ಡಾ ರಾಜ್‌ ಜೊತೆ ವಿಷ್ಣು ಹೋಲಿಕೆ ಸರಿಯಲ್ಲ; ಆ ದೊಡ್ಡ ತಪ್ಪು ಯಾರಿಂದ ಯಾಕೆ ನಡೆದಿದ್ದು?

By Shriram Bhat  |  First Published Nov 30, 2024, 2:42 PM IST

ಯಾಕೆ ಡಾ ರಾಜ್‌ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಮಧ್ಯೆ ಹೋಲಿಕೆ ಸರಿಯಲ್ಲ? ಈ ಬಗ್ಗೆ ಹೇಳುತ್ತ ಹೋದರೆ ನೂರಾರು ಸಂಗತಿಗಳಿವೆ. ಆದರೆ, ಮುಖ್ಯವಾದ ಕೆಲವೇ ಅಂಶಗಳನ್ನು ಹೇಳಿದರೂ ಸಾಕು, ಎಂಥವರಿಗಾದರೂ ಅರ್ಥವಾಗುತ್ತದೆ ಅವರಿಬ್ಬರು ಮಧ್ಯೆ ..


ಡಾ ರಾಜ್‌ಕುಮಾರ್ (Dr Rajkumar) ಹಾಗೂ ವಿಷ್ಣುವರ್ಧನ್ (Dr Vishnuvardhan) ಅವರಿಬ್ಬರೂ ಕನ್ನಡದ ಮೇರು ನಟರು ಎಂಬುದು ಎಲ್ಲರಿಗೂ ಗೊತ್ತು. ಅದೆಷ್ಟೋ ವರ್ಷಗಳಿಂದ ಅವರಿಬ್ಬರನ್ನು ಹೋಲಿಸಿಕೊಂಡೇ ಬಂದಿದ್ದಾರೆ. 'ನಾನಾ ನೀನಾ' ಎಂಬಂತೆ ಡಾ ರಾಜ್‌ಕುಮಾರ್ ಗ್ರೇಟಾ ಅಥವಾ ವಿಷ್ಣುವರ್ಧನ್ ಗ್ರೇಟಾ ಎಂದು ಹಲವರು ಈಗಲೂ ಚರ್ಚೆ ಮಾಡುತ್ತಲೇ ಇದ್ದಾರೆ. ಅವರಿಬ್ಬರ ಅಭಿಮಾನಿಗಳಿಗಂತೂ ಈ ಒಂದು ಚರ್ಚೆಯನ್ನು ಅಂದಿನಿಂದ ಇಂದಿನವರೆಗೂ ನಡೆಸುತ್ತಲೇ ಬಂದಿದ್ದಾರೆ. ಆದರೆ, ಸತ್ಯ ಸಂಗತಿ ಏನೆಂದರೆ, ಅವರಿಬ್ಬರ ಮಧ್ಯೆ ಹೋಲಿಕೆ ಅಸಾಧ್ಯ. ಹಾಗೂ, ಕಂಪೇರ್ ಮಾಡಲೇಬಾರದು! 

ಯಾಕೆ ಡಾ ರಾಜ್‌ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಮಧ್ಯೆ ಹೋಲಿಕೆ ಸರಿಯಲ್ಲ? ಈ ಬಗ್ಗೆ ಹೇಳುತ್ತ ಹೋದರೆ ನೂರಾರು ಸಂಗತಿಗಳಿವೆ. ಆದರೆ, ಮುಖ್ಯವಾದ ಕೆಲವೇ ಅಂಶಗಳನ್ನು ಹೇಳಿದರೂ ಸಾಕು, ಎಂಥವರಿಗಾದರೂ ಅರ್ಥವಾಗುತ್ತದೆ ಅವರಿಬ್ಬರು ಮಧ್ಯೆ ಹೋಲಿಕೆ ಅಸಾಧ್ಯ ಎಂದು. ಅವರಿಬ್ಬರನ್ನೂ ಕಂಪೇರ್ ಮಾಡುವುದು ಒಂಥರಾ ಅಪ್ಪ ಹಾಗೂ ಮಗನನ್ನು ಕಂಪೇರ್ ಮಾಡಿದಂತೆ ಆಗುತ್ತದೆ ಎನ್ನಬಹುದು. ಹಾಗಿದ್ದರೆ ಆ ಅಂಶಗಳು ಯಾವವು? ಇಲ್ಲಿದೆ ನೋಡಿ.. 

