
ರಾಜಕೀಯ ಚಟುವಟಿಕೆಗಳಿಂದ ಸುದ್ದಿಯಲ್ಲಿರುವ ನಿಖಿಲ್ ಕುಮಾರ್ ಇದೀಗ ಹೊಸ ಸಿನಿಮಾ ಹಾಗೂ ಹೊಸ ಅತಿಥಿ ಆಗಮನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರಿಗೆ ಬ್ಯಾಕ್ ಟು ಬ್ಯಾಕ್ ಗುಡ್ ನ್ಯೂಸ್ ನೀಡುತ್ತಿದ್ದಾರೆ.
ರಾಮನಗರ ನಗರಸಭೆ ಅವರಣದಲ್ಲಿ ಪೌರ ಕಾರ್ಮಿಕರಿಗೆ ಹಾಗೂ ವಾಟರ್ ಬೋರ್ಡ್ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡುತ್ತಿರುವ ನಿಖಿಲ್ ಕೆಲವು ದಿನಗಳ ಹಿಂದೆ ತಮ್ಮ ರಾಮನಗರದ ತೋಟದ ಮನೆಗೆ ಕರು ಆಗಮನದ ಬಗ್ಗೆ ಹಂಚಿಕೊಂಡಿದ್ದರು. ಕರುವನ್ನು ಮುದ್ದಾಡುತ್ತಿರುವ ನಿಖಿಲ್ 'ನಮ್ಮ ಮನೆಗೆ ಹೊಸ ಅತಿಥಿಯ ಆಗಮನ' ಎಂದು ಬರೆದುಕೊಂಡಿದ್ದಾರೆ.
ಇದರ ಬೆನ್ನಲೇ ತಮ್ಮ ಮುಂದಿನ ಚಿತ್ರದ ಬಗ್ಗೆಯೂ ಅನೌನ್ಸ್ ಮಾಡಿದ್ದಾರೆ. 'ನಿಮ್ಮ ಜೊತೆ ಸಂತೋಷದ ವಿಚಾರ ಹಂಚಿಕೊಳ್ಳುತ್ತಿರುವೆ. ಕೆವಿಎನ್ ಬ್ಯಾನರ್ ಅಡಿಯಲ್ಲಿ ನನ್ನ ಮುಂದಿನ ಸಿನಿಮಾ. ವೆಂಕಟ್ ನಾರಾಯಣ್ ಸರ್ ಮತ್ತು ಸುಪ್ರೀತಾಗೆ ನನ್ನ ಧನ್ಯವಾದಗಳು. ಮಂಜು ನಿರ್ದೇಶನಕ್ಕೆ ನವೀನ್ ಡಿಒಪಿ ಮಾಡುತ್ತಿದ್ದಾರೆ ಹಾಗೂ ಅಜನೀಶ್ ಸಂಗೀತ ಇರಲಿದೆ,' ಎಂದು ನಿಖಿಲ್ ಬರೆದುಕೊಂಡಿದ್ದಾರೆ. ನಿಖಿಲ್ ಹುಟ್ಟುಹಬ್ಬದ ದಿನದಂದು 'ರೈಡರ್' ಸಿನಿಮಾ ಟೀಸರ್ ಬಿಡುಗಡೆ ಮಾಡಲಾಗಿತ್ತು, ಚಿತ್ರದ ಮುಖ್ಯ ಭಾಗದ ಚಿತ್ರೀಕರಣ ಉಳಿದಿದೆ.
ಅಜ್ಜ ಆಗ್ತಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ: ಸೊಸೆ ರೇವತಿಗೆ 5 ತಿಂಗಳು!
ಕೆಲವು ದಿನಗಳ ಹಿಂದೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮೂಲಕ ಮಾಜಿ ಮುಖ್ಯಮಂತ್ರಿಗಳು ಅಜ್ಜನಾಗುತ್ತಿರುವ ವಿಚಾರವನ್ನು ಹಂಚಿಕೊಂಡರು. ಸೊಸೆ ರೇವತಿ 5 ತಿಂಗಳ ಗರ್ಭಿಣಿ, ಎಂಬ ಸಂತೋಷದ ಸುದ್ದಿಯನ್ನು ರಿವೀಲ್ ಮಾಡಿದ್ದರು. ನಿಖಿಲ್ ಕುಟುಂಬದಿಂದ ಒಂದಾದ ಮೇಲೊಂದು ಗುಡ್ ನ್ಯೂಸ್ ಬರುತ್ತಿರುವುದಕ್ಕೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.