Rashmika Mandanna in Pushpa: ಕನ್ನಡ ಗೊತ್ತಿದ್ದರೂ ಕನ್ನಡದಲ್ಲೇಕೆ ಡಬ್ ಮಾಡೋಲ್ಲ?

By Suvarna News  |  First Published Dec 11, 2021, 2:46 PM IST

ಜ್ಯೂನಿಯರ್ ಎನ್‌ಟಿಆರ್‌ ಜೊತೆ ರಶ್ಮಿಕಾ ಮಂದಣ್ಣನ ಹೋಲಿಸುತ್ತಿರುವ ನೆಟ್ಟಿಗರು. ಕನ್ನಡ ಗೊತ್ತಿದ್ದರೂ ಡಬ್ಬಿಂಗ್ ಆಯ್ಕೆ ಮಾಡಿಕೊಳ್ಳದ್ದಕ್ಕೆ ನಿರಾಶೆ. 
 


ಕಿರಿಕ್ ಪಾರ್ಟಿ (Kirik Party) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ (Rashmika Mandann) ಇದೀಗ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ. ನ್ಯಾಷನಲ್ ಕ್ರಶ್‌ ಸಾನ್ವಿ ಇದೀಗ ಬೋಲ್ಡ್‌ ಬೆಡಗಿ ಆಗಿದ್ದಾರೆ. ಹೆಚ್ಚಿನ ಪರ್ಫಾರ್ಮೆನ್ಸ್‌ (Performance Character) ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಒಂದೇ ರೀತಿ ಕಾಣಿಸಿಕೊಳ್ಳಬಾರದು ಎಂದು ಡೀ-ಗ್ಲಾಮರಸ್ (D- glamour) ಪಾತ್ರಗಳಿಗೂ ಸೈ ಎನ್ನುತ್ತಿದ್ದಾರೆ ಕೊಡಗಿನ ಬೆಡಗಿ. ಇಷ್ಟೆಲ್ಲಾ ಬ್ಯುಸಿಯಾಗಿರುವ ರಶ್ಮಿಕಾ ಮಾತೃಭಾಷೆಯನ್ನೇಕೆ ಇಷ್ಟು ಹೇಟ್ ಮಾಡೋದು? ಕಾಲ್ ಶೀಟ್ ಕೊಡಲು ಪುರೊಸುತ್ತಿಲ್ಲ ಓಕೆ. ಆದರೆ, ಡಬ್ಬಿಂಗ್ ಆದರೂ ಅವರೇ ಮಾಡಬಹುದು ಅಲ್ವಾ? 

ಸ್ಟೈಲ್ ಐಕಾನ್ ಅಲ್ಲು ಅರ್ಜುನ್‌ಗೆ (Allu Arjun) ಜೋಡಿಯಾಗಿ ನಟಿಸುತ್ತಿರುವ ಪುಷ್ಪಾ (Pushpa) ಚಿತ್ರದಲ್ಲಿ ರಶ್ಮಿಕಾ (Rashmika Mandanna) ಸಖತ್ ಡಿ-ಗ್ಲಾಮ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡದಲ್ಲಿಯೂ ಸಿನಿಮಾ ತೆರೆ ಕಾಣುತ್ತಿದೆ. ಟ್ರೈಲರ್‌ (Trailer) ಮತ್ತು ಹಾಡುಗಳನ್ನು ಕನ್ನಡದಲ್ಲೂ ಬಿಡುಗಡೆ ಮಾಡಲಾಗಿದೆ. ಆದರೆ ರಶ್ಮಿಕಾ ಮಾತ್ರ ಕನ್ನಡ ಅವತರಣಿಕೆಗೆ ಡಬ್ ಮಾಡಿಲ್ಲ, ಎಂಬುದನ್ನು ನೆಟ್ಟಿಗರು ಗಮನಿಸಿದ್ದಾರೆ. 

