
ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಅವರು ಕಾಡುಗಳ್ಳ ವೀರಪ್ಪನ್ ಕಸ್ಟಡಿಯಲ್ಲಿ ಬರೋಬ್ಬರಿ 108 ದಿನಗಳನ್ನು ಕಳೆದಿದ್ದರು. ಅದೃಷ್ಟವಶಾತ್ 15 ನವೆಂಬರ್ 2000 ಇಸ್ವಿಯಂದು ವೀರಪ್ಪನ್ ಅಣ್ಣಾವ್ರನ್ನು ತನ್ನ ಕಪಿಮುಷ್ಠಿಯಿಂದ ಬಿಡುಗಡೆ ಮಾಡಿದ್ದ. ವೀರಪ್ಪನ್ ಡಾ ರಾಜ್‌ಕುಮಾರ್ ಅವರನ್ನು ಚೆನ್ನಾಗಿ ನೋಡಿಕೊಳ್ತಾ ಇದ್ದ, ಅತಿಯಾಗಿ ಗೌರವವನ್ನೂ ಕೊಡ್ತಿದ್ದ. ದೊಡ್ಡವ್ರೇ ದೊಡ್ಡವ್ರೇ ಎಂದು ಹೇಳುತ್ತ ಗೌರವವನ್ನೂ ಕೊಡ್ತಿದ್ದ. ಹಾಗೇ, ಕಾಡಿನಿಂದ ಅಣ್ಣಾವ್ರನ್ನ ನಾಡಿಗೆ ಕಳಿಸಿಕೊಡುವ ವೇಳೆ ಒಂದು ಗಿಫ್ಟ್ ಸಹ ಕೊಟ್ಟು ಕಳುಹಿಸಿದ್ದನಂತೆ.
ಹಾಗಿದ್ರೆ, ಡಾ ರಾಜ್‌ಕುಮಾರ್ ಅವರಿಗೆ ವೀರಪ್ಪನ್ ಯಾವ ಉಡುಗೊರೆ ಕೊಟ್ಟು ಕಳುಹಿಸಿದ್ದ ಗೊತ್ತಾ? ಬಿಡುಗಡೆ ದಿನ ಡಾ ರಾಜ್ ಅವರಿಗೆ ಬಿಳಿ ಪಂಚೆ ಹಾಗು ಶಾಲು ಕೊಟ್ಟು ಗೌರವಿಸಿದ್ದನಂತೆ. ವೀರಪ್ಪನ್ ಸಹಚರ ಸೇತುಕುಳಿ ಎಂಬವನು ಆನೆದಂತದಿಂದ ಮಾಡಿದ್ದ ಶಿವಲಿಂಗವನ್ನು ಕೊಟ್ಟಿದ್ದ ಎನ್ನಲಾಗಿದೆ. ಅಪಹರಣ ಮಾಡಿದ್ದ ವೀರಪ್ಪನ್ ಆಮೇಲೆ ಬದಲಾದನೇ? ಅಥವಾ, ಡಾ ರಾಜ್‌ಕುಮಾರ್ ಅಪಹರಣ ಅದೊಂದು ಯಾವುದೋ ಉದ್ದೇಶಕ್ಕೆ ವೀರಪ್ಪನ್ ಕಡೆಯಿಂದ ಮಾಡಲಾದ ನಾಟಕವೋ? ಗೊತ್ತಿಲ್ಲ!
ನಾವೇನು ನೋಡುತ್ತೇವೋ ಹುಡುಕುತ್ತೇವೋ ಅದನ್ನೇ ಪಡೆಯುತ್ತೇವೆ; ಕೆಜಿಎಫ್ ಸ್ಟಾರ್ ಯಶ್!
