ನಿಖಿಲ್ ಹಣೆಗೆ ಕುಂಕುಮವಿಟ್ಟ ಪತ್ನಿ ರೇವತಿ; ಹಳೆ ವಿಡಿಯೋ ಶೇರ್ ಮಾಡಿದ ಯುವರಾಜ!

Suvarna News   | Asianet News
Published : Apr 19, 2021, 03:46 PM IST
ನಿಖಿಲ್ ಹಣೆಗೆ ಕುಂಕುಮವಿಟ್ಟ ಪತ್ನಿ ರೇವತಿ; ಹಳೆ ವಿಡಿಯೋ ಶೇರ್ ಮಾಡಿದ ಯುವರಾಜ!

ಸಾರಾಂಶ

ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ನಿಖಿಲ್ ಪತ್ನಿ ಜೊತೆಗಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ಹಳೆಯದಾದರೂ ಭಾವನೆ ಹೊಸತು....    

ಸ್ಯಾಂಡಲ್‌ವುಡ್‌ ಯುವರಾಜ, ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಏಪ್ರಿಲ್ 17ರಂದು ವೈವಾಹಿ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ಕಳೆದಿದೆ. ಮದುವೆ ಫೋಟೋ ಹಂಚಿಕೊಂಡು ಪತ್ನಿಗೆ ಲವ್ ಯು ಹೇಳಿದ ನಿಖಿಲ್, ಇದೀಗ ಹಳೆ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 

ಲೇ ಲಡಾಕ್‌ನಲ್ಲಿ ಚಿತ್ರೀಕರಿಸುತ್ತಲೇ ಮಡದಿಗೆ ಸ್ಪೆಷಲ್ ಶಾಪಿಂಗ್ ಮಾಡಿದ ನಿಖಿಲ್! 

'ಗುಡ್‌ ಓಲ್ಡ್‌ ಮೆಮೊರೇಬಲ್‌ ಮೊಮೆಂಟ್ಸ್‌ನ ವಿಡಿಯೋ ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ,' ಎಂದು ಬರೆದುಕೊಂಡಿರುವ ನಿಖಿಲ್ ಹಣೆಗೆ ರೇವತಿ ಕುಂಕುಮ ಇಡುತ್ತಾರೆ, ನಾಚಿ ನೀರಾದ ನಿಖಿಲ್ ಕೂಡ ಪತ್ನಿ ಹಣೆಗೆ ಕುಂಕುಮ ಇಡುತ್ತಾರೆ. ಇಬ್ಬರೂ ದೇವರ ಮನೆಯಲ್ಲಿ ನಿಂತು, ಹೀಗೆ ಮಾಡುತ್ತಿರುವುದನ್ನು ಯಾರು ಸೆರೆ ಹಿಡಿದರೋ ಗೊತ್ತಿಲ್ಲ. ಆದರೆ ವಿಡಿಯೋ ಮಾತ್ರ ಸೂಪರ್. ಎನ್ನುತ್ತಿದ್ದಾರೆ ಯುವರಾಜನ ಅಭಿಮಾನಿಗಳು. ಈ ವಿಡಿಯೋ ಮತ್ತೊಂದು ವಿಶೇಷತೆ ಏನೆಂದು ನಿಖಿಲ್ ಸಿನಿಮಾ ಜರ್ನಿಯಲ್ಲಿ ಬ್ರೇಕ್ ಕೊಟ್ಟಂತ ಚಿತ್ರ 'ಸೀತಾರಾಮ ಕಲ್ಯಾಣ' ಚಿತ್ರದ 'ನಿನ್ನ ರಾಜ ನಾನು, ನನ್ನ ರಾಣಿ ನೀನು' ಹಾಡನ್ನು ಸೇರಿಸಲಾಗಿದೆ. 

ರೈಡರ್ ಸಿನಿಮಾ ಚಿತ್ರೀಕರಣಕ್ಕೆಂದು ಲೇ ಲಡಾಕ್‌ ಪ್ರಯಾಣ ಮಾಡಿದ ನಿಖಿಲ್ ಅಲ್ಲಿನ ಹ್ಯಾಂಡ್‌ ಮೇಡ್‌ ವಸ್ತುಗಳನ್ನು ಪತ್ನಿಗೆ ಗಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ. ಆ್ಯನಿವರ್ಸರಿ ದಿನ ಪತ್ನಿಗೆ ಹೂ ಗುಚ್ಛ ಹಿಡಿದು ಬಂದಿದ್ದಾರೆ ಎನ್ನಲಾಗಿದೆ. ನಿಖಿಲ್ ಆನ್‌ಸ್ಕ್ರೀನ್ ಮಾತ್ರವಲ್ಲ, ಆಫ್ ಸ್ಕ್ರೀನ್‌ ಕೂಡ ಸಖತ್ ರೋಮ್ಯಾಂಟಿಕ್ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು  ಕೊರೋನಾ ಕೇಸ್‌ ಹೆಚ್ಚಾಗುತ್ತಿರುವ ಕಾರಣ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ನಿಖಿಲ್ ಕುಮಾರಸ್ವಾಮಿಗೂ ಕೊರೋನಾ ಸೋಂಕು ತಗುಲಿದೆ. ಈ ಬಗ್ಗೆ ಸ್ವತಃ ನಿಖಿಲ್ ಟ್ಟೀಟ್ ಮಾಡಿದ್ದಾರೆ.

Rx 100 ಬೈಕ್‌; ಪತ್ನಿ ರೇವತಿ ಜೊತೆ ನಿಖಿಲ್ ಕುಮಾರಸ್ವಾಮಿ ಜಾಲಿ ರೈಡ್ ವಿಡಿಯೋ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮದುವೆ, ಡಿವೋರ್ಸ್​ ಬಗ್ಗೆ ರಾಜ್​ ಬಿ.ಶೆಟ್ಟಿ ಓಪನ್​ ಮಾತು: ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ!
Bigg Boss ಮನೆಗೆ ರಶ್ಮಿಕಾ ಜೊತೆ ಹೋಗೋ ಛಾನ್ಸ್​ ಸಿಕ್ರೆ ರಕ್ಷಿತ್​ ಶೆಟ್ಟಿ ಮಾಡೋದೇನು? ನಟನ ಬಾಯಲ್ಲೇ ಕೇಳಿ