
ಪ್ರೇಮಕತೆಗಳನ್ನು ಅತ್ಯಂತ ಸುಂದರವಾಗಿ, ಯಶಸ್ವಿಯಾಗಿ ತೆರೆಗೆ ತರುವ ನಿರ್ದೇಶಕರಲ್ಲಿ ಸಿಂಪಲ್ ಸುನಿ ಪ್ರಮುಖವಾದವರು. ಈಗ ಅವರು ಮತ್ತೊಂದು ಲವ್‌ಸ್ಟೋರಿ ‘ಒಂದು ಸರಳ ಪ್ರೇಮಕತೆ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ವಿನಯ್ ರಾಜ್‌ಕುಮಾರ್, ಮಲ್ಲಿಕಾ ಸಿಂಗ್, ಸ್ವಾತಿಷ್ಟಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಫೆ.8ರಂದು ರಿಲೀಸ್ ಆಗುತ್ತದೆ.
ಈ ಸಿನಿಮಾ ಕುರಿತು ಮಾತನಾಡುವ ವಿನಯ್ ರಾಜ್‌ಕುಮಾರ್, ‘ಇದೊಂದು ಶುದ್ಧ ಪ್ರೇಮಕತೆ. ಎಲ್ಲರೂ ನಿರಾಳವಾಗಿ ನೋಡಬಹುದಾದ ಕೌಟುಂಬಿಕ ಕತೆ. ಸಿಂಪಲ್ ಸುನಿ ತುಂಬಾ ಸಿಂಪಲ್ ಆಗಿ, ತಾಕುವ ಹಾಗೆ ಕತೆ ಹೇಳಿದ್ದಾರೆ’ ಎನ್ನುತ್ತಾರೆ.
Ondu Sarala Prema Kathe: ಕಡಿಮೆ ಚಿಂತೆ, ಸರಳ ಜೀವನವೇ ಚಿತ್ರದ ಸಂದೇಶ: ನಟ ವಿನಯ್ ರಾಜಕುಮಾರ್
ಈಗಾಗಲೇ ಸಿನಿಮಾ ಪ್ರಚಾರ ಶುರು ಮಾಡಿದ್ದು, ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಡು ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿ ಸ್ವಾತಿಷ್ಟಾ ಅವರದು ಅನುರಾಗ ಎಂಬ ಪತ್ರಕರ್ತೆಯ ಪಾತ್ರ. ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಈ ಚಿತ್ರದ ಹೆಚ್ಚುಗಾರಿಕೆ.
ಭಾರಿ ಮೊತ್ತಕ್ಕೆ ಅಂದೊಂದಿತ್ತು ಕಾಲ ಆಡಿಯೋ ಹಕ್ಕು ಮಾರಾಟ
ಮೈಸೂರು ರಮೇಶ್ ಈ ಸಿನಿಮಾ ನಿರ್ಮಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್, ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ತಾರಾಗಣದಲ್ಲಿದ್ದಾರೆ. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ.ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ದಾವಣಗೆರೆ ಜನರ ಅಭಿಮಾನಕ್ಕೆ ತಾವೆಲ್ಲರೂ ಸದಾ ಚಿರಋಣಿಯಾಗಿದ್ದೇವೆ. ಒಂದು ಸ(ವಿ)ರಳ ಪ್ರೇಮಕಥೆ ಚಲನಚಿತ್ರ ಪ್ರೇಮಕಥೆ ಆಧಾರಿತ ಹಾಗೂ ಕೌಟುಂಬಿಕ ಸಿನಿಮಾ. ಸಾಕಷ್ಟು ಏಳುಬೀಳುಗಳ ಮಧ್ಯೆ ಸಾಗುವ ಮ್ಯೂಸಿಕಲ್ ಸ್ಟೋರಿ ಇದೆ. ಸಿನಿಮಾದ ನಾಯಕ ನಟ ಸಂಗೀತ ಪ್ರೇಮಿಯಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕಾಗಿ ವಿನಯ್ ಪಿಯಾನೋ ಸೇರಿ ಹಲವು ಸಂಗೀತ ಕಲಾ ಪ್ರಕಾರಗಳ ಕಲಿತರು. ಮಲ್ಲಿಕಾ ಸಿಂಗ್ ನಾಯಕಿಯಾಗಿದ್ದಾರೆ. ಹಿರಿಯ ಕಲಾವಿದರಾದ ಸಾಧು ಕೋಕಿಲ, ರಾಜೇಶ, ಅರುಣಾ ಬಾಲರಾಜ, ಶ್ಯಾಂ ಮಂಜು, ಸ್ವಾದಿಷ್ಟ, ಕಾರ್ತಿಕ್ ಸೇರಿ ಹಿರಿಯರು ಅಭಿನಯಿಸಿದ್ದಾರೆ ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.