
ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಅಂದರೆ ಕ್ರೇಜ್ ಜೋರಾಗಿ ಇರುತ್ತದೆ. ಅದರಲ್ಲೂ ಉಪೇಂದ್ರ ನಿರ್ದೇಶನದ ಸಿನಿಮಾ ಅಂದರೆ ಹೇಳಬೇಕಾ. ವಿಭಿನ್ನ, ವಿನೂತನ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರುವ ರಿಯಾಲ್ ಸ್ಟಾರ್ ಉಪೇಂದ್ರ ಇದೀಗ ಮತ್ತೊಂದು ಹೊಸ ಕಾನ್ಸೆಪ್ಟ್ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಹೌದು, ರಿಯಲ್ ಸ್ಟಾರ್ ಬರೋಬ್ಬರಿ 7 ವರ್ಷಗಳ ನಂತರ ನಿರ್ದೇಶನದ ಕ್ಯಾಪ್ ಧರಿಸಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾ ಟೈಟಲ್ ರಿಲೀಸ್ ಆಗಿದ್ದು ಅದ್ದೂರಿಯಾಗಿ ಸಿನಿಮಾ ಸೆಟ್ಟೇರಿದೆ. ಚಿತ್ರಕ್ಕೆ UI ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್ ರಿಲೀಸ್ ಆದಾಗಿನಿಂದಲೂ ಉಪ್ಪಿ ಹೊಸ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟೈಟಲ್ ನಲ್ಲಿಯೇ ಸಾಕಷ್ಟು ಕುತೂಹಲ ಇಟ್ಟಿರುವ ರಿಯಲ್ ಸ್ಟಾರ್, ಸದ್ಯ ರಿಲೀಸ್ ಆಗಿರುವ ಟೈಟಲ್ ಮೂರು ನಾಮನಾ ಅಥವಾ ಯು ಐ ಎನ್ನುವುದನ್ನು ಅಭಿಮಾನಿಗಳಿಗೆ ಬಿಟ್ಟಿದ್ದು ಎಂದಿದ್ದಾರೆ.
ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದ ಉಪೇಂದ್ರ (Upenra) ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವುದನ್ನು ಹೇಳಿರಲಿಲ್ಲ. ಸದ್ಯ ರಿವೀಲ್ ಆಗಿರುವ ಮಾಹಿತಿ ಪ್ರಕಾರ ಯು ಐ (UI) ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ ಎನ್ನುವುದು ಗೊತ್ತಾಗಿದೆ. ಹೌದು ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದಲ್ಲಿ ಇಂದ್ರಜಿತ್, ಉಮೇಶ್ ಬಣಕರ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರ್ಗಿ, ಓಂ ಪ್ರಕಾಶ್ ರಾವ್ ನಟಿಸುತ್ತಿದ್ದಾರೆ.
ದುರ್ಗಾ ಹೋಮ, ಲಲಿತಾ ಸಹಸ್ರನಾಮ ಪೂಜೆ ಮಾಡಿಸಿದ ಪ್ರಿಯಾಂಕಾ ಉಪೇಂದ್ರ!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ. ಯು ಐ ಟೀಂ ವಿಶೇಷವಾಗಿ ಹ್ಯಾಟ್ರಿಕ್ ಹೀರೋಗೆ ಶುಭಾಶಯ ತಿಳಿಸಿದೆ. ವಿಶ್ ಮಾಡುವ ಸಮಯದಲ್ಲಿ ಯು ಐನಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಇನ್ನು ಮೂಲಗಳ ಪ್ರಕಾರ ಯು ಐನಲ್ಲಿ ನಾಯಕಿಯಾಗಿ ಕೆಜಿಎಫ್ ಸ್ಟಾರ್ ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸಿನಿಮಾತಂಡದ ಕಡೆಯಿಂದ ಅಥವಾ ಶ್ರೀನಿಧಿ ಶೆಟ್ಟಿ (Nidhi Subbaiah) ಕಡೆಯಿಂದ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ರಿಯಲ್ ಸ್ಟಾರ್ ಜೊತೆ ಶ್ರೀನಿಧಿ ನಟಿಸುವುದು ಬಹುತೇಕ ಖಚಿತ ಎನ್ನಲಾಗತ್ತಿದೆ. ಅಂದಹಾಗೆ ಈ ಸಿನಿಮಾದಲ್ಲಿ ಈಗಾಗಲೇ ನಿಧಿ ಸುಬ್ಬಯ್ಯ ನಟಿಸುತ್ತಿದ್ದಾರೆ. ಹಾಗಾಗಿ ನಿಧಿ ಸುಬ್ಬಯ್ಯ ಪಾತ್ರವೇನು, ಒಂದುವೇಳೆ ಶ್ರೀನಿಧಿ ಎಂಟ್ರಿ ಕೊಟ್ಟರೆ ಅವರ ಪಾತ್ರವೇನು ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಯು ಐ ಸಿನಿಮಾಗೆ ನಿರ್ಮಾಪಕ ಕೆಪಿ ಶ್ರೀಕಾಂತ್ ಬಂಡವಾಳ ಹೂಡುತ್ತಿದ್ದಾರೆ.
ಮೊಟ್ಟಮೊದಲು ರೆಕಾರ್ಡ್ ಮಾಡ್ತಿದೆ ಕಬ್ಜ! ಏನದು ದಾಖಲೆ?
ಅಂದಹಾಗೆ ಯು ಐ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಬೆಂಗಳೂರಿನಿಂದನೇ ಚಿತ್ರೀಕರಣ ಪ್ರಾರಂಭ ಮಾಡಿರುವ ಸಿನಿಮಾತಂಡ ಈಗಾಗಲೇ ಸಾಕಷ್ಟು ಶೂಟಿಂಗ್ ಮಾಡಿದೆ. ಉಪೇಂದ್ರ ನಿರ್ದೇಶನ ಅಂದ್ಮೇಲೆ ಏನಾದರೊಂದು ವಿಶೇಷತೆ ಇದ್ದೆ ಇರುತ್ತದೆ. ಅಲ್ಲದೆ ಅಭಿಮಾನಿಗಳಿಗೆ ಒಮ್ಮೆ ನೋಡಿದ ತಕ್ಷಣ ಅರ್ಥವಾಗುವುದು ತುಂಬಾ ಕಷ್ಟ. ಹಾಗಾಗಿ ಪದೆ ಪದೇ ಸಿನಿಮಾ ನೋಡುವಂತೆ ಮಾಡುತ್ತೆ. ಸದ್ಯ ತಯಾರಾಗುತ್ತಿರುವ ಯು ಐ ಸಿನಿಮಾ ಹೇಗಿರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.