ಸಾವಿನ ದೃಶ್ಯಕ್ಕೆ ಸಂಬಂಧಿಸಿದ ಅದೊಂದು ಪ್ರಾಕ್ಟೀಸ್ ಕನ್ನಡ ಚಿತ್ರರಂಗದಲ್ಲಿದೆ, ಏನದು?

By Shriram Bhat  |  First Published Oct 28, 2024, 1:32 PM IST

ಅದನ್ನೊಂದು ನಂಬಿಕೆ ಎನ್ನಬಹುದು, ಆದರೆ, ಎನ್ನಬಾರದು. ಕಾರಣ, ನಂಬಿಕೆ ಎಂದು ಕರೆದೊಡನೆಯೇ ಕೆಲವರು ಅದನ್ನು ಮೂಢನಂಬಿಕೆ ಅನ್ನುವ ಹಣೆಪಟ್ಟಿ ಹಚ್ಚುತ್ತಾರೆ. ಎಲ್ಲಿಲ್ಲಿ ನಂಬಿಕೆ ಎನ್ನುವ ಮಾತು ಬರುತ್ತೋ ಅಲ್ಲೆಲ್ಲ ಮೂಢನಂಬಿಕೆ ಅನ್ನೋ ಮಾತನ್ನು ತರುವ ಪ್ರಯತ್ನ ಕೆಲವರಿಂದ ನಡೆದೇ ಇರುತ್ತದೆ..


ಕನ್ನಡದ ಬಹುತೇಕ ಸಿನಿಮಾಗಳಲ್ಲಿ ಮೃತ ದೇಹದ ಶಾಟ್ ತೆಗಿಬೇಕಾದ್ರೆ ಅಥವಾ, ಚಟ್ಟದ ಮೇಲೆ ಮಲಗಿಕೊಂಡಿರುವ ಆರ್ಟಿಸ್ಟ್, ಅಥವಾ ಚಟ್ಟದ ಮೇಲೆ ಮಲಗಿಕೊಂಡಿರುವ ಕಲಾವಿದರ ಮೆರವಣಿಗೆ ಶಾಟ್ ತೆಗೆದುಕೊಂಡಾಗ, ಇನ್ನೊಂದು ಕೆಲಸವನ್ನು ಕನ್ನಡ ಚಿತ್ರರಂಗದವರು ಮಾಡುತ್ತಾರೆ ಎನ್ನಲಾಗಿದೆ. ಆದರೆ ಅದನ್ನು ಚಿತ್ರಗಳಲ್ಲಿ ಬಳಸಿಕೊಳ್ಳುವುದಿಲ್ಲ. ಆದ್ದರಿಂದ ಸಿನಿಮಾ ಪ್ರೇಕ್ಷಕರು ಅದನ್ನು ನೋಡಲಾಗುವುದಿಲ್ಲ. ಅದು ಏನು? ಯಾಕೆ ಹಾಗೆ ಮಾಡ್ತಾರೆ ಅನ್ನೋದಕ್ಕೆ ಇಲ್ಲಿದೆ ಡೀಟೇಲ್ಸ್. 

ಯಾವ ವ್ಯಕ್ತಿ ಮೃತರಂತೆ ನಟಿಸಿದ್ದಾರೆಯೋ ಅದೇ ವ್ಯಕ್ತಿ ಮತ್ತೆ ಕ್ಯಾಮೆರಾ ಮುಂದೆ ಎದ್ದು ಬಂದು ಒಮ್ಮೆ ಸ್ಮೈಲ್ ಮಾಡೋ ಶಾಟ್ ತಗೋತಾರೆ. ಈ ರೀತಿಯ ಒಂದು ಸೆಂಟ್‌ಮೆಂಟ್‌ ಅಟ್ಯಾಚ್ ಆಗಿರೋ ಒಂದು ಕೆಲಸವನ್ನು ಕನ್ನಡ ಚಿತ್ರರಂಗದಲ್ಲಿ ಅಳವಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಸತ್ತಂತೆ ನಟಿಸಿರೋ ವ್ಯಕ್ತಿಗೂ, ಅಲ್ಲಿದ್ದ ವ್ಯಕ್ತಿಗಳಿಗೂ ಅದು ಒಂದು ರೀತಿಯಲ್ಲಿ ರಿಲೀಫ್ ಕೊಡುತ್ತೆ ಅನ್ನೋ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ ಎನ್ನಲಾಗಿದೆ. ಅದೊಂದು ಪ್ರಾಕ್ಟೀಸ್ ಅಭ್ಯಾಸ ಮಾಡಿಕೊಳ್ಳಲಾಗಿದೆ. ಆ ದೃಶ್ಯದಲ್ಲಿ ಅಭಿನಯಿಸಿರುವ ಕಲಾವಿದರ ಮಾನಸಿಕ ನೆಮ್ಮದಿಗೆ ಹಾಗೂ ಭವಿಷ್ಯದಲ್ಲಿ ಅವರಿಗೆ ಅದರಿಂದ ಯಾವುದೇ ಅನಾಹುತ ಆಗದಿರಲಿ ಎಂಬ ಕಾರಣಕ್ಕೆ ಹಾಗೆ ಮಾಡುವ ಪರಿಪಾಠ ಇದೆ ಎನ್ನಲಾಗಿದೆ.