Item Song: ಪುಷ್ಪ ಚಿತ್ರದ ಸ್ಪೆಷಲ್ ಹಾಡಿಗೆ ಹಾಟ್ ಆಗಿ ಸೊಂಟ ಬಳುಕಿಸಿದ ಸಮಂತಾ

Latest Videos

undefined

ಇತ್ತೀಚಿಗೆ ರಾಜಮೌಳಿ (SS Rajamouli) ನಿರ್ದೇಶನದ ಆರ್‌ಆರ್‌ಆರ್‌ (RRR) ಸಿನಿಮಾದ ಟ್ರೈಲರ್‌ ರಿಲೀಸ್ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಚಿತ್ರದ ಮೇಕಿಂಗ್‌ನ ಟ್ರೈಲರ್‌ನಲ್ಲಿ ನೋಡಿ ಸಿನಿ ರಸಿಕರು ಫಿದಾ ಆಗಿದ್ದಾರೆ. ಈ ಚಿತ್ರ ಕೂಡ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಲದಲ್ಲಿ ಬಿಡುಗಡೆ ಆಗುತ್ತಿದೆ. ಚಿತ್ರದ ಕನ್ನಡ ಅವತರಣಿಕೆಗೆ ನಟ ಜ್ಯೂನಿಯರ್ ಎನ್‌ಟಿಆರ್‌ (Junior NTR) ಮತ್ತು ರಾಮ್ ಚರಣ್ (Ram Charan) ಅವರೇ ಡಬ್ ಮಾಡಿದ್ದಾರೆ. ಇವರಿಬ್ಬರು ಧ್ವನಿ ಕೇಳಿ ಕನ್ನಡಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೆ ಆರ್‌ಆರ್‌ಆರ್‌ ಮತ್ತು ಪುಷ್ಪ ಸಿನಿಮಾವನ್ನು ಹೋಲಿಸಿದ್ದಾರೆ.

ಜ್ಯೂನಿಯರ್ ಎನ್‌ಟಿಆರ್‌ ಹುಟ್ಟಿ ಬೆಳೆದದ್ದು ಹೈದರಾಬಾದ್‌ನಲ್ಲಿ (Hyderabad). ಆದರೂ ತಾಯಿ ಶಾಲಿನಿ ಅವರು ಕುಂದಾಪುರದವರು (Kundapura). ಕರ್ನಾಟಕಕ್ಕೆ ಅಥವಾ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗಿಯಾದಾಗ, ಜ್ಯೂನಿಯರ್ ಕನ್ನಡದಲ್ಲಿಯೇ ಮಾತನಾಡುವ ಅವಕಾಶ ಮಿಸ್ ಮಾಡಿಕೊಳ್ಳುವುದಿಲ್ಲ. ಇನ್ನು ತಮ್ಮ ಕೋಟಿ ಬಜೆಟ್ ಸಿನಿಮಾ ಕನ್ನಡದಲ್ಲಿ ಬಿಡುಗಡೆ ಆಗುತ್ತಿದೆ ಅಂದ್ರೆ ಸುಮ್ಮನೇನಾ? ತಮ್ಮ ಧ್ವನಿಯೇ ಇರಲಿದೆ ಎಂದರಂತೆ.  ಕನ್ನಡದ ಬಗ್ಗೆ ಅಷ್ಟು ಪ್ರೀತಿ, ವಿಶ್ವಾಸ ಹೊಂದಿರುವ ಜೂನಿಯರ್‌ನ ನೋಡಿ ಖುಷಿ ಪಡೆಬೇಕಾ? ಅಥವಾ ಕರ್ನಾಟಕದ ಶೂರರ ನಾಡು ಕೊಡಗಿನಲ್ಲಿ ಹುಟ್ಟಿ ಬೆಳೆದು, ಈಗ ಪಕ್ಕದ ರಾಜ್ಯಕ್ಕೆ ಕಾಲಿಟ್ಟಿರುವ ಕನ್ನಡತಿಯನ್ನು ನೋಡಿ ಬೇಸರ ಮಾಡಿಕೊಳ್ಳಬೇಕೋ ಗೊತ್ತಿಲ್ಲ. ಪುಷ್ಮಾ ಕನ್ನಡ ಅವತರಣಿಕೆಗೆ ಡಬ್ ಮಾಡುವ ಅವಕಾಶ ಇದ್ದರೂ, ನಿರಾಕರಿಸಿರುವ ರಶ್ಮಿಕಾ ವಿರುದ್ಧ ನೆಟ್ಟಿಗರು (Netizens) ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. 