Tap to resize

Latest Videos

ಮೊಟ್ಟಮೊದಲ ಕಲರ್ ಸಿನಿಮಾ ಕೈತಪ್ಪಿದ ಬೇಸರಕ್ಕೆ ಡಾ ರಾಜ್‌ಕುಮಾರ್ ಮಾಡಿದ್ದೇನು?

ಮೊದಲನೆಯದಾಗಿ ಡಾ ರಾಜ್‌ಕುಮಾರ್ ಜನಿಸಿದ್ದು 24 ಏಪ್ರಿಲ್ 1929. ಆದರೆ ವಿಷ್ಣುವರ್ಧನ್ ಜನಿಸಿದ್ದು 18 ಸೆಪ್ಟೆಂಬರ್ 1950. ಅವರಿಬ್ಬರ ಮಧ್ಯೆ ಬರೋಬ್ಬರಿ 21 ವರ್ಷಗಳ ಅಂತರವಿದೆ. ಇದು ನಾಲ್ಕೈದು ಜನರೇ‍ಶನ್ ಗ್ಯಾಪ್. ವಿಷ್ಣುವರ್ಧನ್ ಅವರು ನಾಗರಹಾವು (1972) ಸಿನಿಮಾಗಿಂತ ಮೊದಲು 1972ರಲ್ಲಿ 'ವಂಶವೃಕ್ಷ'  ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ಅದೇ ವರ್ಷ ವಿಷ್ಣುವರ್ಧನ್ ನಟನೆಯ ನಾಗರಹಾವು ಬಿಡುಗಡೆಗೊಂಡು ಅಭೂತಪೂರ್ವ ಯಶಸ್ಸು ಸಾಧಿಸಿತ್ತು. 

ನಾಗರಹಾವು ಮೂಲಕ ನಟ ವಿಷ್ಣುವರ್ಧನ್ ಕನ್ನಡ ಚಿತ್ರಜಗತ್ತಿಗೆ ಬರುವ ಹೊತ್ತಿಗೆ ಡಾ ರಾಜ್‌ಕುಮಾರ್ ಅವರು ಬರೋಬ್ಬರಿ 150 ಸಿನಿಮಾಗಳನ್ನು ಮುಗಿಸಿದ್ದರು. ತಮ್ಮ ಎರಡನೇ ಸಿನಿಮಾ ನಾಗರಹಾವು ಮುಗಿಸಿದ್ದ ವಿಷ್ಣುವರ್ಧನ್‌ ವಾರಿಗೂ 150 ಸಿನಿಮಾ ಮುಗಿಸಿದ್ದ ಡಾ ರಾಜ್‌ ಅವರಿಗೂ ಹೋಲಿಕೆ ಮಾಡುವ ಮೂಲಕ ಕನ್ನಡ ಸಿನಿಪ್ರೇಕ್ಷಕರು ಅಂದೇ ದೊಡ್ಡ ತಪ್ಪು ಮಾಡಿಬಿಟ್ಟಿದ್ರಾ? ಡಾ ರಾಜ್‌ಕುಮಾರ್ ಕಾಲದಲ್ಲಿ ನಟನಾವೃತ್ತಿಯಲ್ಲಿ ಇದ್ದ ಕಲ್ಯಾಣ್ ಕುಮಾರ್, ಉದಯಕುಮಾರ್ ಅವರ ಜೊತೆ ಹೋಲಿಕೆ ಓಕೆ, ಆದರೆ ವಿಷ್ಣುವರ್ಧನ್ ಜೊತೆ ಯಾಕೆ?

