ಕೆಜಿಎಫ್ ಚಿತ್ರಕ್ಕೆ ಯಶ್‌ ಹೀರೋ ಆಗಲು ಯಾರು ಕಾರಣ ಎಂಬ ಗುಟ್ಟು ರಟ್ಟಾಯ್ತು!

By Shriram Bhat  |  First Published Nov 29, 2024, 7:11 PM IST

ಅಂದು, ಕೆಜಿಎಫ್ ಸಿನಿಮಾ ಮೂಲಕ ನಟ ಯಶ್ ಅವರನ್ನು ಜಗತ್ತೇ ಅಚ್ಚರಿಯಿಂದ ನೋಡುತ್ತಿರುವಾಗ ಶ್ರೀಮುರಳಿಗೆ ಯಾಕೆ ಈ ಅವಕಾಶ ಸಿಗಲಿಲ್ಲ ಅಂತ ಹಲವರು ಚರ್ಚೆ ಮಾಡುತ್ತಿದ್ದರು. ಅದಕ್ಕೆ ಅಂದು ಅವರಿಗೆ ಉತ್ತರ ಸಿಕ್ಕಿರಲಿಕ್ಕಿಲ್ಲ. ಆದರೆ, ಇಂದು  ಅದಕ್ಕೆ ಉತ್ತರ ಇಲ್ಲಿದೆ.. 


ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ಅವರು ಪ್ರಶಾಂತ್‌ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್' ಸರಣಿ ಚಿತ್ರಗಳಲ್ಲಿ (KGF) ನಟಿಸಿ ಜಗದ್ವಿಖ್ಯಾತಿ ಪಡೆದಿರುವುದು ಗೊತ್ತೇ ಇದೆ. ಅದಕ್ಕೂ ಮೊದಲು ಕನ್ನಡದ ನಟ ಎಂಬ ಐಡೆಂಟಿಟಿ ಹೊಂದಿದ್ದ ನಟ ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದು ಗೊತ್ತೇ ಇದೆ. ಕೆಜಿಎಫ್ ಸಿನಿಮಾ ಬಳಿಕ ನಟ ಯಶ್ ಅವರ ಚಾರ್ಮ್‌ ಸಂಪೂರ್ಣವಾಗಿ ಬದಲಾಗಿಹೋಯ್ತು. ಅಷ್ಟೇ ಅಲ್ಲ, ಕಮ್ಮಿ ಬಜೆಟ್ ಚಿತ್ರಗಳಲ್ಲಿ ಯಶ್ ನಟನೆ ನಿಂತೇ ಹೋಯ್ತು!

ಕೆಜಿಎಫ್ ಚಿತ್ರ ಸೂಪರ್ ಹಿಟ್ ನಟ ಯಶ್ ಅವರು ಪ್ರಪಂಚಕ್ಕೇ ಫೇಮಸ್‌ ಆದಾಗ, ಹಲವರು ಒಂದು ಮಾತನ್ನು ಹೇಳಿದ್ದುಂಟು. 'ಪ್ರಶಾಂತ್ ನೀಲ್ ಅವರು ತಮ್ಮ ಬಾವ ಮೈದುನ ಶ್ರೀ ಮುರಳಿ ಬದಲು ಯಶ್ ಅವರನ್ನು ಯಾಕೆ ತಮ್ಮ ಚಿತ್ರಕ್ಕೆ ಹೀರೋ ಆಗಿ ಮಾಡಿಕೊಂಡ್ರು? ಅದಕ್ಕೂ ಮೊದಲು ಬಂದಿದ್ದ 'ಉಗ್ರಂ' ಚಿತ್ರದಲ್ಲಿ ಶ್ರೀಮರುಳಿ ಹಾಗೂ ಪ್ರಶಾಂತ್‌ ನೀಲ್ ಜೋಡಿಯೇ ಮೋಡಿ ಮಾಡಿತ್ತು. ಆದರೆ, ಕೆಜಿಎಫ್ ಯಶ್ ಪಾಲಾಗಿದ್ದು ಹೇಗೆ?

Tap to resize

Latest Videos

ಅಪ್ಪು ಫ್ಯಾನ್ಸ್‌ಗೆ ಶಿವಣ್ಣ ಖಡಕ್ ಸಂದೇಶ; ಇವರೆಗೂ ಯಾರೂ ಹೀಗೆ ಮಾಡಿರಲಿಲ್ಲ ಯಾಕೆ?

