ಒಂದೆರಡು ತಲೆಮಾರಿಗೆ ಸೌಜನ್ಯ, ಸಂಸ್ಕಾರ ಕಲಿಸಿದ ಪುಣ್ಯಾತ್ಮ ಡಾ ರಾಜ್‌ಕುಮಾರ್; ಪೋಸ್ಟ್ ವೈರಲ್!

By Shriram BhatFirst Published Jul 20, 2024, 8:57 PM IST
Highlights

ಡಾ ರಾಜ್‌ಕುಮಾರ್ ಅವರಿಗೆ ಸಂಸ್ಕಾರ ಎನ್ನುವುದು ರಕ್ತಗತವಾಗಿ ಹೋಗಿತ್ತು ಎನಿಸುತ್ತೆ.. ಎರಡು ಕನಸು ಸಿನಿಮಾದ ತಂನಂ ತಂನಂ ನನ್ನೀ ಮನಸು ಮಿಡಿಯುತಿದೆ.. 'ಹಾಡಿನಲ್ಲಿ ಒಮ್ಮೆ ಗಮನವಿಟ್ಟು ನೋಡಿ.. ಅಲ್ಲಿ ಗಂಡ-ಹೆಂಡಿರ ನಡುವೆ ಅದೊಂದು ರಸಮಯ ಸನ್ನಿವೇಶ...

ಡಾ ರಾಜ್‌ಕುಮಾರ್ ಅವರಿಗೆ ಸಂಸ್ಕಾರ ಎನ್ನುವುದು ರಕ್ತಗತವಾಗಿ ಹೋಗಿತ್ತು ಎನಿಸುತ್ತೆ.. ಎರಡು ಕನಸು ಸಿನಿಮಾದ ತಂನಂ ತಂನಂ ನನ್ನೀ ಮನಸು ಮಿಡಿಯುತಿದೆ.. 'ಹಾಡಿನಲ್ಲಿ ಒಮ್ಮೆ ಗಮನವಿಟ್ಟು ನೋಡಿ.. ಅಲ್ಲಿ ಗಂಡ-ಹೆಂಡಿರ ನಡುವೆ ಅದೊಂದು ರಸಮಯ ಸನ್ನಿವೇಶ. ನಟಿ ಕಲ್ಪನಾ ಅಡುಗೆಮನೆಯಲ್ಲಿ ಇದ್ದಾರೆ, ಡಾ ರಾಜ್‌ಕುಮಾರ್ ಅಲ್ಲಿಗೆ ಹೋಗಬೇಕು. ಒಳಹೋಗುವ ಆತುರದಲ್ಲಿಯೂ ಚಪ್ಪಲಿ ಕಳಚಿಯೇ ಹೋಗುತ್ತಾರೆ. 

ನನಗೆ ಅನ್ನಿಸುತ್ತಿದೆ ಈ ದೃಶ್ಯ ಸ್ಕ್ರಿಪ್ಟೆಡ್ ಆಗಿರಲಾರದು. ಡಾ ರಾಜ್‌ಕುಮಾರ್ ಅವರೇ ತಮ್ಮಿಚ್ಛೆಯಂತೆ ಹಾಗೆ ನಡೆದುಕೊಂಡಿರಬಹುದು. ಜೀವನಚೈತ್ರ ಸಿನಿಮಾ ಮಾಡಲು ಶಿವಾಜಿ ಗಣೇಶನ್ ನಿರಾಕರಿಸಿದ್ದರಂತೆ. 'ಸಂಜೆಯಾದರೆ ಕುಡಿದು ಮಲಗುವ ನಾನು ಪಾನ ನಿಷೇಧದ ಬಗ್ಗೆ ಮಾತನಾಡಲು ಅನರ್ಹ. ಅದೇನಿದ್ದರೂ ನಡೆ-ನುಡಿ ಒಂದೇ ಆಗಿರುವ ಡಾ ರಾಜ್‌ಕುಮಾರ್ ಅಂತವರಿಗೇ ಸರಿ' ಅಂದಿದ್ದರಂತೆ. 

Latest Videos

ವಿಷ್ಣುವರ್ಧನ್‌ಗೆ ಪೋನ್‌ನಲ್ಲಿ ಡಾ ರಾಜ್‌ ಹೇಳಿದ್ದು ಕೇಳಿ ಎಸ್‌ ನಾರಾಯಣ್ ಕಕ್ಕಾಬಿಕ್ಕಿ ಯಾಕ್ ಆದ್ರು..?

ಕನ್ನಡ ನಾಡಿನಲ್ಲಿ ಒಂದೆರಡು ತಲೆಮಾರುಗಳಿಗೆ ಸೌಜನ್ಯ, ಸಂಸ್ಕಾರ ಕಲಿಸಿದ ಪುಣ್ಯಾತ್ಮ ಡಾ ರಾಜ್‌ಕುಮಾರ್' ಹೀಗಂತೆ ಸುದರ್ಶನ್ ರೆಡ್ಡಿ ಡಿ ಎನ್‌ ಎನ್ನುವವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾ ಹಾಗೂ ಮೀಡಿಯಾಗಳ ಮೂಲಕ ಬಹಳಷ್ಟು ವೈರಲ್ ಆಗುತ್ತಿದೆ. ಅವರು ಪೋಸ್ಟ್‌ನಲ್ಲಿ ಹೇಳಿರುವಂತೆ  ಆ ಸನ್ನಿವೇಶದಲ್ಲಿ ಸ್ವತಃ ಡಾ ರಾಜ್‌ಕುಮಾರ್ ಅವರೇ ಚಪ್ಪಲಿ ಕಳಚಿಟ್ಟು ಅಡುಗೆ ಮನೆಗೆ ಪ್ರವೇಶಿಸಿರಬಹುದು ಅಥವಾ ಅದನ್ನು ನಿರ್ದೇಶಕರೇ ಹೇಳಿರಲೂಬಹುದು. 