ಕೆಜಿಎಫ್ ಚಿತ್ರಕ್ಕೆ ಯಶ್‌ ಹೀರೋ ಆಗಲು ಯಾರು ಕಾರಣ ಎಂಬ ಗುಟ್ಟು ರಟ್ಟಾಯ್ತು!

ಅಂದು ಹಾಗೂ ಇಂದು ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಮಧ್ಯೆ ಹೋಲಿಕೆ ಮಾಡುವವರು ಗಮನಿಸದೇ ಇರುವ ಮತ್ತೊಂದು ಸಂಗತಿ ಎಂದರೆ, ಇದು.. ಡಾ ರಾಜ್‌ಕುಮಾರ್ ಅವರು ಸಕ್ರಿಯರಾಗಿದ್ದ ಕಾಲದಲ್ಲಿ ಸಮಾಜದಲ್ಲಿ ನಾಟಕಗಳ ಪಾತ್ರ ಹೆಚ್ಚಿತ್ತು. ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳ ಬಗ್ಗೆ ಜನರಿಗೆ ಹೆಚ್ಚು ಒಲವಿತ್ತು. ಆದರೆ, ವಿಷ್ಣುವರ್ಧನ್ ಬಂದ ಕಾಲಘಟ್ಟದಲ್ಲಿ ಸಾಮಾಜಿಕ, ಸಾಂಸಾರಿಕ ಹಾಗೂ ಲವ್‌ ಸ್ಟೋರಿಗಳತ್ತ ಜನರ ಚಿತ್ತ ಹೊರಳಿತ್ತು. ಹೀಗಾಗಿ ಸಹಜವಾಗಿಯೇ ಅವರಿಬ್ಬರೂ ಬೇರೆಬೇರೆ ಜೋನರ್ ಚಿತ್ರಗಳಲ್ಲೇ ನಟಿಸಿದ್ದಾರೆ. ಇಲ್ಲೂ ಅವರಿಬ್ಬರ ಹೋಲಿಕೆ ಅಸಾಧ್ಯ. 

ಒಟ್ಟಿನಲ್ಲಿ, ಬೇರೆಬೇರೆ ಜನರೇಶನ್‌ ನಾಯಕರ ಮಧ್ಯೆ ಹೋಲಿಕೆ ಮಾಡಿ ಅದನ್ನೊಂದು ವಾದ-ವಿವಾದ ಮಾಡಿಕೊಂಡಿದ್ದು ಸಿನಿಪ್ರೇಕ್ಷಕರ ಹಾಗೂ ಅಭಿಮಾನಿಗಳ ತಪ್ಪು ಎನ್ನಬಹುದು. 'ಅಪ್ಪನ ಕಾಲ ಅಪ್ಪನದು, ಮಗನ ಕಾಲ ಮಗನದು' ಎಂಬ ಸಿಂಪಲ್ ಫಾರ್ಮುಲಾ ಅಲ್ಲಿ ಬಳಕೆ ಆಗಬೇಕಿತ್ತು. ಈಗ ಶಿವಣ್ಣ ಹಾಗೂ ರಾಜಣ್ಣ ಹೋಲಿಕೆ ಅಸಾಧ್ಯ ಅಲ್ಲವೇ? ಹಾಗೇ ವಿಷ್ಣು ಹಾಗೂ ರಾಜ್ ಅವರಿಬ್ಬರ ಹೋಲಿಕೆ ಕೂಡ ಅಸಾಧ್ಯ. ಇಷ್ಟು ಅರ್ಥ ಮಾಡಿಕೊಂಡರೆ ಯಾವುದೇ ವಾದವೂ ಇಲ್ಲ, ವಿವಾದವೂ ಇಲ್ಲ. ಏನಂತೀರಾ?

ಡಾ ರಾಜ್ ಅಂತಿಮ ದರ್ಶನಕ್ಕೆ ಬಂದ ಅಂಬಿ-ವಿಷ್ಣು ಹಿಂಬಾಗಿಲಿನಿಂದ ಓಡಿದ್ದು ಯಾಕೆ?

click me!