Tap to resize

Latest Videos

undefined

ಮಾಲಾಶ್ರೀ ಹಳೆಯ ವಿಡಿಯೋ ವೈರಲ್, ಕದ್ದುಮುಚ್ಚಿ ವಿಡಿಯೋ ಮಾಡ್ತಾ ಇದ್ರು ಗುರುದತ್!

ಅದನ್ನೊಂದು ನಂಬಿಕೆ ಎನ್ನಬಹುದು. ಆದರೆ, ಹಾಗೆ ಕರೆದೊಡನೆಯೇ ಕೆಲವರು ಅದನ್ನು ಮೂಢನಂಬಿಕೆ ಅನ್ನುವ ಹಣೆಪಟ್ಟಿ ಹಚ್ಚುತ್ತಾರೆ. ಎಲ್ಲಿಲ್ಲಿ ನಂಬಿಕೆ ಎನ್ನುವ ಮಾತು ಬರುತ್ತೋ ಅಲ್ಲೆಲ್ಲ ಮೂಢನಂಬಿಕೆ ಅನ್ನೋ ಮಾತನ್ನು ತರುವ ಪ್ರಯತ್ನ ಕೆಲವರಿಂದ ನಡೆದೇ ಇರುತ್ತದೆ. ಹೀಗಾಗಿ ಅದೊಂದು ಪ್ರಾಕ್ಟೀಸ್ ಅಥವಾ ಅಭ್ಯಾಸ ಎನ್ನಬಹುದು. ಬೇರೆ ಚಿತ್ರರಂಗಗಳು ಇದೇ ತರಹದ ಅಭ್ಯಾಸ ಮಾಡಿಕೊಂಡಿದ್ದಾರೋ ಇಲ್ಲವೋ ಆ ಬಗ್ಗೆ ಸದ್ಯ ಮಾಹಿತಿಯಿಲ್ಲ. 

ಕನ್ನಡ ಚಿತ್ರರಂಗ 75 ವರ್ಷಗಳನ್ನು ದಾಟಿ 100ರ ಕಡೆಗೆ ಹೋಗುತ್ತಿದೆ. ಪ್ರಾರಂಭದಲ್ಲಿ ಈ ಅಭ್ಯಾಸ ಶುರುವಾಗಿದ್ದು, ಅದನ್ನು ಈಗಲೂ ಆಲ್‌ಮೋಸ್ಟ್ ಆಲ್ ಫಾಲೋ ಮಾಡುತ್ತಾರೆ ಎನ್ನಲಾಗಿದೆ. ಆದರೆ, ಇತ್ತೀಚಿನ ಕೆಲವು ನಿರ್ದೇಶಕರು ಹಾಗೂ ನಿರ್ಮಾಪಕರು ಅದನ್ನು ಮಾಡುತ್ತಾರೋ ಇಲ್ಲವೋ ಎಂಬುದು ಸ್ವಲ್ಪ ಸಂದೇಹವೇ ಆಗಿದೆ ಎನ್ನುತ್ತಾರೆ ಚಿತ್ರರಂಗದ ಕೆಲವರು. ಅದೊಂದು ಪ್ರಾಕ್ಟೀಸ್ ಆಗಿದೆಯೇ ಹೊರತೂ ಅದನ್ನು ರೂಲ್ಸ್ ಮಾಡಲಾಗಿಲ್ಲ ಎನ್ನಲಾಗಿದೆ. 

ಹರಿದಾಡಿದ್ದ 'ಗ್ರಾನೈಟ್' ಗಾಳಿಸುದ್ದಿಗೆ ಅಪ್ಪು ಹೇಳಿದ್ದೇನು? ನೆಟ್ಟಿಗರು ಏನಂತ ಕಾಮೆಂಟ್ ಮಾಡ್ತಿದಾರೆ?

ಒಟ್ಟಿನಲ್ಲಿ, ಈ ತರಹದ ಒಂದು ಅಭ್ಯಾಸ ಕನ್ನಡ ಚಿತ್ರರಂಗದಲ್ಲಿ ಇದೆ. ಅದನ್ನು ನಂಬಿಕೆ ಹಾಗೂ ಮೂಡನಂಬಿಕೆ ಅಂತ ಡಿಬೇಟ್ ಮಾಡುವ ಅಗತ್ಯವಿಲ್ಲ. ಅದರಿಂದ ಆ ದೃಶ್ಯದಲ್ಲಿ ನಟಿಸಿದ ಕಲಾವಿದರ ಮನಸ್ಸಿಗೆ ಕಸಿವಿಸಿ ಆಗುವುದಿಲ್ಲ. ಹಾಗೂ ಕಲಾವಿದರಿಗೆ ಮುಂದೆ ಅದರಿಂದ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹಾಗೆ ಮಾಡಲಾಗುತ್ತದೆ. ಇದರಿಂದ ಯಾರಿಗೂ ಯಾವ ತೊಂದರೆಯೇನೂ ಆಗುತ್ತಿಲ್ಲ, ಅನುಕೂಲವೇ ಆಗುತ್ತದೆ ಎನ್ನಲಾಗಿದೆ. 

click me!