಹತ್ತು ಜನ ಒಮ್ಮೆಲೇ ಅಟ್ಯಾಕ್‌ ಮಾಡುತ್ತಾರೆ. ಶ್ರೀಮುರಳಿ ನಾಲ್ಕು ಮಂದಿಯನ್ನು ಹೊಡೆದು ಐದನೇಯವನತ್ತ ನುಗ್ಗಿದಾಗ ಆಕಸ್ಮಿಕವಾಗಿ ಕಾಲು ಟ್ವಿಸ್ಟ್‌ ಆಗಿ ಲಿಗಮೆಂಟ್‌ ಟಿಯರ್‌ ಆಗಿದೆ. ‘ತನ್ನ ಕಾಲಿಗೆ ಏಟಾಗಿದ್ದರೂ ಈಗ ಆಸ್ಪತ್ರೆಗೆ ಹೋಗುವುದು ಬೇಡ. ಶೂಟಿಂಗ್‌ ಮುಗಿಸಿ ಹೋಗೋಣ. ನಿರ್ಮಾಪಕರಿಗೆ ಲಾಸ್‌ ಆಗುತ್ತದೆ ಎಂದು ಶ್ರೀಮುರಳಿ ಹೇಳಿದರು’ ಎಂದು ನಿರ್ದೇಶಕ ಮಹೇಶ್‌ ಹೇಳುತ್ತಾರೆ. ಆ ಮೂಲಕ ಶ್ರೀಮುರಳಿ ಬದ್ಧತೆಯನ್ನು ಮೆಚ್ಚಿಕೊಂಡರು.

ಸದ್ಯ ವೈದ್ಯರು ಶ್ರೀಮುರಳಿ ಕಾಲು ಗುಣವಾಗಲು ಕನಿಷ್ಠ 15 ದಿನವಾದರೂ ಬೇಕು ಎಂದು ತಿಳಿಸಿರುವುದರಿಂದ ಶ್ರೀಮುರಳಿ ಹುಷಾರಾಗಿ ಸೆಟ್‌ಗೆ ಬರುವವರೆಗೂ ಚಿತ್ರೀಕರಣ ಮುಂದಕ್ಕೆ ಹಾಕಲು ಚಿತ್ರತಂಡ ನಿರ್ಧರಿಸಿದೆ. ಮದಗಜ ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಗಳು ಸಾನ್ವಿ ಬಗ್ಗೆ ಕೆಟ್ಟ ಮಾತು, ಕಿತ್ತೊಗಿರೋ ಕಾಮೆಂಟ್‌ಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ: ಕಿಚ್ಚ ಖಡಕ್ ಉತ್ತರ
'ಧನ್ನೀರ್, ವಿನಯ್ ಎಲ್ಲರೂ ನನಗೆ ಒಂದೇ' ಅಂದ್ರಾ ಕಿಚ್ಚ ಸುದೀಪ್? ಈ ವೈರಲ್ ನ್ಯೂಸ್ ಮರ್ಮವೇನು?