ಇದೇನು ಗುರೂ, ರಿಯಲ್ ಲೈಫ್ ಸ್ಟೋರಿನೇ ಸಿನಿಮಾ ಆಗ್ತಿದ್ಯಾ? ತೆರೆಗೆ ಬಂದಾಗ ಉತ್ತರ ಸಿಗುತ್ತೆ ಬಿಡಿ!

By Shriram Bhat  |  First Published Jul 20, 2024, 3:09 PM IST

ಕನ್ನಡ ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸಬರ ತಂಡಗಳು ಬರುತ್ತಿವೆ. ಅದರಲ್ಲೂ ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವ ಗಳಿಸಿರುವ ಒಂದಿಷ್ಟು ಯುವಕರು, ಕನ್ನಡ ಚಿತ್ರರಂಗಕ್ಕೆ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಬರುತ್ತಿದ್ದಾರೆ. ಅಂತವರ ಸಾಲಿಗೆ ಈಗ ..


ಕನ್ನಡ ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸಬರ ತಂಡಗಳು ಬರುತ್ತಿವೆ. ಅದರಲ್ಲೂ ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವ ಗಳಿಸಿರುವ ಒಂದಿಷ್ಟು ಯುವಕರು, ಕನ್ನಡ ಚಿತ್ರರಂಗಕ್ಕೆ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಬರುತ್ತಿದ್ದಾರೆ. ಅಂತವರ ಸಾಲಿಗೆ ಈಗ ‘ಪಕರಣ ತನಿಖಾ ಹಂತದಲ್ಲಿದೆ’ ಚಿತ್ರ ಸೇರಿಕೊಳ್ಳಲಿದೆ.

‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರವನ್ನು ಕರದಾಯಾಮ ಸ್ಟುಡಿಯೋಸ್‍ ಸಂಸ್ಥೆಯಡಿ ಚಿಂತನ್‍ ಕಂಬಣ್ಣ ನಿರ್ಮಿಸಿದರೆ, ಸುಂದರ್‍ ಎಸ್‍ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಬುಧವಾರ ಸಂಜೆ Karadaayaama Studios ಯೂಟ್ಯೂಬ್‍ ಚಾನಲ್‍ನಲ್ಲಿ ಚಿತ್ರದ ಮೋಷನ್‍ ಪೋಸ್ಟರ್‍ ಬಿಡುಗಡೆ ಆಗಿದೆ.

Tap to resize

Latest Videos

ಎನೋ ಸೀಕ್ರೆಟ್ ಹೇಳ್ಬಿಟ್ರು ಬಿಗ್ ಬಾಸ್ ಖ್ಯಾತಿ ಚೈತ್ರಾ ವಾಸುದೇವನ್; ಚಿಕ್ಕ ವಯಸ್ಸಲ್ಲೇ ಇಷ್ಟೊಂದ್ ಅನುಭವ?

ಚಿತ್ರದ ಹೆಸರೇ ಹೇಳುವಂತೆ ಇದೊಂದು ಕ್ರೈಮ್‍ ಜಾನರ್ ಕುರಿತಾದ ಚಿತ್ರ. ತನಿಖೆಯೊಂದರ ಸುತ್ತ ಸುತ್ತವಂತಹ  ಚಿತ್ರ. ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ಸಾಗುವ ಕಥೆ ಸಾಕಷ್ಟು ತಿರುವುಗಳನ್ನು ಪಡೆಯುತ್ತಾ ಹೋಗುತ್ತವೆ. ಮುಂದೆ ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು.

ಒಂದಿಷ್ಟು ರಂಗಭೂಮಿ ಗೆಳೆಯರು ಸೇರಿ ಮಾಡಿದ ಚಿತ್ರವಿದು. ಬೇರೆ ಬೇರೆ ರಂಗತಂಡಗಳಲ್ಲಿ ಸಕ್ರಿಯರಾಗಿದ್ದ ಒಂದಿಷ್ಟು ಗೆಳೆಯರು ಒಟ್ಟಿಗೆ ಸೇರಿ ಈ ಚಿತ್ರವನ್ನು ಮಾಡಿದ್ದಾರೆ. ರಂಗಭೂಮಿಯಲ್ಲಿ ಅನುಭವಿಗಳಾದರೂ ಚಿತ್ರರಂಗಕ್ಕೆ ಎಲ್ಲರೂ ಹೊಸಬರೇ. ಮಹಿನ್‍ ಕುಬೇರ್‍, ಮುತ್ತುರಾಜ್‍ ಟಿ, ನಟ ಗಗನ್, ಚಿಂತನ್‍ ಕಂಬಣ್ಣ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು ಮತ್ತು ಕನಕಪುರದಲ್ಲಿ ಚಿತ್ರೀಕರಣವಾಗಿದೆ.

ವಿಷ್ಣುವರ್ಧನ್-ಶಿವರಾಜ್‌ಕುಮಾರ್ ಜೋಡಿ ಚಿತ್ರ ಸೆಟ್ಟೇರಿ ನಿಂತೇ ಹೋಯ್ತು; ಕಾಣದ ಕೈ ಕೆಲಸ ಮಾಡಿತ್ತಾ? 

‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರಕ್ಕೆ ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್ ಛಾಯಾಗ್ರಹಣ, ನಾನಿ ಕೃಷ್ಣ ಸಂಕಲನ ಮತ್ತು ಶಿವೋಂ ಸಂಗೀತವಿದೆ. ವಿ.ಎಫ್.ಎಕ್ಸ್ ಜವಾಬ್ದಾರಿಯನ್ನು ಲಕ್ಷ್ಮೀಪತಿ ಎಂ.ಕೆ ಹೊತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದ್ದು, ಆಗಸ್ಟ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

click me!