ನಟಿ ನಿಶ್ವಿಕಾ ವಿಡಿಯೋಶೂಟ್ ಮಾಡಿಸಿಕೊಂಡಿದ್ದು, ಇದಕ್ಕೆ ಶೀರ್ಷಿಕೆ ಕೊಡಿ ಎಂದು ಕೇಳಿದ್ದಾರೆ. ಅಂಥದ್ದೇನಿದೆ ಇದರಲ್ಲಿ?
ಸ್ಯಾಂಡಲ್‌ವುಡ್ ಬೆಡಗಿ ನಿಶ್ವಿಕಾ ನಾಯ್ಡು ಈಗ ಟಾಲಿವುಡ್ಗೆ ಹಾರುತ್ತಿದ್ದಾರೆ. ಟಾಲಿವುಡ್ನಲ್ಲಿಯೂ ತಮಗೆ ಯಶಸ್ಸು ಸಿಗಲಿ ಎಂದು ಇದಾಗಲೇ ಮನೆಯಲ್ಲಿ ಮಾಂಸ, ಮದ್ಯವನ್ನೆಲ್ಲ ಇಟ್ಟು ಜ್ಯೂತಿಷಿ ವೇಣು ಸ್ವಾಮಿ ಅವರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಹೈದರಾಬಾದ್ ಮನೆಯಲ್ಲಿ ಪೂಜೆ ಮಾಡಿರುವ ರೀತಿಯಲ್ಲಿಯೇ ನಿಶ್ವಿಕಾ ಕೂಡ ಪೂಜೆ ಮಾಡಿಸಿದ್ದಾರೆ. ಪೂಜೆಯ ಬಳಿಕ ರಶ್ಮಿಕಾ ನ್ಯಾಷನಲ್ ಕ್ರಷ್ ಆಗಿದ್ದಾರೆ ಎನ್ನುವ ನಂಬಿಕೆ ಸಿನಿ ಇಂಡಸ್ಟ್ರಿಯಲ್ಲಿ ಇದೆ. ಅಷ್ಟಕ್ಕೂ ನಿಶ್ವಿಕಾ ಸಿಕ್ಕಾಪಟ್ಟೆ ಫಿಟ್‌ನೆಸ್ ಫ್ರೀಕ್. ಇತ್ತೀಚೆಗೆ ತನ್ನ ಆಬ್ಸ್ ಮೂಲಕವೂ ಗಮನ ಸೆಳೆದಿದ್ದರು. ಇದೀಗ ಸೀರೆಯನ್ನುಟ್ಟು ಮದುಮಗಳಂತೆ ಕಂಗೊಳಿಸುತ್ತಿರುವ ನಿಶ್ವಿಕಾ, ಅದರ ವಿಡಿಯೋ ಶೇರ್ ಮಾಡಿಕೊಂಡು ಇದಕ್ಕೊಂದು ಚೆಂದದ ಶೀರ್ಷಿಕೆ ಕೊಡಿ ಎನ್ನುತ್ತಿದ್ದಾರೆ.
ಇದಾಗಲೇ ಹಲವರು ವಿವಿಧ ರೀತಿಯ ಶೀರ್ಷಿಕೆ ಕೊಟ್ಟಿದ್ದಾರೆ. ನೀವೇ ನಮ್ಮ ಕ್ರಷ್ ಎಂದಿದ್ದಾರೆ. ಹಾರ್ಟ್ ಇಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿ ಹೋಗಿದೆ. ಪದಗಳೇ ಸಾಲದು ವರ್ಣಿಸಲು ನಮ್ಮ ಕನ್ನಡತಿಯನ್ನು ಎಂದು ಒಬ್ಬರು ಬರೆದಿದ್ದರೆ, ನೀವೇ ನಮ್ಮ ಕ್ವೀನ್ ಎಂದು ಮತ್ತೆ ಕೆಲವು ಹೇಳುತ್ತಿದ್ದಾರೆ. ಅಷ್ಟಕ್ಕೂ ನಿಶ್ವಿಕಾ ಶೂಟಿಂಗ್‌ನಲ್ಲಿ ಬಿಟ್ಟರೆ ಜಿಮ್‌ನಲ್ಲಿ ಅತೀ ಹೆಚ್ಚು ಸಮಯ ಕಳೆಯುತ್ತಾರೆ. ಈಚೆಗಷ್ಟೇ ನಾಯಿ ಕಳೆದುಕೊಂಡು ಸುದ್ದಿಯಾಗಿದ್ದರು. ಇದಕ್ಕೆ ಕಾರಣ, ತಮ್ಮ ನೆಚ್ಚಿನ ನಾಯಿ ಮರಣಹೊಂದಿದ್ದರಿಂದ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಖಿನ್ನತೆಯಲ್ಲಿ ಇರುವುದಾಗಿ ಹೇಳಿದ್ದರು. ಇದರ ಜೊತೆಗೇನೇ ರಿಯಾಲಿಟಿ ಷೋನಲ್ಲಿ ತೀರ್ಪುಗಾರರಾಗಿಯೂ ನಿಶ್ವಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಫೋಟೋ ಶೇರ್ ಮಾಡಿಕೊಂಡು ನೀವೇ ಶೀರ್ಷಿಕೆ ಕೊಡಿ ಎಂದಿದ್ದಾರೆ.
