ಶಿವಣ್ಣನ ಮದ್ವೆ ದಿನ ರಾಜ್​ಕುಮಾರ್​ ಹೋಟೆಲ್​ನಲ್ಲಿ ಊಟ ಮಾಡಿದ್ರಂತೆ! ​ಘಟನೆ ವಿವರಿಸಿದ ಸುಧಾರಾಣಿ

Published : Apr 25, 2025, 10:33 PM ISTUpdated : Apr 26, 2025, 07:11 AM IST
ಶಿವಣ್ಣನ ಮದ್ವೆ ದಿನ ರಾಜ್​ಕುಮಾರ್​ ಹೋಟೆಲ್​ನಲ್ಲಿ ಊಟ ಮಾಡಿದ್ರಂತೆ! ​ಘಟನೆ ವಿವರಿಸಿದ ಸುಧಾರಾಣಿ

ಸಾರಾಂಶ

ಡಾ. ರಾಜ್‍ಕುಮಾರ್ 96ನೇ ಹುಟ್ಟುಹಬ್ಬದಂದು ನಟಿ ಸುಧಾರಾಣಿ ಶಿವರಾಜ್ ಕುಮಾರ್ ಮದುವೆಯ ಕುತೂಹಲಕಾರಿ ಘಟನೆ ಹಂಚಿಕೊಂಡಿದ್ದಾರೆ. ಜನಸಂದಣಿಯಿಂದ ರಾಜ್ ಮತ್ತು ಬಂಗಾರಪ್ಪ ಕುಟುಂಬಕ್ಕೆ ಊಟ ಸಿಗದೇ ಹೋಟೆಲ್‍ನಲ್ಲಿ ಊಟ ಮಾಡಿದ್ದರಂತೆ. ಸುಧಾರಾಣಿ ರಾಜ್ ಜೊತೆಗಿನ ಚಿತ್ರೀಕರಣದ ಅನುಭವ, ಆರಂಭಿಕ ಭಯ ಮತ್ತು ರಾಜ್‍ರ ವ್ಯಕ್ತಿತ್ವದ ಬಗ್ಗೆಯೂ ವಿವರಿಸಿದ್ದಾರೆ.

ನಿನ್ನೆ ಅಂದ್ರೆ ಏಪ್ರಿಲ್​ 24 ಕನ್ನಡದ ವರನಟ ಡಾ.ರಾಜ್​ಕುಮಾರ್​ ಅವರ 96ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಹಲವಾರು ತಾರೆಯರು ನಟನ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಟಿ ಸುಧಾರಾಣಿ ಅವರು ಡಾ.ರಾಜ್​ಕುಮಾರ್​ ಜೊತೆಗಿನ ಹಲವಾರು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅಷ್ಟಕ್ಕೂ ಸುಧಾರಾಣಿ ಅವರನ್ನು ಸ್ಯಾಂಡಲ್​ವುಡ್​ ನಾಯಕಿಯನ್ನಾಗಿ ಮಾಡಿದ್ದೇ ರಾಜ್​ಕುಮಾರ್​ ಅವರು. ಆದ್ದರಿಂದ ಅವರ ಫ್ಯಾಮಿಲಿ ಜೊತೆಗೆ ಸುಧಾರಾಣಿ ಅವರ ಒಡನಾಟ ಬಹು ವರ್ಷಗಳಿಂದಲೂ ಇದೆ. ಇದೀಗ ಅವರು ಶಿವರಾಜ್​ ಕುಮಾರ್​ ಅವರ ಮದುವೆಯ ಬಗ್ಗೆ ಶೇರ್​ ಮಾಡಿಕೊಂಡಿದ್ದಾರೆ. 

