ತಪ್ಪು ಮಾಡಿಲ್ಲ ಅಂದ್ರೆ ದಾನಧರ್ಮ ಕಾಪಾಡುತ್ತೆ, ದರ್ಶನ್‌ಗೆ ಆಕೆ ವಿಜಯವೂ ಆಗಿ ಲಕ್ಷ್ಮಿಯೂ ಆಗಿದ್ರು: ಅನುಷಾ ರೈ

By Vaishnavi Chandrashekar  |  First Published Jun 19, 2024, 6:19 PM IST

ರೇಣುಕಾ ಮಗುವಾಗಿ ಪತ್ನಿ ಹೊಟ್ಟೆಯಲ್ಲಿ ಹುಟ್ಟಲೆಂದು ಆಶಯ...ಅನುಷಾ ರೈ ಬರೆದಿರುವ ಪೋಸ್ಟ್ ಎಲ್ಲೆಡೆ ವೈರಲ್....


ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬಾ, ಖಡಕ್, ಪೆಂಟಗಾನ್, ಕರ್ಷಣಂ, ದಮಯಂತಿ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅನುಷಾ ರೈ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಬರೆದುಕೊಂಡಿದ್ದಾರೆ. ನಟ ದರ್ಶನ್‌ ಒಳ್ಳೆ ಬಾಂಧವ್ಯ ಹೊಂದಿರುವ ಅನುಷಾ ಪೋಸ್ಟ್‌ಗೆ ಪಾಸಿಟಿವ್ ಹಾಗೂ ನೆಗೆಟಿವ್ ಕಾಮೆಂಟ್ಸ್‌ ಬರುತ್ತಿದೆ.

ಅನುಷಾ ರೈ ಬರೆದುಕೊಂಡಿರುವ ಸಾಲುಗಳು:

Latest Videos

'ಅಭಿಮಾನಿಗಳು ನನಗೆ ವರ್ಷದ 365 ದಿನವೂ ಊಟ ಹಾಕ್ತಾರೆ. ಆದ್ರೆ ನಾನು ಹುಟ್ಟುಹಬ್ಬದ ಒಂದು ದಿನ‌ ಮಾತ್ರ ಅವರಿಗೆ ಊಟ ಹಾಕ್ತೀನಿ ಎಂದವರು ದರ್ಶನ್...ಮೈಮೇಲೆ ಆತರ ನನ್ನ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳಬೇಡಿ ಸಿನಿಮಾ ನೋಡಿ ಸಾಕು, ನಿಮ್ಮ ಅಪ್ಪ ಅಮ್ಮನ‌ ಹೆಸರು ಹಾಕಿಸಿಕೊಳ್ಳಿ ಎನ್ನುತ್ತಾ ತಾವೇ ಎದೆಯ ಮೇಲೆ  ನನ್ನ‌ ಸೆಲೆಬ್ರಿಟೀಸ್ ಎಂದು ಹಚ್ಚೆ ಹಾಕಿಸಿಕೊಂಡ ಅಭಿಮಾನಿಗಳ ದಾಸ...ನಾನು ಕಾರಲ್ಲಿ ಸ್ಪೀಡಾಗಿ ಹೋಗೊವಾಗ ಹಿಂದೆ ಬರಬೇಡಿ, ಅಕಸ್ಮಾತ್ ಆಕ್ಸಿಡೆಂಟ್ ಆಗಿ ಹೆಚ್ಚು ಕಮ್ಮಿ ಆದ್ರೆ ನಿಮ್ಮ ಕುಟುಂಬದ ಗತಿ ಏನು?? ಎಂದು ಅಭಿಮಾನಿಗಳಿಗೆ ಪ್ರೀತಿಯಿಂದ ಕಾಳಜಿಯಿಂದ ಬುದ್ಧಿವಾದ ಹೇಳಿದ್ದ ಈ ಮೈಸೂರಿನ ಆರಡಿಯ ತೂಗುದೀಪ'

