Asianet Suvarna News Asianet Suvarna News

Item Song: ಪುಷ್ಪ ಚಿತ್ರದ ಸ್ಪೆಷಲ್ ಹಾಡಿಗೆ ಹಾಟ್ ಆಗಿ ಸೊಂಟ ಬಳುಕಿಸಿದ ಸಮಂತಾ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಚಿತ್ರ 'ಪುಷ್ಪ' ಚಿತ್ರದ ಒಂದೊಂದು ಸುದ್ದಿಗಳು ಅಭಿಮಾನಿಗಳ ಕಾತುರವನ್ನು ಕ್ಷಣ ಕ್ಷಣಕ್ಕೂ ಹೆಚ್ಚಿಸುತ್ತಿದೆ. ಇದೇ ಡಿಸೆಂಬರ್ 17 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಐಟಂ ಸಾಂಗ್ ಇಂದು ಬಿಡುಗಡೆಯಾಗಿದೆ. 

Allu Arjun Samantha Starring Pushpa Movie Oo Antava Item Song out gvd
Author
Bangalore, First Published Dec 10, 2021, 8:58 PM IST

'ಅಲಾ ವೈಕುಂಠಪುರಮುಲೋ' ಚಿತ್ರದ ನಂತರ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರ ಬಹುನಿರೀಕ್ಷಿತ ಚಿತ್ರ 'ಪುಷ್ಪ: ದಿ ರೈಸ್' (Pushpa: The Rise) ಚಿತ್ರದ ಒಂದೊಂದು ಸುದ್ದಿಗಳು ಅಭಿಮಾನಿಗಳ ಕಾತುರವನ್ನು ಕ್ಷಣ ಕ್ಷಣಕ್ಕೂ ಹೆಚ್ಚಿಸುತ್ತಿದೆ. ಇದೇ ಡಿಸೆಂಬರ್ 17 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಐಟಂ ಸಾಂಗ್ ಇಂದು ಬಿಡುಗಡೆಯಾಗಿದೆ. ಅದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ 'ಊ ಅಂತಾವಾ ಮಾವಾ.. ಊಊ ಅಂತಾವಾ ಮಾವಾ' (Oo Antava..Oo Oo Antava) ಎಂಬ ಸಾಲಿನ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ಮುನ್ನುಗುತ್ತಿದೆ.

ಈ  ಐಟಂ ಸಾಂಗ್​ಗೆ ಸಿನಿಮಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಟಾಲಿವುಡ್ ನಟಿ ಸಮಂತಾ (Samantha) ನೀಲಿ ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ವಿಶೇಷವಾಗಿ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ನಲ್ಲಿ ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಿದ್ದಾರೆ. ಈ ಪೆಪ್ಪಿ ಹಾಡಿಗೆ ಬಾಲಿವುಡ್‌ನ ಹೆಸರಾಂತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ (Ganesh Acharya) ನೃತ್ಯ ಸಂಯೋಜಿಸಿದ್ದಾರೆ. ಇಂದ್ರಾವತಿ ಚೌಹಾಣ್ (Indravathi Chauhan) ದನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಚಂದ್ರಬೋಸ್ (Chandrabose) ಸಾಹಿತ್ಯ ಬರೆದಿದ್ದಾರೆ. ದೇವಿ ಶ್ರೀ ಪ್ರಸಾದ್‌ (Devi Sri Prasad) ಸಂಗೀತದ ಕಿಕ್ ಈ ಪೆಪ್ಪಿ ಹಾಡಿಗಿದೆ.

Pushpa Movie: ಚಿತ್ರತಂಡಕ್ಕೆ ಭರ್ಜರಿ ಗಿಫ್ಟ್‌ ನೀಡಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್

ಮುಖ್ಯವಾಗಿ ಸಮಂತಾ ಅವರು ವಿಚ್ಛೇದನ ಪಡೆದ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿರುವ ಅವರು ಸಿನಿಮಾಗಳ ಆಯ್ಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದು, 'ಪುಷ್ಪ' ಸಿನಿಮಾದ ಐಟಂ ಸಾಂಗ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಚಿತ್ರತಂಡದಿಂದಾಗಲೀ ಸಮಂತಾ ಕಡೆಯಿಂದಾಗಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಚಿತ್ರದ ಟ್ರೇಲರ್‌ಗೆ ಈಗಾಗಲೇ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು, ಇದರಿಂದ ಖುಷಿಯಾಗಿರೋ ಅಲ್ಲು ಅರ್ಜುನ್‌ ಚಿತ್ರತಂಡಕ್ಕೆ ಭರ್ಜರಿ ಉಡುಗೊರೆಯನ್ನು ಸಹ ನೀಡಿದ್ದಾರೆ.

"

ಅಲ್ಲು ಅರ್ಜುನ್ 'ಪುಷ್ಪ' ಚಿತ್ರದ ಕೋರ್‌ ಟೀಂನಲ್ಲಿದ್ದ 40 ಜನರಿಗೆ ತಲಾ ಒಂದು ತೊಲೆ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ಇದೇ ವೇಳೆ ಚಿತ್ರದ ಪ್ರೊಡಕ್ಷನ್‌ ತಂಡದಲ್ಲಿ ಕೆಲಸ ಮಾಡಿದವರಿಗೆ ಒಟ್ಟು 10 ಲಕ್ಷ ರೂಪಾಯಿಗಳನ್ನು ನೀಡಿ ಚಿತ್ರದ ಶೂಟಿಂಗ್‌ಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಶ್ರೀವಲ್ಲಿಯಾಗಿ ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ (Rashmika Mandanna) ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಿದ್ದಾರೆ. 

Pushpa Movie: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರದ ಟ್ರೇಲರ್ ರಿಲೀಸ್

ಇನ್ನು ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ರ ಗೆಟಪ್ ಬಾಡಿ ಲಾಂಗ್ವೇಜ್ ನೋಡಿದರೆ ನೈಜ ಲಾರಿ ಡ್ರೈವರ್‌ನಂತೆ ಕಂಡುಬರುತ್ತಿದ್ದು, ಪ್ರತಿಯೊಂದು ಪಾತ್ರದ ಲುಕ್ ಕೂಡ ವಿಭಿನ್ನವಾಗಿ  ಮೂಡಿ ಬಂದಿದೆ. ಕನ್ನಡ ಡಾಲಿ ಧನಂಜಯ್ (Dolly Dhananjay) 'ಜಾಲಿ' ಹೆಸರಿನ ಪಾತ್ರ ನಿರ್ವಹಿಸಿದ್ದಾರೆ. ಇನ್ನೂ ಮಂಗಲಮ್ ಶ್ರೀನು ಹೆಸರಿನ ಪಾತ್ರದಲ್ಲಿ ನಟ ಸುನೀಲ್ (Sunil) ಕಾಣಿಸಿಕೊಳ್ಳುತ್ತಿದ್ದಾರೆ. ದಾಕ್ಷಾಯಿಣಿ ಪಾತ್ರದಲ್ಲಿ ಅನಸೂಯ ಭಾರಧ್ವಾಜ್ (Anasuya Bharadwaj) ಅಭಿನಯಿಸುತ್ತಿದ್ದು, ಮಲಯಾಳಂ ನಟ ಫಾಹದ್ ಫಾಸಿಲ್ (Fahadh Faasil) ಮುಖ್ಯ ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಡಿಸೆಂಬರ್ 17 ರಂದು ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ 'ಪುಷ್ಪ' ತೆರೆಗೆ ಬರಲಿದೆ.
 

Follow Us:
Download App:
  • android
  • ios