ಮರುಬಿಡುಗಡೆ ನಿಧಾನ ಹೊಸಬಿಡುಗಡೆ ಶೂನ್ಯ;ಜನವರಿ ತನಕ ಚಿತ್ರರಂಗಕ್ಕೆ ಅಘೋಷಿತ ರಜೆ!

By Kannadaprabha NewsFirst Published Nov 3, 2020, 9:38 AM IST
Highlights

ಚಿತ್ರಮಂದಿರಗಳ ಪಾಲಿಗೆ ಯಾಕೋ ಅಘೋಷಿತ ಲಾಕ್‌ಡೌನ್‌ ಮಾತ್ರ ಮುಂದುವರಿಯುತ್ತಿದೆ ಎನಿಸುತ್ತಿದೆ. ಚಿತ್ರಮಂದಿರಗಳ ಬಾಗಿಲು ತೆರೆಯಲು ಅನುಮತಿ ಕೊಟ್ಟಮೇಲೂ ಥಿಯೇಟರ್‌ಗಳು ಅದರಲ್ಲೂ ಸಿಂಗಲ್‌ ಸ್ಕ್ರೀನ್‌ ಪರದೆಗಳ ಮಟ್ಟಿಗೆ ಲಾಕ್‌ಡೌನ್‌ ಮೋಡಗಳು ತಿಳಿಯಾಗಿಲ್ಲ.

ಸದ್ಯ ಚಿತ್ರರಂಗದಲ್ಲಿ ನಡೆಯುತ್ತಿರುವ ಲೆಕ್ಕಾಚಾರಗಳನ್ನು ಕಂಡರೆ ಈ ವರ್ಷ ತಿಳಿಯಾಗುವ ಲಕ್ಷಣಗಳೂ ಕಾಣುತ್ತಿಲ್ಲ.

ಕನ್ನಡ ಸಿನಿಮಾದಲ್ಲಿ ಕಾಲಿವುಡ್ ನಟ: ಟಗರು ಜೊತೆ ಇಂಡಿಯಾದ ಮೈಕಲ್ ಜಾಕ್ಸನ್

ಈ ತನಕ ಓಟಿಟಿಯಲ್ಲೇ 5 ಹೊಸ ಕನ್ನಡ ಚಿತ್ರಗಳು ಬಿಡುಗಡೆಗೆ ಆಗಿವೆ. ಆದರೆ, ಚಿತ್ರಮಂದಿರಗಳ ಪರದೆಗಳು ಮಾತ್ರ ಅದೇ ಹಳೆಯ ಚಿತ್ರಗಳ ಮುಖಗಳನ್ನೇ ನೋಡುತ್ತ ಕೂತಿವೆ. ನವೆಂಬರ್‌ ತಿಂಗಳಿನಿಂದಲೇ ಹೊಸ ಕನ್ನಡ ಚಿತ್ರಗಳು ಥಿಯೇಟರ್‌ಗಳಿಗೆ ಬರುವ ಸಾಧ್ಯತೆಗಳಿದ್ದವು. ಚಿರಂಜೀವಿ ಸರ್ಜಾ ನಟನೆಯ ‘ರಣಂ’ ಹಾಗೂ ಯಜ್ಞಾ ಶೆಟ್ಟಿಅಭಿನಯದ ‘ಆಕ್ಟ್ 1978’, ಡಿಸೆಂಬರ್‌ ತಿಂಗಳಲ್ಲಿ ‘ಪೊಗರು’ ಬಿಡುಗಡೆಯ ಮಾತು ಬಂದು ಹೋಯಿತು. ಈ ಪೈಕಿ ‘ರಣಂ’ ಯಾವಾಗ ಬರುತ್ತೋ ಇನ್ನೂ ಗೊತ್ತಿಲ್ಲ. ನವೆಂಬರ್‌ನಲ್ಲಿ ಬರುತ್ತೇವೆ ಎಂದಿದ್ದ ‘ಆಕ್ಟ್ 1978’ ಸಿನಿಮಾ ಕೂಡ ಈ ತಿಂಗಳು ಬರುವ ಸಾಧ್ಯತೆಗಳು ಇಲ್ಲ. ‘ಸಿಂಗಲ್‌ ಸ್ಕ್ರೀನ್‌ ಅಸೋಷಿಯೇಷಿಯೇಷನ್‌ ಅವರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಕಾರಣ ನಮ್ಮ ಚಿತ್ರದ ಬಿಡುಗಡೆ ದಿನಾಂಕ ಈಗಲೇ ಘೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯದಲ್ಲೇ ದಿನಾಂಕ ಪ್ರಕಟ ಮಾಡುತ್ತೇವೆ’ ಎಂದಿದ್ದಾರೆ ‘ಆಕ್ಟ್ 1978’ ಚಿತ್ರದ ನಿರ್ದೇಶಕ ಮಂಸೋರೆ ಅವರು.

ಈ ಮಧ್ಯೆ ಡಿಸೆಂಬರ್‌ ಕೊನೆಯ ತನಕ ಸಿನಿಮಾ ಬಿಡುಗಡೆ ಮಾಡದೇ ಇರಲು ತಮಿಳು, ತೆಲುಗು, ಮಲಯಾಳಂ ಚಿತ್ರರಂಗಗಳೂ ನಿರ್ಧಾರ ಮಾಡಿರುವ ಸುದ್ದಿಯಿದೆ. ಹಾಗೇನಾದರೂ ಆದರೆ ಕನ‚್ನಡದ ಆರುನೂರು ಸಿಂಗಲ್‌ ಸ್ಕ್ರೀನ್‌ಗಳಿಗೆ ಸಿನಿಮಾ ಸಿಗುವುದಿಲ್ಲ. ಹಾಗಾಗಿ, ಡಿಸೆಂಬರ್‌ ಕೊನೆಯ ತನಕ ಚಿತ್ರಮಂದಿರ ತೆರೆಯುವುದು ಕಷ್ಟ.

ಬೇಡಿಕೆ ಈಡೇರಿದರಷ್ಟೇ ಚಿತ್ರಮಂದಿರ ಓಪನ್‌..!

ಇದು ಗೊತ್ತಾಗುತ್ತಿದ್ದಂತೆ ಒಂದಿಷ್ಟುಚಿತ್ರಗಳು ಓಟಿಟಿ ಬಾಗಿಲು ತಟ್ಟುತ್ತಿವೆ. ಕಾಯುವ ತಾಳ್ಮೆ ಇಲ್ಲದ ಸಿನಿಮಾಗಳು ಕೂಡ ಓಟಿಟಿಯ ಮೊರೆ ಹೋದರೂ ಅಚ್ಚರಿ ಇಲ್ಲ. ಈ ಎಲ್ಲದರ ಪರಿಣಾಮ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ಹೊಸ ಚಿತ್ರಗಳು ಮಾತ್ರವಲ್ಲ, ಹಳೆಯ ಚಿತ್ರಗಳ ಬಿಡುಗಡೆಯ ಭರಾಟೆ ಕೂಡ ನಿಧಾನಕ್ಕೆ ಕಡಿಮೆ ಆಗುತ್ತಿದೆ.

click me!