ಏಕೆಂದರೆ, ಆ ಚಿತ್ರವನ್ನು ನಿರ್ದೇಶಿಸಿರುವವರು ದೊರೈರಾಜ್-ಭಗವಾನ್ ಜೋಡಿ. ಆ ಜೋಡಿಯ ಡೈರೆಕ್ಷನ್‌ನಲ್ಲಿ ಹಲವು ಕನ್ನಡ ಚಿತ್ರಗಳು ತೆರೆಗೆ ಬಂದು ಸೂಪರ್ ಹಿಟ್ ಆಗಿವೆ. ಅವರಿಬ್ಬರೂ ಕೂಡ ಸಾಕಷ್ಟು ಸೂಕ್ಷ್ಮ ಮನಸ್ಸು, ವ್ಯಕ್ತಿತ್ವ ಹೊಂದಿರುವ ನಿರ್ದೇಶಕರೇ ಆಗಿದ್ದರು. ಹೀಗಾಗಿ ನಿರ್ದೇಶಕರು ಹೇಳಿ, ಅದರಂತೆ ಡಾ ರಾಜ್‌ಕುಮಾರ್ ಮಾಡಿರಲೂಬಹುದು. ಏಕೆಂದರೆ, ಹಲವಾರು ಬಾರಿ ಡಾ ರಾಜ್‌ಕುಮಾರ್ ಅವರೇ 'ನಾನು ನಿರ್ದೇಶಕರು ಹೇಳಿದಂತೆ ನಟಿಸುತ್ತೇನೆ ಅಷ್ಟೇ' ಅಂದಿದ್ದರು. 

ಡಾ ರಾಜ್‌ಗೆ ಯಾರೋ ಮಾಡಿದ್ದ ಕಥೆಯನ್ನು ವಿಷ್ಣುವರ್ಧನ್‌ಗೆ ಮಾಡಿ ಸಿನಿಮಾ ಗೆಲ್ಲಿಸಿದ್ದು ಯಾರು..?

ಆದರೆ, ಅದನ್ನು ಸ್ವತಃ ಡಾ ರಾಜ್‌ಕುಮಾರ್ ಮಾಡಿರಲಿ, ಅಥವಾ ನಿರ್ದೇಶಕರು ಹೇಳಿ ಮಾಡಿರಲಿ. ಅದೊಂದು ಗಮನಿಸಬೇಕಾದ ಸಂಸ್ಕಾರ ಎಂಬುವುದರಲ್ಲಿ ಎರಡು ಮಾತಿಲ್ಲ. ಏನೇ ಆಗಿದ್ದರೂ ತೆರೆಯ ಮೇಲೆ ನಾವು ನೋಡಿದ್ದು ಡಾ ರಾಜ್‌ಕುಮಾರ್ ಅವರಿಂದಲೆ ಆಗಿದೆ. ನಿರ್ದೇಶಕರು ಹೇಳಿದ್ದರೂ ಅದನ್ನು ಅನುಸರಿಸದೇ ತಮ್ಮಿಷ್ಟದಂತೆ ಮಾಡುವ ಅನೇಕರು ಇರಬಹುದು. ಆದರೆ, ಡಾ ರಾಜ್‌ಕುಮಾರ್ ಅವರಂತೂ ಹಾಗೆ ಮಾಡಿಲ್ಲ ಎನ್ನವುದು ಕಣ್ಣಿಗೇ ಕಾಣಿಸುತ್ತಿದೆ. 

ಅದ್ದರಿಂದ, ಹೇಗೇ ಯೋಚಿಸಿದರೂ ಡಾ ರಾಜ್‌ಕುಮಾರ್ ಚಿತ್ರಗಳ ಮೂಲಕ ಹಲವರು ಸೌಜನ್ಯ-ಸಂಸ್ಕಾರಗಳನ್ನು ನೋಡಿದ್ದು ಸುಳ್ಳಲ್ಲ. ಕೆಲವರು ಅದನ್ನು ಕಲಿತಿದ್ದಾರೆ, ಅನುಸರಿಸಿದ್ದಾರೆ, ಅನುಸರಿಸುತ್ತಲೂ ಇದ್ದಾರೆ. ಆದರೆ, ಎಲ್ಲರೂ ಅಂತಹ ಸಂಸ್ಕಾರವನ್ನು ಅರಿತರೆ, ಕಲಿತರೆ ಸಮಾಜವೇ ಮೇಲ್ಮಟ್ಟದ ಸಂಸ್ಕಾರಪೂರ್ಣ ಎನಿಸುತ್ತದೆ. ಆದರೆ, ಅದು ಸಾಧ್ಯವೇ? ಯಾವಾಗ ಸಾಧ್ಯ ಎಂಬ ಪ್ರಶ್ನೆ ಮೂಡುತ್ತದೆ. 'ಸಾಧಿಸಿದರೆ ಯಾವುದೂ ಅಸಾಧ್ಯವಲ್ಲ' ಎಂಬುದು ಅದಕ್ಕೆ ಉತ್ತರ!

click me!