Latest Videos

ಮದ್ವೆಗೆ 60 ಲಕ್ಷ ಖರ್ಚು ಮಾಡಿಬಿಟ್ಟೆ, ದೊಡ್ಡ ಪಾಠ ಕಲಿಸಿತು ಲೈಫ್‌... ಚಂದನ್‌ ಶೆಟ್ಟಿ ಮನದಾಳದ ಮಾತು...

By Suchethana DFirst Published Jun 20, 2024, 5:19 PM IST
Highlights

ಜೀವನ ಕಲಿಸಿದ ಪಾಠದ ಬಗ್ಗೆ ನಟಿ ನಿವೇದಿತಾ ಗೌಡ ಮಾಜಿ ಪತಿ, ಗಾಯಕ ಚಂದನ್‌ ಶೆಟ್ಟಿ ಹೇಳಿದ್ದೇನು? 
 

ಕಳೆದ ವಾರ ಸ್ಯಾಂಡಲ್‌ವುಡ್‌ನಲ್ಲಿ ಬರಸಿಡಿಲು ಬಡಿದ ವಿಷಯ ಎಂದರೆ ನಟಿ ನಿವೇದಿತಾ ಗೌಡ ಮತ್ತು ಗಾಯಕ ಚಂದನ್‌ ಶೆಟ್ಟಿ ಡಿವೋರ್ಸ್ ಪ್ರಕರಣ. ಇಬ್ಬರೂ ಕೋರ್ಟ್‌ನಲ್ಲಿ ಕಾಣಿಸಿಕೊಂಡು ಶಾಕ್‌ ಮೂಡಿಸಿದ್ದರು. ಇವರು ವಿಚ್ಛೇದನ ಪಡೆದಿರುವುದು ನಿಜವೋ ಹೌದೋ ಅಲ್ಲವೋ ಎಂದು ಅಭಿಮಾನಿಗಳು ಇಂಟರ್‌ನೆಟ್‌ನಲ್ಲಿ ತಡಕಾಡುವ ಹೊತ್ತಿನಲ್ಲಿಯೇ ಒಂದೇ ದಿನದಲ್ಲಿ ಡಿವೋರ್ಸ್ ಕೂಡ ಆಗಿಹೋಗಿತ್ತು. ಇವರು ವಿಚ್ಛೇದನ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಥಹರೇವಾರಿ ಕಾರಣಗಳನ್ನು ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದರು. ಕೊನೆಗೆ ಅವೆಲ್ಲವೂ ಸುಳ್ಳು ಎನ್ನುವ ಮೂಲಕ ಡಿವೋರ್ಸ್ ಬಳಿಕವೂ ಜೋಡಿ ಒಟ್ಟಾಗಿ ಬಂದು ಪತ್ರಿಕಾಗೋಷ್ಠಿ ನಡೆಸಿತ್ತು.

ಈಗ ಈ ವಿಷಯ ಸ್ವಲ್ಪ ತಣ್ಣಗಾಗಿದೆ. ನಿವೇದಿತಾ ಮತ್ತೆ ರೀಲ್ಸ್‌ನಲ್ಲಿ ಮುಳುಗಿದ್ದರೆ, ಇತ್ತ ಚಂದನ್‌ ಶೆಟ್ಟಿ ಕೂಡ ತಮ್ಮ ಲೈಫ್‌ನಲ್ಲಿ ಮುಂದುವರೆದಿದ್ದಾರೆ. ಆಂಕರ್‌ ರ್‍ಯಾಪಿಡ್‌ ರಶ್ಮಿ ಅವರ ಯುಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿರುವ ಚಂದನ್‌ ಶೆಟ್ಟಿಯವರು ತಮ್ಮ ಲೈಫ್‌ನ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಾವು ನಡೆದು ಬಂದ ದಾರಿ, ಬಸ್ಸಿನಲ್ಲಿ ಹೋಗುತ್ತಿದ್ದ ತಾವು ಇಂದು ಈ ಮಟ್ಟಿಗೆ ಬೆಳೆಯಲು ಕಾರಣ ಎಲ್ಲವುಗಳ ಬಗ್ಗೆ ವಿಷದವಾಗಿ ತಿಳಿಸಿದ್ದಾರೆ.

ನಿವೇದಿತಾ ಮತ್ತೆ ಪ್ರತ್ಯಕ್ಷ! ಏನಾದ್ರೂ ಮಾಡ್ಕೋ ತಾಯಿ... ಶೆಡ್‌ ಸಹವಾಸ ಬೇಡಪ್ಪಾ ಅನ್ನೋದಾ ನೆಟ್ಟಿಗರು?

