ಕಾಲು ಸುಟ್ಟಿಕೊಂಡು ಹಾಸಿಗೆ ಹಿಡಿದ ಹೆಂಡತಿ ; ಎಡವಟ್ಟಿನ ಬಗ್ಗೆ ಕ್ಲಾರಿಟಿ ಕೊಟ್ಟ ಮಾಸ್ಟರ್ ಆನಂದ್

Published : Mar 10, 2025, 08:35 AM ISTUpdated : Mar 10, 2025, 09:05 AM IST
ಕಾಲು ಸುಟ್ಟಿಕೊಂಡು ಹಾಸಿಗೆ ಹಿಡಿದ ಹೆಂಡತಿ ; ಎಡವಟ್ಟಿನ ಬಗ್ಗೆ ಕ್ಲಾರಿಟಿ ಕೊಟ್ಟ ಮಾಸ್ಟರ್ ಆನಂದ್

ಸಾರಾಂಶ

ನಟಿ ಯಶಸ್ವಿನಿ ಮನೆಯಲ್ಲಿ ಬಿಸಿ ನೀರಿನ ಹಬೆ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ತಕ್ಷಣ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಮಾಸ್ಟರ್ ಆನಂದ್ ಈ ಘಟನೆಯ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ಯಶಸ್ವಿನಿ ಹೇಗೆ ಎಡವಟ್ಟು ಮಾಡಿಕೊಂಡರು ಎಂದು ವಿವರಿಸಿದ್ದಾರೆ. ಮಕ್ಕಳು ಸಹ ತಾಯಿಯ ಕಾಳಜಿವಹಿಸಿ, ತಮಾಷೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕನ್ನಡ ಚಿತ್ರರಂಗದ ಅದ್ಭುತ ನಟ, ನಿರ್ದೇಶಕ ಹಾಗೂ ನಿರೂಪಕ ಮಾಸ್ಟರ್ ಆನಂದ್‌ರವರ ಪತ್ನಿ ಯಶಸ್ವಿನಿ ಮನೆಯಲ್ಲಿ ಹಾಟ್ ವಾಟರ್ ಸ್ಟೀಮ್‌ ತೆಗೆದುಕೊಳ್ಳುವಾಗ ಎಡವಟ್ಟು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಸಖತ್ ರಿಲ್ಯಾಕ್ಸ್‌ ಆಗಿದ್ದುಕೊಂಡು ಬಿಸಿ ನೀರಿನ ಸ್ಟೀಮ್ ತೆಗೆದುಕೊಳ್ಳುವಾಗ ಕೈ ತಪ್ಪಿ ಸ್ಟೀಮ್‌ ಬಾಕ್ಸ್‌ ಸಮೇತ ನೀರು ಎರಡು ಕಾಲುಗಳ ಮೇಲೆ ಬಿದ್ದಿದೆ. ಆಗ ಕಾಲಿಗೆ ಉರಿಉರಿ ಆಗಿದೆ ಎಂದು ವೈದ್ಯರಿಗೆ ತೋರಿಸಿದ್ದಾರೆ. ಕ್ರೀಮ್ ಹಚ್ಚಿ ಕೂಲ್ ಮಾಡಿ ಕಳುಹಿಸಿದ್ದಾರೆ. ಆದರೆ ನೀರು ಸಿಕ್ಕಾಪಟ್ಟೆ ಬಿಸಿ ಇದ್ದ ಕಾರಣ ನೀರು ಗುಳ್ಳೆಗಳು ಆಗಿದೆ. ಕೊನೆಗ ವೈದ್ಯರು ಗುಳ್ಳೆಗಳನ್ನು ಹೊಡೆದು ನೀರು ಹೊರ ತೆಗೆದು ಬ್ಯಾಂಡೇಜ್‌ ಹಾಕಿ ಕಳುಹಿಸಿದ್ದಾರೆ. ಈ ಘಟನೆ ನಡೆದಾಗ ಮಾಸ್ಟರ್ ಆನಂದ್ ಹಂಪಿಯಲ್ಲಿ ಇದ್ದರು. ಬೆಂಗಳೂರಿಗೆ ಬರುತ್ತಿದ್ದಂತೆ ಹೆಂಡತಿ ಹಾರೈಕೆ ಮಾಡಿದ್ದಾರೆ. ಹಾಗೂ ವಿಡಿಯೋ ಮೂಲಕ ಎಡವಟ್ಟು ಮಾಡಿಕೊಂಡಿದ್ದು ಹೇಗೆ ಎಂದು ವಿವರಿಸಿದ್ದಾರೆ.  