ಒಟ್ಟಿನಲ್ಲಿ, ಕನ್ನಡನಾಡಿನ ಮೇರು ಕಲಾವಿದರಾದ ಡಾ ರಾಜ್‌ಕುಮಾರ್ ಅವರು ಕಾಡುಗಳ್ಳ-ದಂತಚೋರ ವೀರಪ್ಪನ್ ಕೈಗೆ ಸಿಕ್ಕಿ ನರಳಿದ್ದು ಇದೆಯಲ್ಲ, ಅದು ಅನಿರೀಕ್ಷಿತ ಆಘಾತವೇ ಹೌದು. ವೀರಪ್ಪನ್ ಡಾ ರಾಜ್‌ಕುಮಾರ್ ಅವರನ್ನು ಕಾಡಿನಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾ ಎಂದೇ ಹೇಳಲಾಗುತ್ತಿದೆ. ಆದರೆ, ಕಾಡಿನಲ್ಲಿ ಇದ್ದು ಅಭ್ಯಾಸವಿಲ್ಲದ ಡಾ ರಾಜ್‌ಕುಮಾರ್ ಅವರನ್ನು ಅಪಹರಿಸಿ ಕಾಡಿನಲ್ಲಿ ಇಟ್ಟುಕೊಂಡಿರುವುದೇ ದೊಡ್ಡ ಶಿಕ್ಷೆ. ಅದೇ ಶಿಕ್ಷೆಯಾಗಿರುವ ಹೊತ್ತಲ್ಲಿ ಅದೆಷ್ಟೇ ಚೆನ್ನಾಗಿ ನೋಡಿಕೊಂಡರೂ ಡಾ ರಾಜ್‌ಕುಮಾರ್ ನರಳಾಟ ಅನುಭವಿಸಿದ್ದಂತೂ ಸುಳ್ಲಲ್ಲ.
ಸಪೋರ್ಟ್ ಮಾಡಿದವ್ರು ಗೂಬೆಗಳ ಥರ ಕಾಣ್ತಾರೆ; ಹಳೆಯ ಘಟನೆಗೆ ಟಾಂಗ್ ಕೊಟ್ರಾ ಕಿಚ್ಚ ಸುದೀಪ್?
ಅಂದಹಾಗೆ, ಇವತ್ತು ಡಾ ರಾಜ್‌ಕುಮಾರ್ ಅವರು ನಮ್ಮೊಂದಿಗಿಲ್ಲ, ವೀರಪ್ಪನ್ ಸಹ ಇಲ್ಲ. ಆದರೆ, ಈ ಇಬ್ಬರನ್ನೂ ನಾವು ಬೇರೆಬೇರೆ ಕಾರಣಕ್ಕೆ ಇಂದಿಗೂ ಹಾಗೂ ಎಂದಿಗೂ ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ. ಅದಿರಲಿ, ಡಾ ರಾಜ್‌ಕುಮಾರ್ ಅವರು ನಮ್ಮನ್ನಗಲಿ ದಶಕಗಳೇ ಕಳೆದರೂ ಅವರನ್ನು ಇಂದಿಗೂ ಸಹ ಕರುನಾಡು ನೆನಪಿಸಿಕೊಳ್ಳುತ್ತಲೇ ಇರುತ್ತದೆ. ಡಾ ರಾಜ್ ಅವರನ್ನು ಯಾವುದೋ ಸ್ವಾರ್ಥ ಸಾಧನೆಗೆ ಕಿಡ್ನಾಪ್ ಮಾಡಿದ್ದ ವೀರಪ್ಪನ್, ವಾಪಸ್ ಕಳುಹಿಸುವಾಗ ಬಿಳಿ ಪಂಚೆ ಹಾಗೂ ಶಾಲು ಕೊಟ್ಟು ಗೌರವಿಸಿದ್ದು ಅಚ್ಚರಿಯೇ ಸರಿ ಎನ್ನಬಹುದು.
ರಮ್ಯಾ-ರಕ್ಷಿತಾ ಸಿನಿಮಾ ಬಗ್ಗೆ ನಿರ್ಮಾಪಕರು ಹೇಳಿದ್ದೇನು; ಸಕ್ಸಸ್‌ಗೆ ಯಾವ ಫಾರ್ಮುಲಾ ಬಳಸಿದ್ರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.