
ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ನಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ, ಸಿನಿಮಾ ಪ್ರಮೋಷನ್ ಅಥವಾ ಯಾವುದಾದರೂ ಜಾಹಿರಾತಿನಲ್ಲಿ ಕಾಣಿಸಿಕೊಂಡರೆ ಶೇರ್ ಮಾಡಿಕೊಳ್ಳುತ್ತಾರೆ. ಚಿಕ್ಕ ವಯಸ್ಸಿಗೇ ಅತಿ ಕಡಿಮೆ ಅವಧಿಯಲ್ಲಿ ನೇಮ್, ಫೇಮ್ ಹೊಂದಿರುವ ನಟಿ ಬಗ್ಗೆ ಜನರು ಮಾತನಾಡಿಕೊಳ್ಳುವುದು ತುಂಬಾನೇ ಕಾಮನ್. ಅವಮಾನ, ಬಾಡಿ ಶೇಮಿಂಗ್, ಕೇಳಿಬಾರದಾದ ಪದಗಳು ಎಲ್ಲವನ್ನೂ ರಶ್ಮಿಕಾ ಸಿಹಿಸಿಕೊಂಡು ಹೇಗೆ ಜೀವನ ಮುಂದುವರೆಸುತ್ತಿದ್ದಾರೆಂದು ಇದೀಗ ಹೇಳಿ ಕೊಂಡಿದ್ದಾರೆ. ಏನಿದೆ ಪೋಸ್ಟಿನಲ್ಲಿ?
ಹುಬ್ಬೇರಿಸುವಂತೆ ಮಾಡುತ್ತಿದೆ ರಶ್ಮಿಕಾ ಪಡೆದ ಸಂಭಾವನೆ ಮೊತ್ತ!
ರಶ್ಮಿಕಾ ಪೋಸ್ಟ್:
'ನಾವೆಲ್ಲರೂ ಜೀವನದಲ್ಲಿ ಎಷ್ಟು ಸುಖವಾಗಿದ್ದೀವಿ, ಅಂದರೆ ಮೊಬೈಲ್ ಅಥವಾ ಒಂದು ಟಚ್ ಮೂಲಕ ಯಾರು ಬೇಕಾದರೂ ಏನೂ ಬೇಕಾದರೂ ಮಾಡಬಲ್ಲರು. ಆದರೆ ಇದರಿಂದ ಒಬ್ಬರ ಜೀವ ಉಳಿಸುವ ಶಕ್ತಿಯೂ ಇದೆ, ಹಾಗೆಯೇ ಮತ್ತೊಬ್ಬರ ಜೀವವನ್ನೂ ಹಾಳು ಮಾಡಿ ಕೊಲ್ಲುವ ಶಕ್ತಿಯೂ ಇದೆ. ನಾನು ಟ್ರೋಲ್ ಆಗಿದ್ದೀನಾ? ಹೌದು ಆಗಿದ್ದೀನಿ. ನನಗೆ ಬಾಡಿ ಶೇಮಿಂಗ್ ಮಾಡಿದ್ದಾರಾ? ಹೌದು ಮಾಡಿದ್ದಾರೆ. ನನ್ನ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರಾ? ಹೌದು ತುಂಬಾ. ಸೋಷಿಯಲ್ ಮೀಡಿಯಾದಲ್ಲಿ ನನ್ನನ್ನು ಬಲ್ಲಿ (ಕೆಟ್ಟದಾಗಿ ಅಥವಾ ಅವಮಾನ ಉಂಟಾಗುವ ರೀತಿಯಲ್ಲಿ ರೇಗಿಸುವುದು) ಮಾಡಿದ್ದಾರಾ? ಹೌದು ಅದನ್ನೂ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ನಾನು ನನಗೆ ಸಂತೋಷ ಕೊಡುವಂತ ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸಿಲ್ಲ. ಯಾಕಂದರೆ ನಮ್ಮ ಸುತ್ತಲಿರುವ ನೆಗೆಟಿವಿಟಿಗಿಂತ ಮೀರಿದ್ದು ಪಾಸಿಟಿವಿಟಿ ಇದೆ. ಎಷ್ಟು ನೆಗೆಟಿವ್ ಇದೆ ಅಂದ್ರೆ ಎಲ್ಲರೂ ಅದೇ ಸತ್ಯ ಎಂದುಕೊಳ್ಳುತ್ತಾರೆ. ಆದರೆ ಅವೆಲ್ಲವೂ ಕ್ಷಣಿಕ. ಈ ಕ್ಷಣದಿಂದ ಇನ್ನು ಮುಂದೆಯಾದರೂ ನಾನು ನಮ್ಮ Digital well being ಬಗ್ಗೆ ಗಮನ ಹರಿಸಬೇಕು. ನಮ್ಮ ಫೋನುಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ಜನರ ಜೊತೆ ಸಂಪರ್ಕ ಹೊಂದಲು, ಅದ್ಭುತ ವಿಚಾರಗಳ ಬಗ್ಗೆ ಚರ್ಚಿಸಲು ಹಾಗೂ ಒಬ್ಬ ವ್ಯಕ್ತಿಯ ಬ್ಯುಸಿನೆಸ್ ಒಳ್ಳೆದಾಗುವುದಕ್ಕೆ ಬಳಸಬೇಕು. ಹೀಗೆ ಮಾಡಿ ನೀವೂ ಅನೇಕರಿಗೆ ಸ್ಫೂರ್ತಿಯಾಗಿ,' ಎಂದು ರಶ್ಮಿಕಾ ಬರೆದಿದ್ದಾರೆ.
ರಶ್ಮಿಕಾ ಮಾತುಗಳಿದೆ ನಟಿ ನಮ್ರತಾ ಶಿರೋಡ್ಕರ್, ಆನಂದ್ ಶರ್ಮಾ ಹಾಗೂ ಇನಿಕರೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸಾಥ್ ಕೊಟ್ಟಿದ್ದಾರೆ, ಮನದಾಳದ ಮಾತುಗಳನ್ನು ಒಪ್ಪಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.