ಯಶ್‌ ಗಡ್ಡದ ಬಗ್ಗೆ ಕಾಲೆಳೆದ ಹಂಸಲೇಖ, ಕಲಾರಂಗ ಕತ್ತಲೆಯತ್ತ ಹೋಗ್ತಿದೆ ಅಂದಿದ್ದೇಕೆ?

By Santosh Naik  |  First Published Jan 29, 2024, 7:59 PM IST

ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ, ರಾಕಿಂಗ್‌ ಸ್ಟಾರ್‌ ಯಶ್‌ ಅವರ ಗಡ್ಡದ ಬಗ್ಗೆ ಮಾತನಾಡಿದ್ದು, ಇಂದು ಕಲಾರಂಗ ಕತ್ತಲೆಯತ್ತ ಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
 


ಬೆಂಗಳೂರು (ಜ.29): ತಮ್ಮ ಸಂಗೀತ ಸುಧೆಯಿಂದಲೇ ದೊಡ್ಡ ಮಟ್ಟದ ಹೆಸರು ಸಂಪಾದಿಸಿರುವ ಸಂಗೀತ ನಿರ್ದೇಶಕ ಹಂಸಲೇಖ, ರಾಕಿಂಗ್‌ ಸ್ಟಾರ್‌ ಯಶ್ ಅವರ ಗಡ್ಡ, ಕೆಜಿಎಫ್‌ ಚಿತ್ರ ಹಾಗೂ ಇತ್ತೀಚಿನ ದಿನಗಳ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಚಿತ್ರಗಳಲ್ಲಿ ಹಿಂಸೆಯನ್ನು ಅತಿಯಾಗಿ ವೈಭವೀಕರಿಸಲಾಗುತ್ತಿದೆ ಎಂದಿರುವ ಹಂಸಲೇಖ, ಸಿನಿಮಾದಲ್ಲಿ ಬರೀ ಕತ್ತಲೇಯೇ  ಹೆಚ್ಚಾಗಿ ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹಿಂದಿನ ಕಾಲದ ಸಿನಿಮಾಗಳು ಹಾಗೂ ಪ್ರಸ್ತುತ ಸಿನಿಮಾರಂಗದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿರುವ ಅವರು, ಇತ್ತೀಚಿನ ಸಿನಿಮಾಗಳ ಗುಣಮಟ್ಟ ಕಡಿಮೆಯಾಗಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಹಂಸಲೇಖ ಹೇಳಿದ್ದೇನು?
ಇಂಡಿಯಾದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು, ದೊಡ್ಡ ದೊಡ್ಡ ಸ್ಟಾರ್‌ಗಳು, ದೊಡ್ಡ ಸಿನಿಮಾಗಳು ಕೈಯಲ್ಲಿ ಮಚ್ಚುಗಳನ್ನು ಬಿಟ್ಟಿಲ್ಲ. ದೊಡ್ಡ ದೊಡ್ಡ ರಿವಾಲ್ವರ್‌ಗಳು, ಎಕೆ 47 ಗಳನ್ನಿ ಬಿಟ್ಟಿಲ್ಲ. ಹಿಂಸೆಗೆ ಏನೇನೋ ಬೇಕೋ ಎಲ್ಲಾ ರೀತಿಯ ವಿಚಿತ್ರವಾದ ಆಯುಧಗಳನ್ನು ತರುತ್ತಿದ್ದಾರೆ. ಇದನ್ನು ವೈಭವೀಕರಿಸೋದನ್ನ ಯಾರೂ ಬಿಟ್ಟಿಲ್ಲ. ಎಲ್ಲರೂ ಮಚ್ಚುಗಳು, ಗನ್ನುಗಳಲ್ಲೇ ಹೊಡೆಯುತ್ತಿದ್ದಾರೆ. ಅಮರಶಿಲ್ಪಿ ಜಕಣಾಚಾರಿ ಚಿತ್ರ ಬರೋವರೆಗೂ ಇಡೀ ಕನ್ನಡ ನಾಡು ಈ ರೀತಿಯ ಬ್ಲ್ಯಾಕ್‌ & ವೈಟ್‌ ಸಿನಿಮಾಗಳನ್ನೇ ನೋಡುತ್ತಿತ್ತು. ಜೀವನದಲ್ಲಿ ಎಲ್ಲಿ ನೋಡಿದರೆ ಬಣ್ಣಗಳನ್ನು ನೋಡುತ್ತಿದ್ದ ಕಾಲದಲ್ಲಿ ಸಿನಿಮಾ ಥಿಯೇಟರ್‌ಗೆ ಹೋದ್ರೆ ಬರೀ ಕಪ್ಪು-ಬಿಳುಪು ಸಿನಿಮಾಗಳು ಇರ್ತಿದ್ದವು. ನಮಗೆಲ್ಲರಿಗೂ ಕಲರ್‌ ಬ್ಲೈಂಡ್‌ ಆಗಿತ್ತು. ಚಿತ್ರಗಳನ್ನ ನಾವು ಕಲರ್‌ ಬ್ಲೈಂಡ್‌ನಲ್ಲೇ ನೋಡ್ತಿದ್ದೆವು. ಸುಮಾರು 40-45 ವರ್ಷಗಳ ಕಾಲ ಸಿನಿಮಾಗಳನ್ನು ಹಾಗೇ ನೋಡಿದ್ದೆವು. ಆಮೇಲೆ ಬಣ್ಣಗಳು ಬಂದಿದ್ದವು.

