ಮಾಲಾಶ್ರೀ ಹಳೆಯ ವಿಡಿಯೋ ವೈರಲ್, ಕದ್ದುಮುಚ್ಚಿ ವಿಡಿಯೋ ಮಾಡ್ತಾ ಇದ್ರು ಗುರುದತ್!

By Shriram Bhat  |  First Published Oct 28, 2024, 11:29 AM IST

ಮಾಲಾಶ್ರೀ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಈಗಿನ್ನ ಜನರೇಶನ್ ಜನರು 'ಮಾಲಾಶ್ರೀ ಯಂಗ್ ಆಗಿದ್ದಾಗ ಅಷ್ಟು ಚೆಂದ ಇದ್ರಾ..' ಎಂದು ಹೇಳಿ ಕಣ್ ಕಣ್ ಬಿಡುತ್ತಿದ್ದಾರೆ. ಹೌದು, ಹಾಗಿದ್ದರು ಮಾಲಾಶ್ರೀ...


ಮಾಲಾಶ್ರೀ (Malashri)ಎಂಬ ಹೆಸರು ಕನ್ನಡ ಚಿತ್ರರಂಗದಲ್ಲಿ ಯಾವತ್ತಿಗೂ ಮರೆಯಲಾಗದ್ದು. 90ರ ದಶಕದಲ್ಲಿ ಸ್ಯಾಂಡಲ್‌ವುಡ್‌ನ ಅನಭಿಷಿಕ್ತ ರಾಣಿಯಾಗಿ ಮೆರೆದವರು ಮಾಲಾಶ್ರೀ, ಅವರೀಗ ಕನ್ನಡನಾಡಿನ ಸೊಸೆಯೂ ಹೌದು. ಮಾಲಾಶ್ರೀ ಅಪ್ಪ-ಅಮ್ಮ ಪಂಜಾಬಿ ಮೂಲದವರಾದರೂ ಮಾಲಾಶ್ರೀ ಹುಟ್ಟಿ ಬೆಳೆದಿದ್ದು ಆಂಧ್ರ ಪ್ರದೇಶದಲ್ಲಿ. ಕನ್ನಡದ ನಿರ್ಮಾಪಕ ರಾಮು ಅವರನ್ನು ಮದುವೆಯಾಗಿರುವ ಮಾಲಾಶ್ರೀ, ಈಗ ಕರ್ನಾಟಕವೇ ತಮ್ಮ ಮನೆ ಎಂದು ಇಲ್ಲೇ ಸೆಟ್ಲ್ ಆಗಿದ್ದಾರೆ. ಹೀಗೆ ನಟಿ ಮಾಲಾಶ್ರೀ ತೆಲುಗು ಮೂಲದವರಾದರೂ ಈಗ ಅವರ ಮಕ್ಕಳು ಕರ್ನಾಟಕದವರು. 

ನಟಿ ಮಾಲಾಶ್ರೀ ಅವರು 'ನಂಜುಂಡಿ ಕಲ್ಯಾಣ (1989) ರಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಜೊತೆ ನಟಿಸಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಅವರು ದಿನದಿನಕ್ಕೂ ಅದೆಷ್ಟು ಜನಪ್ರಿಯತೆ ಪಡೆದರು ಎಂದರೆ, ಕನ್ನಡ ಚಿತ್ರರಂಗದಲ್ಲಿ ಅಲ್ಲಿಯತನಕ ಯಾವ ನಟಿಯೂ ಪಡೆಯದಿದ್ದ ಜನಪ್ರಿಯತೆ ಮಾಲಾಶ್ರೀ ಪಡೆದರು. ಸ್ಟಾರ್ ನಟರ ಲೆವಲ್ಲಿಗೇ ಮಾಲಾಶ್ರೀಯವರು ಬೆಳೆದು ನಿಂತ ಪರಿ ಅಚ್ಚರಿ ಎನಿಸಿದರೂ ಸತ್ಯ ಸಂಗತಿ. ನಟಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್. ನಂಜುಂಡಿ ಕಲ್ಯಾಣ ವರ್ಷಗಟ್ಟಲೇ ಓಡಿದ್ದರೆ, ಹೆಚ್ಚಿನವು ನೂರು ದಿನ ದಾಟಿರುವ ಚಿತ್ರಗಳೇ. 

Tap to resize

Latest Videos

undefined

ಕಿಚ್ಚ ಸುದೀಪ್ ದಂಪತಿ ಹಳೆಯ ವಿಡಿಯೋ ವೈರಲ್, ಅದರಲ್ಲೇನಿದೆ ಶಾಕಿಂಗ್ ವಿಷ್ಯ?