 ಜೀವನದಲ್ಲಿ ಅಹಂಕಾರ ಮತ್ತು ಸಂಬಂಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಂದನ್‌ ಶೆಟ್ಟಿಯವರು ಅಹಂ ಎನ್ನುವುದು ನನಗೆ ಇಲ್ಲ. ಒಂದು ಹಾಡು ಹಿಟ್‌ ಆಯಿತು ಎಂದರೆ ಅದರ ಹಿಂದೆ ತುಂಬಾ ಮಂದಿಯ ಶ್ರಮ ಇರುತ್ತದೆ ಎಂದಿದ್ದಾರೆ. ಇದೇ ವೇಳೆ ತಾವು ನಡೆದುಬಂದ ಹಾದಿ, ಜೀವನ ಕಲಿಸಿದ ಪಾಠದ ಕುರಿತು ಮಾತನಾಡಿದ ಅವರು, ನಾನು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದೆ. ಗೆಜೆಟ್‌ಗಳನ್ನು ವಿಪರೀತ ಖರೀದಿ ಮಾಡುತ್ತಿದ್ದೆ. ಕೋವಿಡ್‌ ನನಗೆ ಪಾಠ ಕಲಿಸಿತು ಎಂದಿದ್ದಾರೆ.

ಇದರ ಬಗ್ಗೆ ರಶ್ಮಿ ಅವರು ಇನ್ನಷ್ಟು ಕೇಳಿದಾಗ, ಕೋವಿಡ್‌ ಸಮಯದಲ್ಲಿ ದುಡ್ಡನ್ನು ಹೇಗೆ ಮ್ಯಾನೇಜ್‌ ಮಾಡುವುದು ಎನ್ನುವುದನ್ನು ಕಲಿತೆ. ನಾನು ಮಾಡಿದ ಪ್ರಾಜೆಕ್ಟ್‌ಗಳಿಂದ ತುಂಬಾ ಸಕ್ಸಸ್‌ ಸಿಗುತ್ತದೆ ಎಂದು ಅಂದುಕೊಳ್ಳುವಷ್ಟರಲ್ಲಿಯೇ ಕೋವಿಡ್‌ ಬಂದು ಬರಸಿಡಿಲು ಬಡಿಯಿತು. ಆಗಷ್ಟೇ ನನ್ನ ಮದುವೆಯಾಯಿತು. ಮದುವೆಗೆ ಐವತ್ತರಿಂದ ಅರವತ್ತು ಲಕ್ಷ ರೂಪಾಯಿ ಖರ್ಚು ಮಾಡಿಬಿಟ್ಟೆ. ಮದುವೆಯಾಗುತ್ತಲೇ ಕೋವಿಡ್‌ ಬಂತು. ಹಣದ ಕೊರತೆ ಉಂಟಾಗಿ ಇದೆಲ್ಲಾ ನನಗೆ ಬೇಕಿತ್ತಾ ಎಂದು ಎನ್ನಿಸಿತು. ತುಂಬಾ ಕಷ್ಟಪಟ್ಟುಬಿಟ್ಟೆ. ಕೊನೆಗೆ ನಿಧಾನವಾಗಿ ಮೇಲಕ್ಕೆ ಬಂದೆ ಎಂದು ಅಂದಿನ ದಿನಗಳನ್ನು ಚಂದನ್‌ ಶೆಟ್ಟಿ ನೆನಪಿಸಿಕೊಂಡಿದ್ದಾರೆ. ಬಂದರೆ ಬೆಟ್ಟ, ಹೋದ್ರೆ ಟಾಟಾ ಎನ್ನುವುದು ಲೈಫು. ಯಾವಾಗ ಏನು ಆಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಯಾವ ಹಾಡುಗಳು ಫ್ಲಾಪ್‌ ಆಗುತ್ತವೆ, ಯಾವುದು ಹಿಟ್‌ ಆಗುತ್ತದೆ ತಿಳಿಯುವುದಿಲ್ಲ. ಆದರೆ ಕೋವಿಡ್‌ ಬಳಿಕ ಹಣವನ್ನು ಹೇಗೆ ಖರ್ಚು ಮಾಡುವುದು ಎಂದು ಕಲಿತೆ ಎಂದಿದ್ದಾರೆ.  

ಸೊಂಟದಿಂದ ನಿರ್ದೇಶಕರನ್ನು ಸುಸ್ತು ಮಾಡಿದ್ರಂತೆ ಮಂದಿರಾ ಬೇಡಿ! DDLJ ಕಥೆ ಹೇಳಿದ ನಟಿ

click me!