Tap to resize

Latest Videos

ಆದರೆ, ಮೊದಲ ಬಾರಿಗೆ ಬಣ್ಣದ ಸಿನಿಮಾಗಳು ಬಂದಾಗ ನಮಗೆ ಅವುಗಳು ಡಿಸ್ಟರ್ಬ್‌ ಮಾಡುತ್ತಿದ್ದವು. ಬ್ಲ್ಯಾಕ್‌ ಆಂಡ್‌ ವೈಟ್‌ ಸಿನಿಮಾಗಳೇ ಚೆನ್ನಾಗಿತ್ತು ಅನಿಸುತ್ತಿತ್ತು. ಬ್ಲ್ಯಾಕ್‌ ಆಂಡ್‌ ವೈಟ್‌ ಅನ್ನೋದು ಸತ್ಯ ಮತ್ತು ಸುಳ್ಳುಗಳನ್ನು ಪ್ರತಿಬಿಂಬಿಸುತ್ತಿತ್ತು.ನಮಗೆ ನಾಟಕ ಕೂಡ ಅದನ್ನೇ ಹೇಳುತ್ತಿತ್ತು. ಸಿನಿಮಾ ಕೂಡ ಅದನ್ನೇ ಹೇಳ್ತಿತ್ತು. ಅದಕ್ಕೆ ಅಭ್ಯಾಸವಾಗಿದ್ದವು. ಕಲರ್‌ ಬಂದ ನಂತರ ಎಲ್ಲಾ ಬದಲಾಗಿತ್ತು. ಹೊರಗಡೆ ಬದುಕು ಕೂಡ ಹಾಗೆ ಇರ್ತಿತ್ತು. ಸಿನಿಮಾ ಕೂಡ ಹಾಗೆ ಇರ್ತಿತ್ತು. ಯಾವ ವ್ಯತ್ಯಾಸಗಳೂ ಇರ್ತಿರಲಿಲ್ಲ. ಆಮೇಲೆ ಟೆಕ್ನಾಲಜಿ ಬೆಳೆದು ಏನೋನೋ ಆದವು.  ಈಗ ಯಾವ ಸಿನಿಮಾಗಳನ್ನೂ ಕೂಡ ಹೆಚ್ಚು ಬೆಳಕೇ ಇರೋದಿಲ್ಲ. ಬರೀ ಕತ್ತಲು. ಕಣ್ಣು, ದಾಡಿ, ಮೂಗು, ಕಿವಿ, ಕೈ, ರಕ್ತ.. ಇದು ಮಾತ್ರ ಕಾಣುತ್ತೆ. ಯಾರಿಗೂ ಬಣ್ಣಗಳೇ ಇಷ್ಟವಿಲ್ಲ. ಎಲ್ಲಾ ಕತ್ತಲಲ್ಲೇ ಮುಳುಗಿ ಹೋಗಿದ್ದೇವೆ. ಯಾವ ಸಿನಿಮಾ ಬೇಕಾದ್ರೂ ನೋಡಿ.  ಇತ್ತೀಚೆಗೆ ಯಾವ್ದೋ ಹೊಸ ಚಿತ್ರ ನೋಡಿದೆ. ಇಡೀ ಸಿನಿಮಾ ಕತ್ತಲೆ.  ಅಂದ್ರೆ ಮನುಷ್ಯ ಗೊತ್ತಿಲ್ಲದ ಹಾಗೆ ಕತ್ತಲ ಕಡೆ ಹೋಗ್ತಾ ಇದ್ದಾರೆ. ಕಲಾರಂಗಕ್ಕೆ ಕತ್ತಲು ಕವಿಯುತ್ತಿದೆ ಎನ್ನುವ ಅರ್ಥ ಇದು.

'40 ವರ್ಷ ಆದ್ರೂ ಫಿಗರ್-ಗಿಗರ್ ಮೆಂಟೇನ್ ಮಾಡ್ಕೊಂಡು..,ಯಾರ ಬಗ್ಗೆ ಹೀಗಂದ್ರು ಅದಿತಿ ಪ್ರಭುದೇವ..!?

