ಅಗಲಿದ ಅಪ್ಪುಗೆ ದೆಹಲಿಯ ಕರ್ನಾಟಕ ಸಂಘದಿಂದ ನುಡಿನಮನ

By Suvarna NewsFirst Published Oct 31, 2021, 10:27 PM IST
Highlights

* ದಿವಂಗತ ಪುನೀತ್ ರಾಜಕುಮಾರ್‌ ಗೆ ನುಡಿನಮನ ಕಾರ್ಯಕ್ರಮ
* ದೆಹಲಿಯ ಕರ್ನಾಟಕ ಸಂಘದಿಂದ ನುಡಿನಮನ
 * ಅಧ್ಯಕ್ಷತೆವಹಿಸಿದ್ದ ಶ್ರೀ ಡಾ ನಿರ್ಮಲಾನಂದ ಸ್ವಾಮೀಜಿ

ನವದೆಹಲಿ, (ಅ.31): ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ದೆಹಲಿಯ ಕರ್ನಾಟಕ ಸಂಘದಿಂದ ನುಡಿನಮನ ಸಲ್ಲಿಸಲಾಯಿತು.

ಶ್ರೀ ಡಾ ನಿರ್ಮಲಾನಂದ ಸ್ವಾಮೀಜಿಯ ಅಧ್ಯಕ್ಷತೆಯಲ್ಲಿ ದೆಹಲಿಯ ಆರ್ ಕೆ ಪುರ್ಂ ನಲ್ಲಿರುವ ದೆಹಲಿ ಕನ್ನಡ ಸಂಘದಲ್ಲಿ (Delhi Karnataka Association) ನಡೆದಿದ್ದು, ಕ್ಯಾಂಡಲ್ ದೀಪ ಹಚ್ಚಿ ಮೌನಾಚರಣೆ ಆಚರಿಸೋ ಮೂಲಕ ಅಗಲಿದ ಪುನೀತ್ ಗೌರವ ಸಲ್ಲಿಕೆ ಮಾಡಲಾಯ್ತು.

ನೇತ್ರದಾನದ ಮೂಲಕ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ ವಿಜಯಪುರ ಅಭಿಮಾನಿಗಳು

 ಐಎಎಸ್ ಅಧಿಕಾರಿ ಸುಹಾಸ್ ಭಾಗಿಯಾಗಿದ್ರು. ಇನ್ನು ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು, ಡಾ ಎಂ ಕೆ ರಮೇಶ್ ಮತ್ತು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿಎಂ ನಾಗರಾಜ್ ಭಾಗವಹಿಸಿದ್ರು.

ಈ ವೇಳೆ ಮಾತನಾಡಿದ ಪ್ಯಾರಾ ಓಲಂಪಿಕ್ ವಿಜೇತ ಐಎಎಸ್ ಅಧಿಕಾರಿ ಸುಹಾಸ್, ಅಕ್ಟೋಬರ್ 2 ನೇ ತಾರೀಖಿನಂದು ಪುನೀತ್ ಮನೆಗೆ ಹೋಗಿದ್ದೆ. ನಾಲ್ಕು ಗಂಟೆಗಳ ಕಾಲ ಅವರ ಜೊತೆ ಕಾಲಕಳೆದೆ. ದೆಹಲಿಗೆ ಬಂದಾಗ ಮನೆಗೆ ಬನ್ನಿ ಎಂದು ಹೇಳಿದ್ದೆ. ಅಣ್ಣಾವರನಂತೂ ಭೇಟಿ ಮಾಡೊದಕ್ಕೆ ಆಗಿಲ್ಲ. ಪುನೀತ್ ರನ್ನಾದ್ರು ಭೇಟಿ ಮಾಡಿದೆ ಅದು ನನ್ನ ಸೌಭಾಗ್ಯ ಎಂದರು.

ರಾಜೇಂದ್ರಸಿಂಗ್ ಬಾಬು ಮಾತು
ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ಮಾತನಾಡಿ,  ನಾನು ಪುನೀತ್‌ ರನ್ನ ಚಿಕ್ಕ ವಯಸ್ಸಿಂದ ನೋಡಿಕೊಂಡು ಬಂದವನು.  ಕನ್ನಡ ಚಿತ್ರರಂಗದ ಬಗ್ಗೆ ಪುನೀತ್ ಗೆ ಭಾರಿ ಅಭಿಮಾನ ಇತ್ತು. ಧಾನ ಮಾಡೋದು ಒಂದು ಕೈಯಿಂದ ಕೊಟ್ಟರೆ ಇನ್ನೊಂದು ಕೈಗೆ ಗೊತ್ತುಮಾಡದ ವ್ಯಕ್ತಿ. ತಂದೆಗೂ ಮೀರಿದ ಅಭಿಮಾನಿಗಳನ್ನ ಹೊಂದಿದ್ದರು ಎಂದು ನೆನಪಿಸಿಕೊಂಡರು.