'ಇಂತಹ ವ್ಯಕ್ತಿಯಿಂದ ಇಂತಹ ತಪ್ಪಾಯಿತೆಂದರೆ ನಂಬಲಸಾಧ್ಯ. ಅದೇನೆ ಆದರೂ ಕಾನೂನು ಇದೆ ನೋಡಿಕೊಳ್ಳುತ್ತೆ. ತಪ್ಪು ಮಾಡಿಲ್ಲವಾದರೆ ಅವರ ದಾನಧರ್ಮಗಳೇ ಅವರನ್ನ ಕಾಪಾಡುತ್ತೆ. ಕಾನೂನಿನ ಮುಂದೆ ನಾವೆಲ್ಲರೂ ಚಿಕ್ಕವರೆ. ಸದ್ಯಕ್ಕಿನ್ನು ಆರೋಪಿಯಷ್ಟೆ ಅಪರಾಧಿಯಾಗಿಲ್ಲ...ಮುಂದೆ ಕಾದು ನೋಡೋಣ'

ಮುದ್ದು ಮನಸ್ಸುಳ್ಳ ಮುದ್ದಾದ ಸಿರಿ ನೀನು; ಬಿಗ್ ಬಾಸ್‌ ಸುಂದರಿ ಸಿಂಪಲ್ ಮದುವೆ ಸೀರೆ ವೈರಲ್‌

'ಇನ್ನು ಈ ಅನಾಹುತಕ್ಕೆ ಬಲಿಯಾದ ರೇಣುಕಾಸ್ವಾಮಿ ಗೂ ಅವರ ಕುಟುಂಬಕ್ಕೂ ಆ ದೇವರು ದುಃಖವನ್ನು ಭರಿಸೊ ಶಕ್ತಿ ನೀಡಲಿ. ಅವರು ಮಾಡಿದ್ದು ಸಹ ತಪ್ಪೇ ಆದರೂ ಈರೀತಿಯ ಶಿಕ್ಷೆ ಸರಿಯಲ್ಲ. ಕಾನೂನಿನ ಪ್ರಕಾರವೇ ರೇಣುಕಾಸ್ವಾಮಿ ಗೆ ಶಿಕ್ಷೆ ಕೊಡಿಸೊ ಬದಲು ಜೀವ ತೆಗೆದಿದ್ದು ಅಕ್ಷಮ್ಯ ಅಪರಾಧ. ತಂದೆಯಾಗುವ ಮೊದಲೇ ಕಣ್ ಮುಚ್ಚಿದ ರೇಣುಕಾಸ್ವಾಮಿ ಮತ್ತೆ ಮಗುವಾಗಿ ಹೆಂಡತಿಯ ಹೊಟ್ಟೆಯಲ್ಲಿ ಹುಟ್ಟಲಿ ಅನ್ನೋದೆ ನಮ್ಮ ಹಾರೈಕೆ....ಕ್ಷಮಿಸಿ
ಈ ಪ್ರಕರಣದಲ್ಲಿ ದರ್ಶನ್ ಕುಟುಂಬಕ್ಕೆ ಶಾಪ ಹಾಕಿದರೆ ಪ್ರಯೋಜನವೇನು ?? ನನ್ನ ತಂದೆ ಒಬ್ಬ ದೊಡ್ಡ ಸ್ಟಾರ್ ಅನ್ನೋದು ಸಹ ಗೊತ್ತಿಲ್ಲದ ಆ ಹಾಲುಗಲ್ಲದ ಮುದ್ದು ಹುಡುಗ ವಿನೀಶ್ ನೋಡಿದರೆ ಸಂಕಟವಾಗದಿರುವುದೆ? ಫಾದರ್ಸ್ ಡೇ ದಿನ ತಂದೆಯನ್ನು ನೆನೆದು ವಿನೀಶ್ ಹಾಕಿದ ಪೋಸ್ಟ್ ಗೆ ಮನಕಲಕದೆ ಇರುವುದೇ ? ಜೊತೆಗೆ ದರ್ಶನ್ ಜೀವನಕ್ಕೆ 22 ವರ್ಷದಿಂದ ವಿಜಯವೂ ಆಗಿ ಲಕ್ಷ್ಮಿಯೂ ಆಗಿರುವ ವಿಜಯಲಕ್ಷ್ಮಿ ಯವರನ್ನು ತಪ್ಪಿತಸ್ಥರಂತೆ ಕಾಣೋದು ಸರಿಯೇ?? ಇಂತಹ ಸಂದರ್ಭದಲ್ಲಿ ಅವರಿಬ್ಬರಿಗೂ ಧೈರ್ಯ ಹೇಳಬೇಕೇ ಹೊರತು ಹೀಯಾಳಿಸೋದು ನ್ಯಾಯವೇ ??

click me!