ನನ್ನ ವಿರೋಧಿಗಳಿಗೂ ನಾನು ಅಂದರೆ ಇಷ್ಟ: ಮಾರ್ಟಿನ್ ಸಕ್ಸಸ್ ಮೀಟ್‌ನಲ್ಲಿ ಧ್ರುವ ಸರ್ಜಾ ಹೇಳಿದ್ದಿಷ್ಟು..

By Govindaraj SFirst Published Oct 16, 2024, 12:11 PM IST
Highlights

ಸಿನಿಮಾ ಬಿಡುಗಡೆ ದಿನವೇ ‘ಮಾರ್ಟಿನ್‌’ ಬಗ್ಗೆ ಕೆಲವರು ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಕೇಳಲ್ಪಟ್ಟೆ. ಅವರು ಬೇರೆ ಹೀರೋಗಳ ಅಭಿಮಾನಿಗಳು ಅಥವಾ ಬೇರೆ ಯಾರೇ ಆಗಿರಬಹುದು, ನನ್ನ ದ್ವೇಷಿಸುತ್ತಿರುವ ಅವರಿಗೂ ನಾನು ಅಂದರೆ ತುಂಬಾ ಇಷ್ಟ ಇರಬಹುದು. 

ನಮ್ಮ ಚಿತ್ರವನ್ನು ನೋಡಿದ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ಸಿನಿಮಾ ಬಿಡುಗಡೆ ದಿನವೇ ‘ಮಾರ್ಟಿನ್‌’ ಬಗ್ಗೆ ಕೆಲವರು ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಕೇಳಲ್ಪಟ್ಟೆ. ಅವರು ಬೇರೆ ಹೀರೋಗಳ ಅಭಿಮಾನಿಗಳು ಅಥವಾ ಬೇರೆ ಯಾರೇ ಆಗಿರಬಹುದು, ನನ್ನ ದ್ವೇಷಿಸುತ್ತಿರುವ ಅವರಿಗೂ ನಾನು ಅಂದರೆ ತುಂಬಾ ಇಷ್ಟ ಇರಬಹುದು. 

ಹೀಗಾಗಿ ಸಮಯ ಹಾಗೂ ಹಣ ವೆಚ್ಚ ಮಾಡಿಕೊಂಡು ಬಂದು ನನ್ನ ಸಿನಿಮಾ ವಿರುದ್ಧ ಮಾತನಾಡುತ್ತಿದ್ದಾರೆ. ಟ್ರೋಲ್‌ ಮಾಡುತ್ತಿದ್ದಾರೆ. ಆದರೆ, ಸಿನಿಮಾ ಹೇಗಿದೆ ಎಂಬುದು ಜನರೇ ಹೇಳುತ್ತಿದ್ದಾರೆ. ಸುಳ್ಳು ಪ್ರಚಾರ ಮತ್ತು ಟ್ರೋಲ್‌ಗಳಿಗೆ ನಮ್ಮ ಸಿನಿಮಾ ಜಗ್ಗಲ್ಲ.  ಹೀಗೆ ಹೇಳಿದ್ದು ಧ್ರುವ ಸರ್ಜಾ. ಉದಯ್‌ ಕೆ ಮಹ್ತಾ ನಿರ್ಮಾಣದ, ಎಪಿ ಅರ್ಜುನ್ ನಿರ್ದೇಶನದ ‘ಮಾರ್ಟಿನ್‌’ ಸಿನಿಮಾದ ಸಕ್ಸಸ್‌ ಮೀಟ್‌ನಲ್ಲಿ ಅವರು ಮಾತನಾಡಿದರು.

Latest Videos

ದೇಶಾಭಿಮಾನ ಇರೋ ಗ್ಯಾಂಗ್‌ಸ್ಟರ್‌ ಕತೆ ಮಾರ್ಟಿನ್‌: ನಿರ್ದೇಶಕ ಎ.ಪಿ.ಅರ್ಜುನ್‌

ಎ ಪಿ ಅರ್ಜುನ್‌, ‘ಸಿನಿಮಾ ಕೆಲಸಗಳ ಒತ್ತಡದಿಂದ ನಾನು ಮತ್ತು ನಿರ್ಮಾಪಕರು ಒಟ್ಟಿಗೆ ಸಿನಿಮಾ ಪ್ರಚಾರದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ನಾವು ಏನೇ ಜಗಳಾಡಿದರೂ ಅದು ಸಿನಿಮಾಗಾಗಿ ಮಾತ್ರ’ ಎಂದರು. ನಿರ್ಮಾಪಕ ಉದಯ್ ಕೆ ಮೆಹ್ತಾ ಪುತ್ರ ಸೂರಜ್ ಮೆಹ್ತಾ, ‘ನಮ್ಮ ನಿರೀಕ್ಷೆಯಂತೆ ‘ಮಾರ್ಟಿನ್‌’ ಕಲೆಕ್ಷನ್‌ ಮಾಡುತ್ತಿದೆ. ಮುಂದಿನ ವಾರ ಗಳಿಕೆಯ ಕುರಿತು ಅಂಕಿ ಸಂಖ್ಯೆಗಳನ್ನು ಕೊಡುತ್ತೇನೆ’ ಎಂದರು. ನಟಿ ವೈಭವಿ ಶಾಂಡಿಲ್ಯ, ಛಾಯಾಗ್ರಾಹಕ ಸತ್ಯ ಹೆಗಡೆ ಇದ್ದರು.