'ನಭೋ ನಭವಿಷ್ಯತಿ' ಎಂಬಂತೆ ಮಿಂಚುತ್ತಿದ್ದ ಮಾಲಾಶ್ರೀ ಖ್ಯಾತಿ ಚಿತ್ರ ಸಾಹಿತಿ ಗುರುದತ ಚಿ ಉದಯಶಂಕರ್ ಮಗ ಗುರುದತ್ ಅವರ ಜೋಡಿಯಾಗಿ 'ಹಳ್ಳಿ ರಂಭೆ ಬೆಳ್ಳಿ ಬೊಂಬೆ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಅ ಚಿತ್ರದ ಹಾಡುಗಳನ್ನು ಇಂದಿಗೂ ಜನ ಮರೆತಿಲ್ಲ. ಅದರಲ್ಲೂ 'ಹಳ್ಳಿ ರಂಭೆ ಅಂತಾರೆ ಎಲ್ಲಾ ನನ್ನಾ, ಬೆಳ್ಳಿ ಬೊಂಬೆ ಅಂತಾರೆ ಎಲ್ಲಾ ನನ್ನಾ..' ಹಾಡು ಆಗಲೂ ಈಗಲೂ ಜನಪ್ರಿಯವೇ. ಆ ಹಾಡಿನಲ್ಲಿ ಲಂಗ-ದಾವಣಿ ತೊಟ್ಟು, ಹಳ್ಳಿ ಹುಡುಗಿ ಗೆಟ್‌ಅಪ್‌ನಲ್ಲಿ ನಟಿ ಮಾಲಾಶ್ರೀ ಅವರು ಹಾವ-ಭಾವ, ಡಾನ್ಸ್ ಮಾಡಿರುವ ರೀತಿ ತುಂಬಾ ಮೋಡಿ ಮಾಡಿತ್ತು. 

ಈ ಹಾಡು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ಹಾಡಿನಲ್ಲಿ ಮಾಲಾಶ್ರೀ ಅವರು ಕಬಡ್ಡಿ ಆಡುತ್ತಿರಲು ಚಿತ್ರದ ನಾಯಕ ಗುರುದತ್ ಅವರು ಕದ್ದುಮುಚ್ಚಿ ನಾಯಕಿ ಮಾಲಾಶ್ರೀಗೆ ಗೊತ್ತಿಲ್ಲದಂತೆ ಫೋಟೋ ಕ್ಲಿಕ್ಕಿಸುತ್ತಾರೆ, ವಿಡಿಯೋ ಮಾಡಿಕೊಂಡಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಈಗಿನ್ನ ಜನರೇಶನ್ ಜನರು 'ಮಾಲಾಶ್ರೀ ಯಂಗ್ ಆಗಿದ್ದಾಗ ಅಷ್ಟು ಚೆಂದ ಇದ್ರಾ..' ಎಂದು ಹೇಳಿ ಕಣ್ ಕಣ್ ಬಿಡುತ್ತಿದ್ದಾರೆ. ಹೌದು, ಹಾಗಿದ್ದರು ಮಾಲಾಶ್ರೀ. ಅವರಿಗೆ 'ಕನಸಿನ ರಾಣಿ' ಪಟ್ಟ ಸುಮ್ಮನೇ ಬಂದಿದ್ದಲ್ಲ!

ಹರಿದಾಡಿದ್ದ 'ಗ್ರಾನೈಟ್' ಗಾಳಿಸುದ್ದಿಗೆ ಅಪ್ಪು ಹೇಳಿದ್ದೇನು? ನೆಟ್ಟಿಗರು ಏನಂತ ಕಾಮೆಂಟ್ ಮಾಡ್ತಿದಾರೆ?

ಸದ್ಯ ಮಾಲಾಶ್ರೀ ಮಗಳು ಆರಾಧನಾ (Aradhana Ram) ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಜೋಡಿಯಾಗಿ 'ಕಾಟೇರ' ಚಿತ್ರದಲ್ಲಿ ನಟಿಸಿ ಶ್ರೇಷ್ಠ ನಟಿ ಪ್ರಶಸಸ್ತಿಯನ್ನು ಮೊದಲ ಚಿತ್ರದಲ್ಲೇ ಗಳಿಸಿದ್ದಾರೆ. ಅವರ ಮುಂದಿನ ಚಿತ್ರಕ್ಕಾಗಿ ಸಿನಿಅಭಿಮಾನಿಗಳು ಕಾಯುತ್ತಿದ್ದಾರೆ. ಒಟ್ಟಿನಲ್ಲಿ, ಈಗಲೂ ಮಾಲಾಶ್ರೀ ಕ್ರೇಜ್ ಹಾಗೆಯೇ ಇದೆ. ವೈರಲ್ ಆಗಿರುವ ಈ ವಿಡಿಯೋ ಅದನ್ನುಸಾಕ್ಷಿ ಸಮೇತ್ ಪ್ರೂವ್ ಮಾಡಿದೆ ಎನ್ನಬಹುದು. 

click me!