ಅಂದು, ಕೆಜಿಎಫ್ ಸಿನಿಮಾ ಮೂಲಕ ನಟ ಯಶ್ ಅವರನ್ನು ಜಗತ್ತೇ ಅಚ್ಚರಿಯಿಂದ ನೋಡುತ್ತಿರುವಾಗ ಶ್ರೀಮುರಳಿಗೆ ಯಾಕೆ ಈ ಅವಕಾಶ ಸಿಗಲಿಲ್ಲ ಅಂತ ಹಲವರು ಚರ್ಚೆ ಮಾಡುತ್ತಿದ್ದರು. ಅದಕ್ಕೆ ಅಂದು ಅವರಿಗೆ ಉತ್ತರ ಸಿಕ್ಕಿರಲಿಕ್ಕಿಲ್ಲ. ಆದರೆ, ಇಂದು  ಅದಕ್ಕೆ ಉತ್ತರ ಇಲ್ಲಿದೆ.. ಈ ಬಗ್ಗೆ ಸ್ವತಃ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಉತ್ತರ ನೀಡಿದ್ದಾರೆ. ಹಲವರ ಕುತೂಹಲಕ್ಕೆ, ಕಾಡುತ್ತಿದ್ದ ಪ್ರಶ್ನೆಗೆ ಈ ಮೂಲಕ ಉತ್ತರ ಸಿಗುತ್ತಿದೆ, ನೋಡಿ.. 

ಸಂದರ್ಶನವೊಂದರಲ್ಲಿ ಉಗ್ರಂ, ಕೆಜಿಎಫ್, ಹಾಗೂ ಸಲಾರ್ ಮಾಂತ್ರಿಕ ನಿರ್ದೇಶಕ ಪ್ರಶಾಂತ್ ನೀಲ್ ಅವರು 'ಕೆಜಿಎಫ್ ಮೊದಲು ನಟ ಯಶ್ ಅವರ ಅಭಿನಯದ 'ಗೂಗ್ಲಿ' ಸಿನಿಮಾ ತೆರೆಗೆ ಬಂದಿತ್ತು.ಆ ಚಿತ್ರವನ್ನು ನೋಡಿದಾಗ ನಾನು ಯಶ್ ಅವರಿಗೆ ಫ್ಯಾನ್ ಆಗಿಬಿಟ್ಟೆ. ಅವರ ಪ್ರತಿಭೆ ಜೊತೆಗೆ, ಅವರು ಹುಡುಗಾಟದ ಹುಡಗನಾಗಿ ಹಾಗೂ ರಾ ಲುಕ್ ಎರಡೂ ರೀತಿಯ ಪಾತ್ರಕ್ಕೆ ಹೊಂದಿಕೆ ಆಗುತ್ತಾರೆ ಎಂಬುದನ್ನು ನಾನು ಗಮನಿಸಿದ್ದೆ. ಬಳಿಕ ಕೆಜಿಎಫ್ ಸಿನಿಮಾ ಕಥೆ-ಚಿತ್ರಕಥೆ ಬರೆಯುವಾಗ ಯಶ್ ಅವರೇ ನನ್ನಮನಸ್ಸಿಗೆ ಬರುತ್ತಿದ್ದರು. 

ಡಾ ರಾಜ್ ಅಂತಿಮ ದರ್ಶನಕ್ಕೆ ಬಂದ ಅಂಬಿ-ವಿಷ್ಣು ಹಿಂಬಾಗಿಲಿನಿಂದ ಓಡಿದ್ದು ಯಾಕೆ?

ನಾನು ನಿರ್ಮಾಪಕರ ಬಳಿ ಕಥೆ ಹೇಳಲು ಹೋದಾಗ, ಅವರು ಈ ಸಿನಿಮಾಗೆ ಹೀರೋ ಯಾರನ್ನು ಮಾಡಬೇಕೆಂದು ಅಂದುಕೊಂಡಿದ್ದೀರ ಎಂದು ಕೇಳೀದಾಗ ನಾನು ಸ್ವಲ್ಪವೂ ಯೋಚಿಸದೇ 'ಯಶ್' ಎಂದಿದ್ದೆ. ಕಾರಣ, ನನ್ನ ಸಿನಿಮಾದ 'ರಾಕಿ' ಪಾತ್ರಕ್ಕೆ ಯಶ್‌ಗೆ ಇದ್ದಂತಹ ಆ ಒಂದು ರಾ ಲುಕ್ ಹಾಗೂ ಅಟಿಟ್ಯೂಡ್ ಬೇಕಿತ್ತು. ನನ್ನ ಒನ್ ಅಂಡ್ ಓನ್ಲಿ ಆಯ್ಕೆ ಯಶ್ ಮಾತ್ರವೇ ಆಗಿತ್ತು. ಬಳಿಕ, ನಿರ್ಮಾಪಕರು ನನ್ನ ಆಯ್ಕೆಯನ್ನು ಒಪ್ಪಿ ಮುಂದೆ ನಡೆದಿದ್ದೆಲ್ಲಾ ಈಗ ಇತಿಹಾಸ' ಎಂದಿದ್ದಾರೆ ಪ್ರಶಾಂತ್ ನೀಲ್. 

click me!