ಮೊಟ್ಟಮೊದಲ ಕಲರ್ ಸಿನಿಮಾ ಕೈತಪ್ಪಿದ ಬೇಸರಕ್ಕೆ ಡಾ ರಾಜ್‌ಕುಮಾರ್ ಮಾಡಿದ್ದೇನು?

By Shriram Bhat  |  First Published Nov 30, 2024, 1:49 PM IST

ಡಾ ರಾಜ್‌ಕುಮಾರ್ ಅವರು ಅನುಭವಿಸಿದ ಅವಮಾನ ಎಂಥದ್ದು? ಅದಕ್ಕೆ ಅವರು ತೋರಿಸಿದ ಪ್ರತಿಕ್ರಿಯೆ ಏನು? ಅಣ್ಣಾವ್ರಿಗೆ ಮೇಕಪ್ ಹಾಕಿಸಿ ಬಳಿಕ ಯಾರನ್ನು ಆ ಚಿತ್ರದ ಹಿರೋ ಮಾಡಿಕೊಳ್ಳಲಾಯಿತು? ಯಾಕೆ ಅಂದು ಅದು ಹಾಗಾಯ್ತು?..


'ಯಾವ ಹೂವು ಯಾರ ಮುಡಿಗೋ' ಎಂಬಂತೆ ಯಾವ ಸಿನಿಮಾ ಯಾರಿಗೆ ಹಣೆಯಲ್ಲಿ ಬರೆದಿದೆಯೋ ಅವರಿಗೇ ಆಗುತ್ತದೆ ಎಂಬ ಮಾತು ಹಲವು ಸಾರಿ ನಿಜ ಎನ್ನಿಸಿಬಿಡುತ್ತದೆ. ಅದು ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರ ಜೀವನದಲ್ಲಿ ಕೂಡ ನಡೆದಿದೆ. ಡಾ ರಾಜ್‌ಕುಮಾರ್ ಅವರು 60 ರಿಂದ 90ರ ದಶಕದವರೆಗೂ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದವರು. ಅಂದು ನಾಟಕರಂಗದಿಂದ ಸಿನಿಮಾರಂಗಕ್ಕೆ ಬಂದ ರಾಜ್‌ಕುಮಾರ್ ಅವರು ಬಳಿಕ ಡಾ ರಾಜ್‌ಕುಮಾರ್ ಎಂದೇ ಪ್ರಸಿದ್ಧರಾದರು. ಆದರೆ, ಶುರುವಿನಲ್ಲಿ ಹಲವರಂತೆ ಅಣ್ಣಾವ್ರು ಕೂಡ ಅವಮಾನ ಅನುಭವಿಸಿದ್ದರು. 

ಡಾ ರಾಜ್‌ಕುಮಾರ್ ಅವರು ಅನುಭವಿಸಿದ ಅವಮಾನ ಎಂಥದ್ದು? ಅದಕ್ಕೆ ಅವರು ತೋರಿಸಿದ ಪ್ರತಿಕ್ರಿಯೆ ಏನು? ಅಣ್ಣಾವ್ರಿಗೆ ಮೇಕಪ್ ಹಾಕಿಸಿ ಬಳಿಕ ಯಾರನ್ನು ಆ ಚಿತ್ರದ ಹಿರೋ ಮಾಡಿಕೊಳ್ಳಲಾಯಿತು? ಯಾಕೆ ಅಂದು ಅದು ಹಾಗಾಯ್ತು? ರಾಜ್‌ಕುಮಾರ್ ಅವರು ಆ ಚಿತ್ರ ಕೈ ತಪ್ಪಿದ್ದಕ್ಕೆ ಯಾಕೆ ಅಷ್ಟೊಂದು ಬೇಸರ ಮಾಡಿಕೊಂಡರು? ಈ ಎಲ್ಲಾ ಸಂಗತಿಗಳನ್ನು ಈ ಸ್ಟೋರಿ ನೋಡಿ ತಿಳಿದುಕೊಳ್ಳಿ.. 

Tap to resize

Latest Videos

ಕೆಜಿಎಫ್ ಚಿತ್ರಕ್ಕೆ ಯಶ್‌ ಹೀರೋ ಆಗಲು ಯಾರು ಕಾರಣ ಎಂಬ ಗುಟ್ಟು ರಟ್ಟಾಯ್ತು!