'ಮೇಡಂ ಅವರ ಕಾಲಿಗೆ ಹೇಗೆ ಬಿಸಿ ನೀರು ಬಿತ್ತು ಎಂದು ಸುಮಾರು ಜನರು ಕೇಳುತ್ತಿದ್ದಾರೆ.  ಹೆಂಗೆ ಮೇಡಂ ಕಾಲಿನ ಅಷ್ಟು ಭಾಗ ಮಾತ್ರ ಸುಟ್ಟಿಕೊಂಡರು ಎಂದು ಕೇಳಿದ್ದಾರೆ. ನಮ್ಮ ಮನೆಯಲ್ಲಿ ಟಿವಿ ಮುಂದೆ ಒಂದು ಸೋಫಾ ಇದೆ ಅದರ ಪಕ್ಕದಲ್ಲಿ ಸ್ವಿಚ್‌ ಇದೆ. ಸೋಫಾ ಮೇಲೆ ಕುಳಿತಿರುವಾಗ ಹಾಟ್‌ ವಾಸ್ಟರ್ ಸ್ಟೀಮ್‌ನ ಟೇಬಲ್‌ ಮೇಲೆ ಇಡಬೇಕು ಇಲ್ಲವಾದರೆ ಸರಿಯಾಗಿ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೆ ಮೇಡಂ ಅವರು ಸೋಫಾ ಮೇಲೆ ಈ ರೀತಿ ಕುಳಿತುಕೊಂಡು ಕಾಲುಗಳನ್ನು ಈ ರೀತಿಯಲ್ಲಿ ಇಟ್ಟುಕೊಂಡು ಸ್ಟೀಮ್ ತೆಗೆದುಕೊಂಡಿದ್ದಾರೆ. (ವಿಡಿಯೋದಲ್ಲಿ ಆನಂದ್ ಸಂಪೂರ್ಣ ಸೀನ್ ತೋರಿಸಿದ್ದಾರೆ). ಸ್ವಿಚ್‌ ಬೋರ್ಡ್‌ನಿಂದ ವೈಯರ್ ಕಿತ್ತುಕೊಂಡು ಕಾಲಿನ ಮೇಲೆ ನೀರು ಬಿದ್ದಿದೆ. ಯಾರಾದರೂ ಈ ರೀತಿ ಇಟ್ಟುಕೊಂಡು ಸ್ಟೀಮ್ ತೆಗೆದುಕೊಳ್ಳುತ್ತಾರಾ? ಟಿವಿ ಮುಂದೆ ಸೋಫಾ ಇರುವುದೇ ಅಪರಾಧ' ಎಂದು ಆನಂದ್ ವಿಡಿಯೋದಲ್ಲಿ ಮಾತನಾಡಿದ್ದಾರೆ. 

ನನ್ನಂಥ ಕೆಟ್ಟ ಎಂಪ್ಲಾಯಿ ಯಾರೂ ಇಲ್ಲ, ಕೈಗೆ 60 ಸಾವಿರ ಬರ್ತಿದ್ದಂತೆ ಕೆಲಸ ಬಿಡುವ ನಿರ್ಧಾರ ಮಾಡಿದೆ: ಸಪ್ತಮಿ ಗೌಡ

ಮಾಸ್ಟರ್ ಆನಂದ್ ಜೊತೆ ವಿಡಿಯೋದಲ್ಲಿ ಪುತ್ರ ಕೃಷ್ಣ ಚೈತನ್ಯಾ ಹಾಗೂ ಪುತ್ರಿ ವಂಶಿಕಾ ಕೂಡ ಇದ್ದಾರೆ. ವಿಡಿಯೋ ಆರಂಭದಲ್ಲಿ ಬನ್ನಿ ಬನ್ನಿ ಜನರೇ ಎಂದು ವಂಶಿ ಕಾಮಿಡಿ ಮಾಡಿದ್ದಾಳೆ. ನೋಡಿ ನಮ್ಮಮ ಮಲ್ಟಿ ಟಾಸ್ಕ್‌ ಮಾಡಲು ಹೋಗಿ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಪುತ್ರ ಹೇಳಿದರೆ. ನಮಗೆ ಅಮ್ಮ ಹೇಳುತ್ತಿದ್ದರು ಯಾವತ್ತಿದ್ದರೂ ಮಲ್ಟಿ ಟಾಸ್ಕ್‌ಮಾಡಬೇಕು ಎಂದು ಆದರೆ ನಮ್ಮ ಅಮ್ಮ ನೋಡಿ  ಅತಿ ಮಲ್ಟಿ ಟಾಸ್ಕ್‌ ಮಾಡಿದ್ದಾರೆ' ಎಂದು ವಂಶಿಕಾ ಕೂಡ ಕಾಲೆಳೆದಿದ್ದಾರೆ. ಈ ವಿಡಿಯೋ ಕೆಲವೇ ನಿಮಿಷಗಳಲ್ಲಿ ಸಖತ್ ವೈರಲ್ ಆಗಿದೆ. ಲಕ್ಷಾಂತರ ವ್ಯೂಸ್ ಮತ್ತು ಕಾಮೆಂಟ್ ಪಡೆದುಕೊಂಡಿದೆ. 'ಮೇಡಂ ದಯವಿಟ್ಟು ಆರೋಗ್ಯ ನೋಡಿಕೊಳ್ಳಿ ಪುಟ್ಟ ಮಕ್ಕಳು ಇದ್ದಾರೆ, ನಿಮ್ಮ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಅವರನ್ನು ನೋಡುವುದು ಮಿಸ್ ಮಾಡಿಕೊಳ್ಳುತ್ತೀವಿ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ನನಗೆ ಇಷ್ಟು ಹಣ ಕೊಡಿ ಅಂತ ಕೇಳುವ ಮಟ್ಟಕ್ಕೆ ನಾನು ಬೆಳೆದಿಲ್ಲ, ರಶ್ಮಿಕಾಗೆ ಅವರ ದಾರಿ ಗೊತ್ತು: ರಂಜನಿ ರಾಘವನ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮೇಕಿಂಗ್‌ನಿಂದ ಕತೆವರೆಗೆ.. ಟಾಕ್ಸಿಕ್’ನಿಂದ ‘ಕ್ರಿಮಿನಲ್’ವರೆಗೆ: 2026ರ ಬಹು ನಿರೀಕ್ಷಿತ ಸಿನಿಮಾಗಳು
ವರ್ಷಾಂತ್ಯಕ್ಕೆ ಭರ್ತಿಯಾದ ಚಿತ್ರಮಂದಿರಗಳು: ಸ್ಯಾಂಡಲ್‌ವುಡ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