ಜೋಗಿ ಪ್ರೇಮ್ ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ ಅಭಿನಯದ 'ಏಕ್ ಲವ್ ಯಾ' ಚಿತ್ರದ 'ಒಂದು ಊರಲ್ಲಿ' ಎಂಬ ಹಾಡನ್ನು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಚಿತ್ರತಂಡ ಬಿಡುಗಡೆ ಮಾಡಿದೆ.
ಜೋಗಿ ಪ್ರೇಮ್ (Jogi Prem) ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ (Rakshita) ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ (Raanna) ಅಭಿನಯದ 'ಏಕ್ ಲವ್ ಯಾ' (Ek LOve Ya) ಚಿತ್ರದ 'ಒಂದು ಊರಲ್ಲಿ' (Ondu Oorali) ಎಂಬ ಹಾಡನ್ನು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡಿಗೆ ಚಿತ್ರದ ನಾಯಕ ರಾಣಾ ತನ್ನ ಪ್ರೇಯಸಿಯ ನೆನಪಿನ ಗುಂಗಿನಲ್ಲಿ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಜೊತೆಗೆ ಚಿತ್ರದ ನಾಯಕಿಯರಾದ ರಚಿತಾ ರಾಮ್ ಹಾಗೂ ಗ್ರೀಷ್ಮಾ ನಾಣಯ್ಯ ಹಾಡಿನ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಹಾಡಿನಲ್ಲಿ ಅನಿತಾ ಯಾರು ಎಂಬ ಪ್ರಶ್ನೆಯನ್ನು ನಿರ್ದೇಶಕ ಜೋಗಿ ಪ್ರೇಮ್ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ.
'ಒಂದು ಊರಲ್ಲಿ ಕೊನೆ ಬೀದಿಲಿ ಇದ್ಲು ಒಬ್ಬಳು ಮುದ್ದು ದೇವತೆ' ಎಂಬ ಹಾಡಿನ ಸಾಲಿಗೆ ಶರಣಕುಮಾರ್ ಗಜೇಂದ್ರಗಡ (Sharanakumar Gajendragada) ಸಾಹಿತ್ಯ ರಚಿಸಿದ್ದು, ಜನಪ್ರಿಯ ಗಾಯಕ ಶಂಕರ್ ಮಹಾದೇವನ್ (shankar mahadevan) ಈ ಹಾಡಿಗೆ ದನಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ (Arjun Janya) ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ. ಈ ಹಾಡಿನ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ನೀವು ನಿಜವಾದ ಪ್ರೇಮಿಯೇ? ಹಾಗಾದರೆ ಈ ಹಾಡು ನಿಮ್ಮ ಹೃದಯವನ್ನು ಕದಿಯುತ್ತದೆ, 'ಅನಿತಾ ಅನಿತಾ' ಸಾಂಗ್ ಬಿಡುಗಡೆಯಾಗಿದೆ. ಈ ಹಾಡಿಗೆ ನಿಮ್ಮ ಬೆಂಬಲವಿರಲಿ ಎಂದು ಪೋಸ್ಟ್ ಮಾಡಿದ್ದಾರೆ.
Ek Love Ya: ಅನಿತಾ ಹಾಡಿನ ಬಗ್ಗೆ 'ದೇವರೊಬ್ಬ ಬಿಸಿನೆಸ್‌ಮ್ಯಾನ್ ಕಣೋ' ಎಂದ ಜೋಗಿ ಪ್ರೇಮ್
ನಿರ್ದೇಶಕ ಜೋಗಿ ಪ್ರೇಮ್ ಇತ್ತೀಚೆಗೆ 'ಗಂಡು ಮೆಟ್ಟಿದ ನಾಡು ಹುಬ್ಬಳ್ಯಾಗ ನಮ್ 'ಏಕ್ ಲವ್ ಯಾ' ನ 4ನೇ ಸಾಂಗ್ ರಿಲೀಸ್ ಮಾಡಕ್ ಡಿಸೆಂಬರ್ 11 ರಂದು ಬರ್ತಾಯಿದೀವ್ರಿ ಯಪ್ಪಾ. 11 ಗಂಟೆಗೆ ಎ2 ಮ್ಯೂಸಿಕ್‌ನಲ್ಲಿ. ನಿಮ್ಮ ಆಶೀರ್ವಾದ ಸದಾ ನಮ್ಯಾಲಿರ್ಲಿ ನಮಸ್ಕಾರ' ಎಂದು ಹುಬ್ಬಳ್ಳಿ ಭಾಷೆಯಲ್ಲಿ ಕ್ಯಾಪ್ಷನ್ ಬರೆದು 'ಅನಿತಾ ಅನಿತಾ' ಹಾಡಿನ ವಿಡಿಯೋ ಝಲಕ್‌ನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋದಲ್ಲಿ 'ಅನಿತಾ ಅನಿತಾ' ಸಾಂಗ್‌ನ್ನು ಗಾಯಕ ಶಂಕರ್ ಮಹಾದೇವನ್ ಹಾಡುತ್ತಿರುವುದರ ಜೊತೆಗೆ ಚಿತ್ರದ ನಾಯಕ ರಾಣಾನ ಜೊತೆಗೆ ಜೈಲಿನ ಖೈದಿಗಳು ಅವರ ಹಿಂದೆ ನಿಂತು ಈ ಹಾಡಿಗೆ ಸ್ಟೆಪ್ಸ್ ಹಾಕುತ್ತಿರುವುದನ್ನು ಕಾಣಬಹುದಾಗಿದೆ.
'ಏಕ್ ಲವ್ ಯಾ' ಚಿತ್ರದ 'ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಭಗವಂತ' ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ತೆಲುಗು ಗಾಯಕಿ ಮಂಗ್ಲಿ (Mangli) ಹಾಗೂ ಕೈಲಾಶ್ ಕೇರ್ (Kailash Kher) ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಈಗ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು 'ಏಕ್ ಲವ್ ಯಾ' ಚಿತ್ರದ ನಾಯಕ ಅಭಿಷೇಕ್ (ರಾಣಾ) (Abhishek) ರಕ್ಷಿತಾ ಸಹೋದರ. ಹಾಗಾಗಿ ಅಕ್ಕ-ಭಾವನ ಸಿನಿಮಾ ಬ್ಯಾನರ್‌ನಲ್ಲಿ ಲಾಂಚ್ ಆಗುತ್ತಿರುವ 'ಅಭಿರಾಣಾ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭಾಮೈದುನ ಸಿನಿಮಾಗೆ ಪ್ರೇಮ್ ವಿಭಿನ್ನ ಕಥೆ ಹೆಣೆದಿದ್ದಾರೆ.
Ek Love Ya: ಎಣ್ಣೆ, ಹೆಣ್ಣು, ಲವ್ ಸೆಕ್ಸಲ್ಲೇ ಮುಗಿದೋಯ್ತಲ್ಲಾ ಹಾಡು ರಿಲೀಸ್
ಈ ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ಹೊಸ ನಟಿ ಗ್ರೀಷ್ಮಾ ನಾಣಯ್ಯ (Grishma Nanayya) ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಲಿರಿಕಲ್ ವಿಡಿಯೋ ಹಾಗೂ ಹೀರೋ, ಹೀರೋಯಿನ್ ಲುಕ್ ರಿವೀಲ್ ಮಾಡಲಾಗಿದ್ದು, ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಸಿಗರೇಟು ಸೇದಿ, ಲಿಪ್ ಲಾಕ್ ಕೂಡ ಮಾಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಸಂಗೀತ ಈ ಚಿತ್ರಕ್ಕಿದೆ.