Rashmika Mandanna: ಸ್ಟೈಲಿಷ್ ಸ್ಟಾರ್‌ಗೆ ಲವ್ಲೀ ಗಿಫ್ಟ್ ಕೊಟ್ಟ ರಶ್ಮಿಕಾ, ಉಡುಗೊರೆ ಹಿಂದಿನ ಕಾರಣವಿದು

ಬೆಂಗಳೂರಿನಲ್ಲಿ (Bengaluru) ಆರ್‌ಆರ್‌ಆರ್‌ ಪ್ರೆಸ್‌ಮೀಟ್‌ ನಡೆಯಿತು. ಈ ವೇಳೆ ಪತ್ರಕರ್ತರು (Journalist) ಕೇಳಿದ ಪ್ರಶ್ನೆಗೆ ಕನ್ನಡದಲ್ಲಿಯೇ ಉತ್ತರ ನೀಡಿದ್ದಾರೆ ರಾಮ್‌ಚರಣ್. ಅಪ್ಪು ನೆನಪಿಗೆಂದು ಕನ್ನಡದಲ್ಲಿಯೇ ಹಾಡು ಹಾಡಿದ್ದಾರೆ. ಪುನೀತ್ (Puneeth Rajkumar) ನಟನೆಯ ಚಕ್ರವ್ಯೂಹ (Chakravyuha) ಸಿನಿಮಾದಲ್ಲಿ ಜ್ಯೂನಿಯರ್ ಗೆಳೆಯಾ ಗೆಳೆಯಾ ಸಿನಿಮಾಗೆ ಹಾಡು ಹಾಡಿದ್ದರು. ಹಾಡು ರೆಕಾರ್ಡಿಂಗ್ ಸಮಯದಲ್ಲಿಯೂ ಜ್ಯೂನಿಯರ್ ಬೆಂಗಳೂರಿಗೆ ಆಗಮಿಸಿದ್ದಾಗ ಪುನೀತ್ ಟ್ಟೀಟ್ ಮಾಡಿದ್ದರು. ಪ್ರೆಸ್‌ಮೀಟ್ (Pressmeet) ಕಾರ್ಯಕ್ರಮದಲ್ಲೂ ಈ ಹಾಡನ್ನು ಹಾಡಿ ತಮ್ಮ ತಾಯಿ ಕುಂದಾಪುರದವರು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಲ್ಲದೇ ಬಾಲಿವುಡ್ ಸುಂದರಿ ಆಲಿಯಾ ಭಟ್‌ಗೆ (Alia Bhat) ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿಯೇ ಹೇಳಿ ಕೊಟ್ಟು ಹುರಿದುಂಬಿಸಿದರು.

ಯಜಮಾನ (Yajamana) ಸಿನಿಮಾ ನಂತರ ರಶ್ಮಿಕಾ ಯಾವ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಕಥೆ ಹೇಳುತ್ತಿದ್ದಾರಾ, ಒಪ್ಪಿಕೊಳ್ಳುವ ನಿರ್ಧಾರ ಮಾಡಿದ್ದಾರಾ ಎಂದು ಗೊತ್ತಿಲ್ಲ....ಕನ್ನಡದಲ್ಲಿ ನಟಿಸಲು ವರ್ಷದ 365 ದಿನ ಸಾಕಾಗುವುದಿಲ್ಲವೆಂದ ರಶ್ಮಿಕಾ ಮಾರ್ಮಿಕವಾಗಿ ಹೇಳಿದ್ದು, ಕನ್ನಡಿಗರಿಗೆ ಆಕ್ರೋಶ ತಂದಿತ್ತು.

click me!