ನಕಲಿ ರಮೇಶ್, ಪ್ರೇಮಾ, ನಿಶ್ವಿಕಾರನ್ನು ನೋಡಿ ಅಸಲಿ ನಟರು ಸುಸ್ತೋ ಸುಸ್ತು- ನಕ್ಕು ನಲಿದಾಡಿದ ನೆಟ್ಟಿಗರು
ಅಂದ ಹಾಗೆ ಕನ್ನಡ ಚಿತ್ರರಂಗದ ಈ ಪ್ರಮುಖ ನಟಿ 1996ರ ಮೇ 19ರಂದು ಬೆಂಗಳೂರಿನಲ್ಲಿ ಜನಿಸಿದರು. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಮುಗಿಸಿರುವ ಇವರು, ಮಾಡೆಲಿಂಗ್ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. 2018ರಲ್ಲಿ ತೆರೆಕಂಡ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿದ್ದ 'ಅಮ್ಮ ಐ ಲವ್ ಯೂ' ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದರು. ಅವರು ಇದಕ್ಕೂ ಮುನ್ನ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಇವರ ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಎರಡನೇ ಚಿತ್ರ 'ಅಮ್ಮಾ ಐ ಲವ್ ಯು' ಚಿತ್ರ ಬಿಡುಗಡೆಯಾಯಿತು. ನಂತರ ಪಡ್ಡೆಹುಲಿ, ಜೆಂಟಲ್‌ಮೆನ್, ಕಾಳಿದಾಸ ಕನ್ನಡ ಮೇಷ್ಟ್ರು, ಸಖತ್, ರಾಮಾರ್ಜುನ, ಗಾಳಿಪಟ 2, ದಿಲ್ ಪಸಂದ್, ಗುರು ಶಿಷ್ಯರು ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟನೆಯ ' ಕರಟಕ ದಮನಕ' ಸಿನಿಮಾ ಮೂಲಕ ಗಮನ ಸೆಳೆದಿದ್ದರು.
ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಇತ್ತೀಚೆಗೆ ತಮ್ಮ ಪ್ರೀತಿಯ ನಾಯಿ ಲಿಯೋದ ಅಗಲಿಕೆ ಬಗ್ಗೆ ಪೋಸ್ಟ್ ಮಾಡಿದ್ದರು. ಕಳೆದ ವರ್ಷವೇ ಅವರ ಮುದ್ದಿನ ನಾಯಿ ತೀರಿಕೊಂಡಿದೆ. ಆದರೆ ಇನ್ನೂ ಇವರಿಗೆ ಆ ಅಗಲಿಕೆ ನೋವಿಂದ ಹೊರಬರಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳೋದಿಲ್ಲ ಅಂದುಬಿಟ್ಟಿದ್ದಾರೆ. 'ಈ ವರ್ಷ ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳು ಆಗಿವೆ. ನನ್ನ ಪ್ರೀತಿಯ ಲಿಯೋ ಇತ್ತೀಚೆಗೆ ನಮ್ಮನ್ನೆಲ್ಲ ಬಿಟ್ಟು ಹೋದ. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಮನಸಿಗೆ ತುಂಬಾ ಆಳವಾದ ನೋವನ್ನುಂಟು ಮಾಡಿದೆ’ ಎಂದಿದ್ದಾರೆ ನಿಶ್ವಿಕಾ.
ರಿಯಲ್ ಮದ್ವೆಯಂತೆ ನಡೆಯುತ್ತಿದೆ ಸೀತಾ-ರಾಮ ಕಲ್ಯಾಣ: ಇಂಚಿಂಚು ಮಾಹಿತಿ ನೀಡಿದ ನಟಿ ವೈಷ್ಣವಿ