ಶಿವರಾಜ್​ ಕುಮಾರ್​ ಮತ್ತು ಗೀತಾ ಅವರ ಮದುವೆಯಾಗಿದ್ದು 1986 ಮೇ 19ರಂದು.  ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಅವರ ಅದ್ದೂರಿ ವಿವಾಹ ನೆರವೇರಿತ್ತು. ಹೇಳಿ ಕೇಳಿ ಡಾ.ರಾಜ್​ ಕುಟುಂಬದ ಮದುವೆ. ಜೊತೆಗೆ ಅತ್ತ ಬಂಗಾರಪ್ಪನ ಪುತ್ರಿ ಬೇರೆ. ಎರಡೂ ಕಡೆಯಿಂದ ಬಂದ ಜನರ ಸಂಖ್ಯೆ ಮಿತಿ ಮೀರಿ ಹೋಗಿತ್ತು. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಬಂದಿದ್ದರು. ಖುದ್ದು ರಾಜ್​ಕುಮಾರ್​ ಅವರೇ ಮಗನ ಮದುವೆಯಲ್ಲಿ ಊಟ ಮಾಡದೇ ಹೋಟೆಲ್​ನಲ್ಲಿ ಊಟ ಮಾಡಿದರಂತೆ. ಅವರ ಜೊತೆಗೆ ಸುಧಾರಾಣಿನೂ ಹೋಗಿದ್ದರಂತೆ! ಅಷ್ಟಕ್ಕೂ ಆಗಿದ್ದು ಏನೆಂದರೆ, ಆ ಜನಜಂಗುಳಿಯಲ್ಲಿ ಖುದ್ದು ರಾಜ್​ಕುಮಾರ್​ ಅವರಿಗೇ ಊಟ ಸಿಗಲಿಲ್ಲವೆನ್ನುವ ಕುತೂಹಲದ ವಿಷಯವನ್ನು ಸುಧಾರಾಣಿ ರಿವೀಲ್​ ಮಾಡಿದ್ದಾರೆ. ಈ ಮದುವೆಯಲ್ಲಿ ಬಂಗಾರಪ್ಪನವರ ಕುಟುಂಬದರಿಗೂ ಊಟ ಸಿಕ್ಕಿರಲಿಲ್ಲ. ಎಲ್ಲರೂ ಕೊನೆಗೆ ಜನಾರ್ದನ ಹೋಟೆಲ್​ನಲ್ಲಿ ಊಟ ಮಾಡಿದ್ದರು. ಇದೇ ವಿಷಯವನ್ನು ಸುಧಾರಾಣಿ ಈಗ ಹೇಳಿದ್ದಾರೆ. 

'ಹಾಲಲ್ಲಾದರೂ ಹಾಕು' ಶೂಟಿಂಗ್​ನಲ್ಲಿ ರಾಜ್​ ಆ ನೋಟ ಬೀರಿದಾಗ ನಡೆದಿತ್ತು ಪವಾಡ: ಸುಧಾರಾಣಿ ಅನುಭವ ಕೇಳಿ...
   