ಅಮರಶಿಲ್ಪಿ ಜಕಣಾಚಾರಿ ಎಂಬ ಸಿನಿಮಾ 1964ರಲ್ಲಿ ತೆರೆಗೆ ಬಂದಿತ್ತು. ಬಿಎಸ್‌ ರಂಗ ಅವರು ನಿರ್ದೇಶನ ಮಾಡಿದ್ದ ಈ ಸಿನಿಮಾ ಕನ್ನಡದ ಮೊಟ್ಟಮೊದಲ ವರ್ಣಚಿತ್ರ (ಕಲರ್ ಸಿನಿಮಾ) ಆಗಿದೆ. ಈ ಸಿನಿಮಾಗೆ ಮೊದಲು ನಾಯಕರಾಗಿ ಆಯ್ಕೆಯಾಗಿದ್ದು ಡಾ ರಾಜ್‌ಕುಮಾರ್. ಅಣ್ಣಾವ್ರು ಸ್ರ್ಕೀನ್ ಟೆಸ್ಟ್‌ಗೆ ಶೂಟಿಂಗ್ ಸ್ಪಾಟ್‌ಗೆ ಕೂಡ ಬಂದಿದ್ರಂತೆ. ಮೇಕಪ್ ಹಾಕ್ಕೊಂಡು ನಿರ್ದೇಶಕ ಬಿಎಸ್‌ ರಂಗ ಅವರಿಗಾಗಿ ಸುಮಾರು ಹೊತ್ತು ಕಾದಿದ್ದರಂತೆ. 

ತುಂಬಾ ಹೊತ್ತು ಕಳೆದರು ನಿರ್ದೇಶಕರು ಅವರ ಬಳಿ ಬರದೇ ಇರೋದನ್ನ ಗಮನಿಸಿದ ಡಾ ರಾಜ್‌ಕುಮಾರ್ ಅವರು ಮೇಕಪ್‌ ಮ್ಯಾನ್‌ಗೆ ಹೇಳಿ ಕಳುಹಿಸಿದರಂತೆ. ಆ ಮೇಕಪ್ ಮ್ಯಾನ್ ವಿಚಾರಿಸಿಕೊಂಡು ಬಂದು ಅಣ್ಣಾವ್ರಿಗೆ ಹೇಳಿದ್ರಂತೆ, 'ಈ ಸಿನಿಮಾದಲ್ಲಿ ನಿಮ್ಮ ಬದಲಿಗೆ ಕಲ್ಯಾಣ್ ಕುಮಾರ್ (Kalyan Kumar) ಅವರು ನಟಿಸ್ತಿದಾರಂತೆ. ನೀವು ಹೋಗಬಹುದು' ಅಂತ ಹೇಳಿ ಕಳುಹಿಸಿದ್ದರಂತೆ. ಆ ಮಾತಿಗೆ ಬೇಸರಗೊಂಡ ರಾಜ್ ಅವರು ಮೇಕಪ್ ಕೂಡ ತೆಗೆಯದೇ ಹಾಗೇ ನಡೆದುಕೊಂಡೇ ಮನೆಗೆ ಬಂದುಬಿಟ್ಟರಂತೆ. 

ಡಾ ರಾಜ್ ಅಂತಿಮ ದರ್ಶನಕ್ಕೆ ಬಂದ ಅಂಬಿ-ವಿಷ್ಣು ಹಿಂಬಾಗಿಲಿನಿಂದ ಓಡಿದ್ದು ಯಾಕೆ?

ಇಂಥ ಘಟನೆ ಡಾ ರಾಜ್‌ಕುಮಾರ್ ಅವರ ವೃತ್ತಿ ಜೀವನದಲ್ಲಿ ಮಾತ್ರವಲ್ಲ,, ಹೆಚ್ಚೂ ಕಡಿಮೆ ಎಲ್ಲರ ಜೀವನದಲ್ಲಿ ನಡೆದಿರುತ್ತವೆ. ಆದರೆ ಅಂದು ಈ ಬಗ್ಗೆ ಅಷ್ಟೊಂದು ಪ್ರಚಾರ ಆಗುತ್ತಿರಲಿಲ್ಲ. ಇಂದು ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾ ಪ್ರಭಾವದಿಂದ ಸಣ್ಣ ಘಟನೆ ಕೂಡ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದು ಇಡೀ ಜಗತ್ತಿಗೇ ಹರಡುತ್ತದೆ. ಡಾ ರಾಜ್‌ಕುಮಾರ್ ಕೂಡ ಅಂದು ಅವಮಾನ ಎದುರಿಸಿದ್ದರು, ಮುಂದೆ ಮೇರು ನಟರಾಗಿ ಬೆಳೆದರು. ವಿಷ್ಣುವರ್ಧನ್ ಸೇರಿದಂತೆ ಇಂದಿನವರೆಗೂ ಹಲವರು ನಟರಿಗೆ ಇಂಥ ಅನುಭವ ಆಗಿಯೇ ಇರುತ್ತದೆ. 

click me!