ಹೇಗಿದೆ ಸಿನಿಮಾ: ಮಾರ್ಟಿನ್ ಟೈಟಲ್ ಕೇಳಿ ಇಲ್ಲಿ ನಾಯಕನ ಹೆಸರು ಮಾರ್ಟಿನ್ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಇಲ್ಲಿ ಕಥಾನಾಯಕ ಕಸ್ಟಮ್ಸ್ ಆಫೀಸರ್ ಅರ್ಜುನ್. ಥೇಟ್ ಇವನಂತೆ ಇರೋ  ಡೆಡ್ಲಿ ಗ್ಯಾಂಗ್​ಸ್ಟರ್ ಮಾರ್ಟಿನ್.  ಈ ಪ್ರಾಮಾಣಿಕ ಆಫೀಸರ್ ಅರ್ಜುನ್ ಮತ್ತು ಗ್ಯಾಂಗ್​ಸ್ಟರ್ ಮಾರ್ಟಿನ್ ನಡುವೆ, ಒಂದು ದೊಡ್ಡ ಮೊತ್ತದ ಸರಕಿನ ವಿಚಾರಕ್ಕೆ ವಾರ್ ಸ್ಟಾರ್ಟ್ ಆಗುತ್ತೆ. ಮಾರ್ಟಿನ್ - ಅರ್ಜುನ್ ನಡುವಿನ ಈ ಸಮರ ದೇಶ ವಿದೇಶಗಳವರೆಗೂ ಸಾಗುತ್ತೆ. 

ಈ ಇಬ್ಬರ ಕದನದಲ್ಲಿ ನೂರಾರು ಕಾರು ಉಡೀಸ್ ಆಗುತ್ವೆ,  ಗನ್​ಗಳು ಅಬ್ಬರಿಸುತ್ವೆ, ಬಾಂಬುಗಳು ಸಿಡಿಯುತ್ವೆ. ಕೊನೆಗೂ ಈ ಕದನದಲ್ಲಿ ಗೆಲ್ಲೋರ್ಯಾರು ಅನ್ನೋದೇ ಸಿನಿಮಾದ ಕಹಾನಿ. ಅರ್ಜುನ್ ಮತ್ತು ಮಾರ್ಟಿನ್ ದ್ವಿಪಾತ್ರಗಳಲ್ಲಿ ಧ್ರುವ ಸರ್ಜಾ ಕಮಾಲ್ ಮಾಡಿದ್ದಾರೆ. ವಿಭಿನ್ನ ಮ್ಯಾನರಿಸಂ, ಗೆಟಪ್ , ಡೈಲಾಗ್ ಡೆಲಿವರಿ ಮೂಲಕ ಫ್ಯಾನ್ಸ್​ಗೆ ಡಬಲ್ ಧಮಾಕಾ ಕೊಟ್ಟಿದ್ದಾರೆ.  ಆಕ್ಷನ್ ದೃಶ್ಯಗಳಲ್ಲಂತೂ ಧ್ರುವ ಅಕ್ಷರಶಃ ಬೆಂಕಿಯುಂಡೆ. ಇನ್ನೂ ವೈಭವಿ ಶಾಂಡಿಲ್ಯ ತೆರೆ ಮೇಲೆ ಮುದ್ದಾಗಿ ಕಾಣ್ತಾರೆ.. ಅನ್ವೇಷಿ ಜೈನ್ ಗ್ಲಾಮರ್​ನಿಂದ ಮತ್ತೇರಿಸ್ತಾರೆ. 

ಮಾವನ ದೇಶ ಭಕ್ತಿ, ಅಳಿಯನ ಘರ್ಜನೆ: ಮೆಡಿಸನ್ ಮಾಫಿಯಾ, ಅಂತಾರಾಷ್ಟ್ರೀಯ ಕ್ರೈಮ್!

ಅಚ್ಯುತ್ ಕುಮಾರ್, ಚಿಕ್ಕಣ್ಣ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ನವಾಬ್ ಶಾ, ರೋಹಿತ್ ಪಾಠಕ್ ಚಿತ್ರಕ್ಕೆ ತೂಕ ತಂದುಕೊಟ್ಟಿದ್ದಾರೆ. ಮಾರ್ಟಿನ್ ಸಿನಿಮಾದ ಮೇಕಿಂಗ್ ಯಾವ ಹಾಲಿವುಡ್ ಸಿನಿಮಾಗೂ ಕಮ್ಕಿಯಿಲ್ಲ. ಸತ್ಯ ಹೆಗಡೆ ಸಿನಿಮಾಟೋಗ್ರಫಿ ಸಿನಿಮಾದ ಬಿಗ್ ಹೈಲೈಟ್. ಚೇಸಿಂಗ್ & ಌಕ್ಷನ್ ಸಿಕ್ವೆನ್ಸ್ ಗಳಂತೂ ಪ್ರೇಕ್ಷಕರನ್ನ ಸೀಟಿನ ತುದಿಗೆ ತಂದು ಕೂರಿಸುತ್ವೆ. ರಾಮ್ ಲಕ್ಷಣ್ ಮತ್ತು ರವಿವರ್ಮ ಕಂಪೋಸ್ ಮಾಡಿರೋ ಸ್ಟಂಟ್ಸ್ ಸಿನಿಮಾದ ಬಿಗ್ಗೆಸ್ಟ್ ಪ್ಲಸ್ ಪಾಯಿಂಟ್ಸ್. 

click me!