ಈ ಹಿಂದೆ ಸುಧಾರಾಣಿ ಅವರು, ಡಾ.ರಾಜ್​ಕುಮಾರ್​ ಅವರ ಜೊತೆಗೆ ನಟಿಸಿರುವ ಚಿತ್ರಗಳ ಬಗ್ಗೆ ಮಾತನಾಡಿದ್ದರು.  1988ರಲ್ಲಿ ಬಿಡುಗಡೆಯಾದ ದೇವತಾ ಮನುಷ್ಯ ಚಿತ್ರದ ಬಗ್ಗೆ ಮಾತನಾಡಿದ್ದರು. ಇದರಲ್ಲಿ ಸುಧಾರಾಣಿ ಅವರು ರಾಜ್​ ಅವರ ಮಗಳಾಗಿ ನಟಿಸಿದ್ದರು. ಆಗಿನ್ನೂ ಸುಧಾರಾಣಿ ಅವರಿಗೆ 15 ವರ್ಷ. ಅಂಥ ಮೇರು ನಟನ ಜೊತೆ ನಟನೆ ಮಾಡುವುದು ಎಂದರೆ ಸುಲಭದ ಮಾತೆ? ಅವರ ಮಗಳಾಗಿ ನಟಿಸುವಾಗಲೂ ಅಪ್ಪನಿಗೆ ಸಮನಾಗಿ ನಟಿಸಲೇಬೇಕು ಎನ್ನುವ ಛಲ ಸುಧಾರಾಣಿ ಅವರದ್ದು. ಆದರೆ, ಡಾ.ರಾಜ್​ ಎದುರು ನಟಿಸುವುದು ಕೇಳಿದರೆನೇ  ಎಂಥ ನಟರೇ ಭಯಪಡುತ್ತಿದ್ದರು. ತಮ್ಮ ಸಹನಟರನ್ನು ರಾಜ್​ಕುಮಾರ್​ ಅವರು ಅದೆಷ್ಟು ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದರು, ಅದೆಷ್ಟು ಪ್ರೀತಿಸುತ್ತಿದ್ದರು, ಶೂಟಿಂಗ್​ ಸಮಯದಲ್ಲಿ ಅದೆಷ್ಟು ರೀತಿಯಲ್ಲಿ ಕಾಳಜಿ ವಹಿಸುತ್ತಿದ್ದರು ಎನ್ನುವುದನ್ನು ಇದಾಗಲೇ ಹಲವಾರು ಮಂದಿ ಮಾತನಾಡಿದ್ದಾರೆ. ಆದರೆ, ಆ ಸಮಯದಲ್ಲಿ ಸುಧಾರಾಣಿ ಅವರಿಗೆ ತುಂಬಾ ಭಯವಾಗಿ ಹೋಗಿತ್ತಂತೆ.

ಕೊನೆಗೆ ಅಪ್ಪಾಜಿಯವರೇ ಹೇಗೆ ತಮ್ಮನ್ನು ಸಮಾಧಾನ ಮಾಡಿದರು ಎಂದು ನಟಿ ಹೇಳಿದ್ದರು. ಹೊರಗಡೆ ಸಕತ್​ ತಮಾಷೆ ಮಾಡುತ್ತಿದ್ದ ರಾಜ್​ಕುಮಾರ್​ ಅವರು ಬಣ್ಣ ಹಚ್ಚಿ ಶೂಟಿಂಗ್​ನಲ್ಲಿ ಪಾತ್ರಧಾರಿಯಾದಾಗ, ಸಂಪೂರ್ಣ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದನ್ನು ನೋಡಿ ನಾನು ಶಾಕ್​ಗೆ ಒಳಗಾಗಿ ಹೋದೆ ಎಂದಿದ್ದರು ಸುಧಾರಾಣಿ. ಹೊರಗೆ ನೋಡಿದ್ದ ಅಪ್ಪಾಜಿಯೇ ಬೇರೆ, ಇಲ್ಲಿ ನೋಡ್ತಿರೋ ಅಪ್ಪಾಜಿಯೇ ಬೇರೆ. ಆ ಪಾತ್ರದಲ್ಲಿ ಅಪ್ಪಾಜಿ ಮೈಮರೆತುಹೋಗಿದ್ದರು, ಅವರೇ ಆ ಪಾತ್ರವಾಗಿಬಿಟ್ಟಿದ್ದರು, ಅವರನ್ನು ನೋಡುತ್ತಿದ್ದಂತೆಯೇ ಮೊದಲೇ ಹೆದರಿದ್ದ ನನಗೆ ಇನ್ನಷ್ಟು ಭಯ ಆಗೋಯ್ತು ಎಂದು ನೆನಪಿಸಿಕೊಂಡಿದ್ದರು. 

'ಮಂತ್ರಾಲಯ ಮಹಾತ್ಮೆ' ಚಿತ್ರ ಕೊನೆಗೂ ರಾಜ್​ ನೋಡ್ಲೇ ಇಲ್ಲ- ಡಬ್​ ಮಾಡುವಾಗ್ಲೂ ಕಣ್ಣು ಮುಚ್ಚಿದ್ರು! ಕಾರಣ ರಿವೀಲ್​ 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!