ಮದ್ವೆಯಾಗಿ 24 ವರ್ಷ ಆದ್ರೂ ಎಷ್ಟು ಲವ್ ಮಾಡ್ತಾರೆ ನೋಡಿ ಪ್ರೇಮ್ ಮತ್ತು ಜ್ಯೋತಿ. ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ....
ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ನೆನಪರಲಿ ಪ್ರೇಮ್ ಮತ್ತು ಪತ್ನಿ ಜ್ಯೋತಿ ಪ್ರೇಮ್ ಈಗ ಕಾಲದ ಪ್ರೇಮಿಗಳಿಗೆ ಬಿಗ್ ರೋಲ್ ಮಾಡಲ್. ಮದುವೆ ಆಗಿ 24 ವರ್ಷ ಆದರೂ ಇಬರಿಬ್ಬರ ನಡುವೆ ಇರುವ ಲವ್ ನೋಡಿ ಯಾರಿಗೆ ತಾನೆ ವಾವ್ ಅನಿಸಲ್ಲ ಹೇಳಿ? ಇಷ್ಟು ಲವ್ ಮಾಡುವ ಇವರಿಬ್ಬರ ವೀಕ್‌ನೆಸ್ ಏನು ಮತ್ತು ಸ್ಟ್ರೆಂಥ್ ಏನು ಎಂದು ಪ್ರಶ್ನೆ ಮಾಡಿದಾಗ ಕೊಟ್ಟರ ಉತ್ತವಿದು...
'ನನ್ನ ಹೆಂಡತಿ ಪೋಸೆಸಿವ್‌ನೆಸ್ ನನಗೆ ವೀಕ್‌ನೆಸ್ ಅನಿಸುತ್ತದೆ. ಅದೇ ಸ್ಟ್ರೆಂಥ್ ಅಂತಾನೂ ಅನಿಸಿದೆ. ಯಾವಾಗಲೂ ಜೊತೆಯಲಿ ಇರಬೇಕು ಅನ್ನೋದು ಅವಳು. ನಮ್ಮಿಬ್ಬರ ನಡುವೆ ಅವತೂ ಮಕ್ಕಳನ್ನು ಮಲಗುವುದಕ್ಕೆ ಬಿಟ್ಟಿಲ್ಲ ಇವತ್ತೂ ಬಿಟ್ಟಿಲ್ಲ. ತುಂಬಾ ಹಠ ಮಾಡಿದರೆ ಸ್ವಲ್ಪ ಹೊತ್ತು ಮಲಗಿಸಿಕೊಂಡು ನಿದ್ರೆ ಮಾಡಿದ ಮೇಲೆ ಪಕ್ಕಕ್ಕೆ ಮಲಗಿಸುತ್ತಿದ್ದಳು. ಮಕ್ಕಳು ನನ್ನ ಪಕ್ಕ ಇರಬೇಕು ಇಲ್ಲ ಅವಳ ಪಕ್ಕ ಇರಬೇಕು...ನಮ್ಮಿಬ್ಬರ ನಡುವೆ ಇರಬಾರದು.'ಎಂದು ಪ್ರೇಮ್ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಮುಖದಲ್ಲಿ ಮಹಾಲಕ್ಷ್ಮಿ ಕಳೆ; ನೆನಪಿರಲಿ ಪ್ರೇಮ್ ಪತ್ನಿ ಜ್ಯೋತಿ ಫೋಟೋಶೂಟ್ ವೈರಲ್!
'ನಮ್ಮಿಬ್ಬರ ನಡುವೆ ಯಾರೇ ಫ್ರೆಂಡ್ಸ್ ಬಂದ್ರೂ ಒಂದು ಹಂತಕ್ಕೆ ಸಹಿಸಿಕೊಳ್ಳುತ್ತಾಳೆ ಆಮೇಲೆ ಸಹಿಸಿಕೊಳ್ಳುವುದಿಲ್ಲ. ಅಷ್ಟೋಂದು ಪೊಸೆಸಿವ್‌ನೆಸ್ ಒಳ್ಳೆಯದಲ್ಲ ಅಂತ ಹೇಳುತ್ತಲೇ ಇರುತ್ತೀನಿ' ಎಂದು ಪ್ರೇಮ್ ಹೇಳಿದ್ದಾರೆ.
'ಪ್ರೇಮ್ ಅವರ ವೀಕ್‌ನೆಸ್‌ನೂ ಪಾಸಿಟಿವ್ ಆಗಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಅವರಲ್ಲಿ ಪಾಸಿಟಿವ್ ಜಾಸ್ತಿ. ಪ್ರೇಮ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನೇ ಇನ್ನು ಸಿಟ್ಟು ಮಾಡುಕೊಳ್ಳುತ್ತಿರುತ್ತೀನಿ' ಎಂದು ಜ್ಯೋತಿ ಹೇಳಿದ್ದಾರೆ.
Weekend With Ramesh: ವರಮಹಾಲಕ್ಷ್ಮಿ ಹಬ್ಬದಂದೇ ಪತ್ನಿಯ ತಾಳಿ ಮಾರಿದ್ದ ಪ್ರೇಮ್! ಕಣ್ಣೀರಾದ ನಟ
'ನನ್ನ ಮಗನ 18ನೇ ವರ್ಷದ ಹುಟ್ಟುಹಬ್ಬದ ದಿನ ದುಡಿಕಿ ಚೆನ್ನಾಗಿ ಅಮ್ಮ- ಮಗನಿಗೆ ಬೈದೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಇಬ್ಬರದ್ದೂ ತಪ್ಪಿಲ್ಲ ಅಂತ ಅರ್ಥ ಆಗಿ ಸಾರಿ ಕೇಳಿದ್ದೀನಿ. ಅಮ್ಮ ಮಕ್ಕಳು ಹೇಳಿ ಹೇಳಿ ಸಾರಿ ಥ್ಯಾಂಕ್ಸ್ ಹೇಳಿಸಿಕೊಳ್ಳುತ್ತಾರೆ. ನನ್ನ ಪತ್ನಿಗೆ ಒಂದು ವಿಚಾರಕ್ಕೆ ನಾನು ಥ್ಯಾಂಕ್ಸ್ ಹೇಳಲು ಆಗಲ್ಲ. ಆಕೆ ಮಾಡಿರುವ ಸಾಕಷ್ಟು ತ್ಯಾಗದ ಮುಂದೆ ನನ್ನ ಥ್ಯಾಂಕ್ಸ್ ಏನೂ ಇಲ್ಲ. ದಿನ ಬೆಳಗ್ಗೆ ನಾವು ಎದ್ದ ತಕ್ಷಣ ತಬ್ಬಿಕೊಂಡು ಮುತ್ತು ಕೊಟ್ಟು ಐ ಲವ್ ಯು ಹೇಳುತ್ತೀನಿ. ಎಲ್ಲರೂ ವರ್ಷಕ್ಕೆ ಒಮ್ಮೆ ಆಚರಿಸುತ್ತಾರೆ ಆದರೆ ನಾವು ಪ್ರತಿ ದಿನ ಆಚರಿಸುತ್ತೀನಿ. ನೇರವಾಗಿ ಇಲ್ಲವಾದರೂ ನಾವಿಬ್ಬರು ಮೆಸೇಜ್ ಮೂಲಕ ಆದ್ರೂ ಹೇಳಿಕೊಳ್ಳುತ್ತೀವಿ' ಎಂದಿದ್ದಾರೆ ಪ್ರೇಮ್.