ಕೆಜಿಎಫ್‌ ಎಫೆಕ್ಟ್‌. ಕನ್ನಡ ಸಿನಿಮಾದಲ್ಲಿ ಎಲ್ಲಿ ಬೇಕಾದ್ರೂ ನೋಡಿ, ಕ್ಯಾಮೆರಾಮೆನ್‌ ಕೂಡ ದಾಡಿ ಬಿಟ್ಟಿರ್ತಾನೆ. ಡೈರೆಕ್ಟರ್‌, ಕೋರಿಯೋಗ್ರಾಫರ್‌, ಡೈರೆಕ್ಟರ್‌ ಕೊನೆಗೆ ಪ್ರೊಡ್ಯೂಸರ್‌ ಕೂಡ ದಾಡಿ ಬಿಟ್ಟಿರ್ತಾನೆ. ಎಡಿಟರ್‌ ಕೂಡ ತಾನೇನು ಕಮ್ಮಿ ಅಂತಾ ಅವನೂ ದಾಡಿ ಬಿಟ್ಟಿರ್ತಾನೆ. ಮೊದಲೆಲ್ಲಾ ಏನಾದ್ರೂ ತಪ್ಪು ಮಾಡಿದ್ರೆ, 'ಏನಾಗಿದ್ಯೋ ನಿಂಗೆ ದಾಡಿ' ಅಂತಾ ಬೈಯ್ತಾ ಇದ್ರು. ಆದರೆ, ಈಗ ದಾಡಿಯೇ ಫ್ಯಾಶನ್‌ ಆಗಿದೆ ಎಂದಿದ್ದಾರೆ. ನನಗೆ ಈ ಸಿನಿಮಾದ ಹೀರೋ ಹೆಸರು ಅಜಿತ್‌ ಅಂತಾ ಗೊತ್ತಿತ್ತು. ಯಾವಾಗ ಯಶ್‌ಜೀತ್‌ ಆಯ್ತು ಅಂತಾ ಗೊತ್ತಿಲ್ಲ. ಯಶ್‌ ಸ್ಟಾರ್‌ ಆದ ಮೇಲೆ ಹೆಸರು ಬದಲಿಸಿಕೊಂಡಿರ್ಬೇಕು ಅಂತಾ ಹಂಸಲೇಖ ಹೇಳಿದ್ದಾರೆ.

ರಾಜಹುಲಿನ ಭೇಟಿ ಮಾಡಿದ ಉಪಾಧ್ಯಕ್ಷ; ಅತ್ತಿಗೆ ಮಾಡಿದ ತಿಂಡಿ ಹೇಗಿತ್ತು ಎಂದ ನೆಟ್ಟಿಗರು!

ಡೈರೆಕ್ಟರ್‌ಗೆ ಕಮಾಂಡ್‌ ಇರಬೇಕೆಂದರೆ, ಆತನ ಸಿನಿಮಾದ ಕಥೆ ಗಟ್ಟಿಯಾಗಿರಬೇಕು. ಗಟ್ಟಿಯಾದ ಕಥೆಗಳನ್ನ ಯಾವ ನಿರ್ದೇಶಕ ಇಟ್ಟುಕೊಂಡಿರ್ತಾನೋ, ಅವನಿಗೆ ತನ್ನ ಕೆಲಸದ ಮೇಲೆ ಕಮಾಂಡ್‌ ಇರುತ್ತೆ. ಯಾವ ಸೂಪರ್‌ ಸ್ಟಾರ್‌ನ ಹಾಕಿಕೊಂಡ್ರೂ ಆ ಕಥೆಯೇ ಅವನನ್ನು ನಿರ್ದೇಶಿಸುತ್ತೆ. ಅದೇ ಕಾರಣಕ್ಕಾಗಿ ಹಾಲಿವುಡ್‌ನಲ್ಲಿ ಒಂದು ದೊಡ್ಡ ಬೋರ್ಡ್‌ ಹಾಕಿದ್ದಾರೆ. ಅದರಲ್ಲಿ ಡೋಂಟ್‌ ಟ್ರಸ್ಟ್‌ದ ಸ್ಟಾರ್ಸ್‌, ಟ್ರಸ್ಟ್‌ ದ ಟೇಲ್‌ ಅಂತಾ. ಅಂದರೆ, ಕಥೆಯನ್ನು ನಂಬಿ, ಸೂಪರ್‌ ಸ್ಟಾರ್‌ಗಳನ್ನು ನಂಬಬೇಡಿ ಎಂದರ್ಥ ಎಂದು ಹೇಳಿದ್ದಾರೆ.

click me!