ಬಿಬಿಸಿ ನ್ಯೂಸ್ ಸುದ್ದಿ ಮಾಡುತ್ತೆ,. ಗೂಗಲ್ ನಮನ ಸಲ್ಲಿಸುತ್ತೆ. ಪಾಪಿ ಚಿರಾಯು ಅಂತಾರಲ್ಲ, ಪುನೀತ್ ಮಾತ್ರ ಬೇಗನೆ ಹೋದ್ರು. ನಾನು ಬೆಂಗಳೂರಿಗೆ ಹೋಗೊದಕ್ಕಾಗಲಿಲ್ಲ ಅನ್ನೊ ಕೊರಗಿತ್ತು. ಹಾಗಾಗಿ ಇಲ್ಲಿಂದಲೆ ನಮನ ಸಲ್ಲಿಸುತ್ತೇನೆ ಎಂದರು.

ಡಾ ಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿಕೆ
ಪುನೀತ್ ರಾಜಕುಮಾರ್ ಕಳೆದು ಕೊಂಡಿರೋದು ತುಂಬಾ ಬೇಸರದ ಸಂಗತಿ. ಚಿಕ್ಕವಯಸ್ಸಿನಲ್ಲಿ ಅವರು ಹೋಗಿರೋದು ಬೇಸರ ತಂದಿದೆ. ಪುನೀತ್ ಗೆ ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದುಗೊತ್ತಿತ್ತು. ನಮ್ಮ ಮಠದ ಕಾರ್ಯಕ್ರಮದಲ್ಲಿ ಬಂದಾಗ ಹುಡುಗರು ಡ್ಯಾನ್ಸ್ ಮಾಡಿ ಎಂದರು. ಇಲ್ಲಿ ಸ್ವಾಮೀಜಿಗಳಿದ್ದಾರೆ ಇನ್ನೊಂದು ಬಾರಿ ಬಂದು ಡ್ಯಾನ್ಸ್ ಮಾಡುತ್ತೆನೆ ಅಂತ ಹೇಳಿದ್ರು ಎಂದು ಸ್ಮರಿಸಿದರು.

ನಮ್ಮ ಬೇರೆ ಕಾರ್ಯಕ್ರಮಕ್ಕೂ ಬರಲು ಆಹ್ವಾನಿಸಿದ್ದೆವು. ದೂರ ಆದರು ಬರಬೇಕು ಅಂತ ಹೇಳಿದ್ದೆವು. ಅದಕ್ಕೆ ಪುನೀತ್ ದೂರ ದೊಡ್ಡ ವಿಚಾರವೆ ಇಲ್ಲ ಅಂತ ಹೇಳಿದ್ರು, ಅದು ಅವರ ದೊಡ್ಡಗುಣ. ಹಲವಾರು ಅನಾಥಾಶ್ರಮ ನಡೆಸುತ್ತಿದ್ದಾರೆ, ಅವರು ಬರಿ ನಟನಾಗಿದ್ದರೆ ಅಷ್ಟೋಂದು ಜನ ಬರುತ್ತಿರಲಿಲ್ಲ ಎಂದು ಹೇಳಿದರು.

ನನಗೆ ನುಡಿನಮನ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾಗ ಬೆಂಗಳೂರಿನಿಂದ ದೆಹಲಿ ನನಗೆ ದೂರ ಎನಿಸಲಿಲ್ಲ. ಯಾಕಂದ್ರೆ ಪುನೀತ್ ಅವರ ಮಾತಿನಂತೆ ದೂರ ದೊಡ್ಡವಿಚಾರವೇ ಆಗಲ್ಲ ಎಂದು ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಸ್ವಾಮೀಜಿ ನುಡಿನಮನ ಸಲ್ಲಿಸಿದರು.

ಪುನೀತ್ ರಾಜ್​ಕುಮಾರ್​ ಅವರು ಮೃತಪಟ್ಟಿದ್ದಾರೆ ಎನ್ನುವ ವಿಚಾರವನ್ನು ಅನೇಕರಿಗೆ ನಂಬೋಕೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಅವರ ಅಂತ್ಯಸಂಸ್ಕಾರ ನಡೆದರೂ ಅಭಿಮಾನಿಗಳ ಬಳಿ ಇದನ್ನು ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಪುನೀತ್​ ಅಂತ್ಯಸಂಸ್ಕಾರದ ಫೋಟೋಗಳು ಹಾಗೂ ವಿಡಿಯೋಗಳು ಸಾಕಷ್ಟು ವೈರಲ್​ ಆಗಿದ್ದು ಅಭಿಮಾನಿಗಳ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. 

click me!